ಕರ್ನಾಟಕ

karnataka

ETV Bharat / bharat

Omicron variant: ಮೋದಿ ಅಧ್ಯಕ್ಷತೆಯಲ್ಲಿ ಉನ್ನತ ಮಟ್ಟದ ಸಭೆ, ಕೆಲ ದೇಶಗಳ ಮೇಲೆ ನಿಗಾ ಇಡಲು ಸೂಚನೆ - PM Modi chaired a high-level meeting

ರೂಪಾಂತರ ಓಮಿಕ್ರೋನ್​ ಸೋಂಕು ದಕ್ಷಿಣ ಆಫ್ರಿಕಾದಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ ಇತ್ತ ಭಾರತ ಸರ್ಕಾರ ಎಚ್ಚೆತ್ತುಕೊಂಡಿದೆ. ಈ ನಿಟ್ಟಿನಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಉನ್ನತ ಮಟ್ಟದ ಸಭೆಯಲ್ಲಿ ಇಂದು ಕೆಲವೊಂದು ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.

PM briefed on Omicron
PM briefed on Omicron

By

Published : Nov 27, 2021, 5:31 PM IST

ನವದೆಹಲಿ:ದಕ್ಷಿಣ ಆಫ್ರಿಕಾದಲ್ಲಿ ಹೊಸ ರೂಪಾಂತರ ಕೊರೊನಾ ತಳಿ 'ಓಮಿಕ್ರೋನ್​​' ಪತ್ತೆಯಾಗಿರುವುದು ಭಾರತ ಸೇರಿದಂತೆ ಅನೇಕ ದೇಶಗಳ ನಿದ್ದೆಗೆಡಿಸಿದೆ. ಇದೇ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಅಧ್ಯಕ್ಷತೆಯಲ್ಲಿಂದು ಮಹತ್ವದ ಸಭೆ ನಡೆಯಿತು. ಈ ವೇಳೆ ಲಸಿಕೆ ಅಭಿಯಾನ ಹಾಗೂ ಹೊಸ ತಳಿ ಕುರಿತಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಬಗ್ಗೆ ಸುದೀರ್ಘ ಚರ್ಚೆ ನಡೆಸಲಾಯಿತು.

ದೆಹಲಿಯಲ್ಲಿ ನಡೆದ ಸಭೆಯಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಗಿಯಾದ ಪ್ರಧಾನಿ ನರೇಂದ್ರ ಮೋದಿ ಎರಡು ಗಂಟೆಗಳ ಕಾಲ ಚರ್ಚೆ ನಡೆಸಿದ್ದು, ಹೊಸ ರೂಪಾಂತರಿ ಬಗ್ಗೆ ಮಾಹಿತಿ ಪಡೆದುಕೊಂಡರು. ಇದರ ಬೆನ್ನಲ್ಲೇ ಕೇಂದ್ರ ನಾಗರಿಕ ವಿಮಾನಯಾನ ಇಲಾಖೆ ಈಗಾಗಲೇ ವಿದೇಶಿ ಪ್ರಯಾಣಿಕರಿಗೆ ನೀಡಿರುವ ಸಡಲಿಕೆ ಬಗ್ಗೆ ಮತ್ತೊಂದು ಸಲ ಮರುಪರಿಶೀಲನೆ ನಡೆಸುವಂತೆ ಸೂಚನೆ ನೀಡಲಾಗಿದೆ ಎಂದು ಪ್ರಧಾನಿ ಕಚೇರಿ ಮಾಹಿತಿ ನೀಡಿದೆ.

ಹೊಸ ರೂಪಾಂತರಿ ತಡೆಗಟ್ಟಲು ಪೂರ್ವಭಾವಿಯಾಗಿ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳ ಬಗ್ಗೆ ನಮೋ ಮಾತನಾಡಿದ್ದು, ಹೊಸ ಸೋಂಕು ಗಮನದಲ್ಲಿಟ್ಟುಕೊಂಡು ಜನರು ಮತ್ತಷ್ಟು ಜಾಗರೂಕರಾಗುವಂತೆ ಸೂಚನೆ ನೀಡುವಂತೆ ತಿಳಿಸಿದ್ದಾರೆ. ಮಾಸ್ಕ್​, ಸಾಮಾಜಿಕ ಅಂತರ ಹಾಗೂ ಕೋವಿಡ್​ ಮಾರ್ಗಸೂಚಿ ಪಾಲಿಸುವಂತೆ ಮನವಿ ಮಾಡಿದ್ದಾರೆ.

