ನವದೆಹಲಿ: ಹೊಸ ಕೋವಿಡ್ 19ರ ರೂಪಾಂತರಿ ವೈರಸ್ಗಳು ಹೊತ್ತು - ಗೊತ್ತಿಲ್ಲದೇ ಯಾವುದೇ ಸ್ಥಳ ಇರಲಿ, ಯಾವುದೇ ಪ್ರದೇಶ ಇರಲಿ ಅಷ್ಟೇ ಏಕೆ ಯಾವುದೇ ಸಮಯದಲ್ಲಿ ಮನುಷ್ಯನ ದೇಹವನ್ನು ಹೊಕ್ಕು ಹೈರಾಣು ಮಾಡಬಹುದು ಎಂದು ಕೇಂದ್ರ ಸರ್ಕಾರ ಸಾರ್ವಜನಿಕರಿಗೆ ಎಚ್ಚರಿಕೆ ರವಾನಿಸಿದೆ.
ಕೋವಿಡ್ ರೂಪಾಂತರಿಗಳಾದ ಆಲ್ಫಾ, ಬೇಟಾ, ಗಾಮಾ, ಡೆಲ್ಟಾ ಮತ್ತು ಡೆಲ್ಟಾ ಪ್ಲಸ್ ತಳಿಯ ವೈರಾಣುಗಳ ಬಗ್ಗೆ ಕೇಂದ್ರ ಸರ್ಕಾರ ತೀವ್ರ ನಿಗಾ ಇಟ್ಟಿದೆ. ಈ ಬಗ್ಗೆ ಮಾತನಾಡಿರುವ ರೋಗಗಳ ರಾಷ್ಟ್ರೀಯ ನಿಯಂತ್ರಣ ಕೇಂದ್ರದ ನಿರ್ದೇಶಕ ಡಾ ಎಸ್ ಕೆ ಸಿಂಗ್, ರೂಪಾಂತರಿಗಳ ಬಗ್ಗೆ ಎಚ್ಚರಿಕೆಯಿಂದ ಇರುವಂತೆ ಸಲಹೆ ನೀಡಿದ್ದಾರೆ. ಅದರಲ್ಲೂ ಕಪ್ಪ, B1617.3 ರೂಪಾಂತರಿ ತಳಿಗಳು ಭಾರಿ ಅಪಾಯಕಾರಿ ಆಗಿದ್ದು, ಈ ಬಗ್ಗೆ ಸಂಶೋಧನೆ ಹಾಗೂ ನಿಗಾ ಇಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.