ಇದನ್ನೂ ಓದಿರಿ:ನ. 29ರಂದು ಟ್ರ್ಯಾಕ್ಟರ್ ರ್‍ಯಾಲಿ ನಡೆಸದಿರಲು ಕಿಸಾನ್​ ಯೂನಿಯನ್​​ ನಿರ್ಧಾರ.. ಕೇಂದ್ರಕ್ಕೆ ಡಿ.4ರ ಗಡುವು

ಸಭೆಯಲ್ಲಿ ಭಾಗಿಯಾಗಿದ್ದ ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ಕೊರೊನಾ ವೈರಸ್ ಬಗ್ಗೆ ಮಾಹಿತಿ ನೀಡಿದ್ದು, ದಕ್ಷಿಣ ಆಫ್ರಿಕಾ, ಬೋಟ್ಸವನಾದಲ್ಲಿ ಪತ್ತೆಯಾಗಿರುವ ರೂಪಾಂತರಿ ಬಗ್ಗೆ ಮಾಹಿತಿ ನೀಡಿದ್ದು, ಇದರಿಂದ ಭಾರತಕ್ಕಿರುವ ಅಪಾಯದ ಬಗ್ಗೆ ನಮೋ ಮಾಹಿತಿ ಪಡೆದುಕೊಂಡರು. ಹೊಸ ಸೋಂಕಿನಿಂದ ಈಗಾಗಲೇ ಅಪಾಯದಲ್ಲಿರುವ ದೇಶಗಳ ಮೇಲೆ ಹದ್ದಿನ ಕಣ್ಣಿಡಲು ಕೇಂದ್ರ ಆರೋಗ್ಯ ಇಲಾಖೆಗೆ ಸೂಚಿಸಿರುವ ನಮೋ, ಅಲ್ಲಿಂದ ಆಗಮಿಸುವ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ಇಡುವಂತೆ ಸೂಚಿಸಿದ್ದಾರೆ.

ಸಭೆಯಲ್ಲಿ ಕ್ಯಾಬಿನೆಟ್​ ಕಾರ್ಯದರ್ಶಿ ರಾಜೀವ್​ ಗೌಬಾ, ಆರೋಗ್ಯ ಇಲಾಖೆ ಕಾರ್ಯದರ್ಶಿ ರಾಜೇಶ್ ಭೂಷಣ್ ಮತ್ತು ನೀತಿ ಆಯೋಗದ ಸದಸ್ಯರಾದ ಡಾ. ವಿ.ಕೆ ಪಾಲ್​ ಸೇರಿ ಪ್ರಮುಖ ಅಧಿಕಾರಿಗಳು ಉಪಸ್ಥಿತರಿದ್ದರು.

ನಮೋ ಸಭೆಯಲ್ಲಿ ತೆಗೆದುಕೊಂಡಿರುವ ಮಹತ್ವದ ನಿರ್ಣಯಗಳು

  • ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ನೀಡಿರುವ ಸಡಿಲಿಕೆ ಮತ್ತೊಮ್ಮೆ ಪರಾಮರ್ಶೆಗೆ ಸೂಚನೆ
  • ಹೊಸ ಸೋಂಕಿನಿಂದ ಅಪಾಯದಲ್ಲಿರುವ ದೇಶಗಳ ಮೇಲೆ ಹೆಚ್ಚಿನ ನಿಗಾ
  • ಅಂತಾರಾಷ್ಟ್ರೀಯ ಪ್ರಯಾಣಿಕರ ಮೇಲೆ ಹದ್ದಿನ ಕಣ್ಣು, ಪರೀಕ್ಷೆಗೊಳಪಡಿಸಲು ಸೂಚನೆ
  • ರಾಜ್ಯ ಸರ್ಕಾರದೊಂದಿಗೆ ನಿಟಕ ಸಂಪರ್ಕ ಹಾಗೂ ಸರಿಯಾದ ಮಾಹಿತಿ ನೀಡುವುದು
  • ಎರಡನೇ ಡೋಸ್​ ಕೋವಿಡ್ ಲಸಿಕೆ ವೇಗ ಮತ್ತಷ್ಟು ಹೆಚ್ಚಿಸಲು ಸೂಚನೆ
  • ಮಾಸ್ಕ್​, ಸಾಮಾಜಿಕ ಅಂತರ ಹಾಗೂ ಕೋವಿಡ್​ ಮಾರ್ಗಸೂಚಿ ಪಾಲನೆ

ABOUT THE AUTHOR

...view details