ಕರ್ನಾಟಕ

karnataka

ETV Bharat / bharat

ಮಾನ್​ ಕ್ಯಾಬಿನೆಟ್​​ನಲ್ಲಿ ಇಬ್ಬರು ಡಾಕ್ಟರ್​​, ಮೂವರು ಹಿಂದೂ.. 8 ಮಂದಿ ಶಾಸಕರಿಗೆ ಮೊದಲ ಸಲವೇ ಬಂಪರ್​!

New cabinet in Punjab: ಪಂಜಾಬ್​ನಲ್ಲಿ ರಚನೆಯಾಗಿರುವ ಸಚಿವ ಸಂಪುಟದಲ್ಲಿ ಏಕೈಕ ಮಹಿಳಾ ಶಾಸಕಿಗೆ ಮಣೆ ಹಾಕಲಾಗಿದ್ದು, ಉಳಿದಂತೆ ಎಂಟು ಸಚಿವರು ಮೊದಲ ಸಲ ಶಾಸಕರಾಗಿ ಆಯ್ಕೆಯಾದವರಾಗಿದ್ದಾರೆ.

New cabinet in Punjab
New cabinet in Punjab

By

Published : Mar 19, 2022, 10:39 PM IST

ಚಂಡೀಗಢ(ಪಂಜಾಬ್​​):ಭಗವಂತ್ ಮಾನ್​ ಸಿಂಗ್ ನೇತೃತ್ವದ ಪಂಜಾಬ್​ ಸಚಿವ ಸಂಪುಟ ಶನಿವಾರ ರಚನೆಯಾಗಿದ್ದು, 10 ಶಾಸಕರು ಸಚಿವರಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಈ ಪೈಕಿ 8 ಮಂದಿ ಮೊದಲ ಬಾರಿಗೆ ಶಾಸಕರಾದವರಿಗೆ ಸಿಎಂ ಮಾನ್​ ಬಂಪರ್ ಆಫರ್​ ನೀಡಿದ್ದಾರೆ. ಈ 8 ಮಂದಿಗೆ ಸಚಿವ ಸ್ಥಾನ ನೀಡಲಾಗಿದೆ.

ಪಂಜಾಬ್ ನೂತನ ಕ್ಯಾಬಿನೆಟ್​​ನಲ್ಲಿ ನಾಲ್ವರು ಜಾಟ್​​ ಸಿಖ್ಖರು​ ಇದ್ದು, ಮೂವರು ಹಿಂದೂಗಳು, ಸಿಎಂ ಸೇರಿದಂತೆ ನಾಲ್ವರು ದಲಿತರು ಇದ್ದಾರೆ. ವಿಶೇಷವೆಂದರೆ ಇಬ್ಬರು ವೈದ್ಯರು ಹಾಗೂ ಓರ್ವ ನಿವೃತ್ತ ಅಧಿಕಾರಿ ಕೂಡ ಸಚಿವ ಸ್ಥಾನ ಪಡೆದಿದ್ದಾರೆ. ಪಂಜಾಬ್​ ಸಂಪುಟದಲ್ಲಿ ಏಕೈಕ ಮಹಿಳೆಗೆ ಸಚಿವ ಸ್ಥಾನ ಒಲಿದಿದ್ದು, ಡಾ. ಬಲ್ಜಿತ್​ ಕೌರ್​ಗೆ ಮಣೆ ಹಾಕಲಾಗಿದೆ. ಇವರು ವೃತ್ತಿಯಲ್ಲಿ ವೈದ್ಯೆಯಾಗಿದ್ದು, ಕಳೆದ 18 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡಿದ್ದಾರೆ.

ಇದನ್ನೂ ಓದಿ:ಪಂಜಾಬ್​​ ಅಡ್ವೊಕೇಟ್​ ಜನರಲ್​​ ಆಗಿ ಅನ್ಮೋಲ್​​ ಸಿಧು.. ವೇತನ ಮಾದಕ ವ್ಯಸನಿಗಳ ಚಿಕಿತ್ಸೆಗೆ ನೀಡಲು ನಿರ್ಧಾರ

ಭಗವಂತ್ ಮಾನ್​ ಕ್ಯಾಬಿನೆಟ್​ನಲ್ಲಿ ಹರ್ಪಲ್​ ಸಿಂಗ್​ ಚೀಮಾ, ಡಾ. ಬಲ್ಜಿತ್​​ ಕೌರ್​, ಹರ್ಭಜನ್​ ಸಿಂಗ್ ಇಟಿಒ, ಡಾ, ವಿಯಜ್​ ಸಿಂಗ್ಲಾ, ಗರ್ಮಿರ್​ ಸಿಂಗ್, ಹರ್ಜೋತ್​ ಸಿಂಗ್​, ಲಾಲ್​ ಚಂದ್​, ಕುಲ್​​ದೀಪ್ ಸಿಂಗ್ ಧಲಿವಾಲ್, ಲಾಲ್​ಜಿತ್ ಸಿಂಗ್ ಭುಲ್ಲಾರ್​, ಭ್ರಮ್​ ಶಂಕರ್ ಸಚಿವರಾಗಿ ಅಧಿಕಾರ ಸ್ವೀಕಾರ ಮಾಡಿದ್ದಾರೆ. ಉಳಿದಂತೆ ಇನ್ನೂ ಏಳು ಶಾಸಕರಿಗೆ ಸಚಿವಗಿರಿ ಸಿಗುವ ಸಾಧ್ಯತೆ ಇದೆ.

ಪಂಜಾಬ್​ ಕ್ಯಾಬಿನೆಟ್​​ನಲ್ಲಿ ಇಬ್ಬರು ಡಾಕ್ಟರ್​​, ಮೂವರು ಹಿಂದೂ, 8 ಸಚಿವರು ಮೊದಲ ಸಲ ಶಾಸಕರಾದವರು!

ನೂತನ ಸಚಿವರೊಂದಿಗೆ ಶನಿವಾರ ಚೊಚ್ಚಲ ಕ್ಯಾಬಿನೆಟ್ ಸಭೆ ನಡೆಸಿರುವ ಭಗವಂತ್ ಮಾನ್​, 25 ಸಾವಿರ ಸರ್ಕಾರಿ ಹುದ್ದೆ ಭರ್ತಿ ಮಾಡಿಕೊಳ್ಳುವ ಅನುಮೋದನೆಗೆ ಅಂಕಿತ ಹಾಕಿದ್ದಾರೆ. ಇದರ ಜೊತೆಗೆ ಪಂಜಾಬ್​​ ಅಡ್ವೊಕೇಟ್​ ಜನರಲ್​​ ಆಗಿ ಅನ್ಮೋಲ್​​ ಸಿಧು ಅವರನ್ನ ನೇಮಕ ಮಾಡಲಾಗಿದೆ.

ಪಂಜಾಬ್​ ವಿಧಾನಸಭೆ ಚುನಾವಣೆಯಲ್ಲಿ ಆಮ್​ ಆದ್ಮಿ ಪಕ್ಷ 92 ಸ್ಥಾನಗಳಲ್ಲಿ ಜಯ ಸಾಧಿಸಿದ್ದು, ಚೊಚ್ಚಲ ಸಲ ಪಂಜಾಬ್​ನಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ABOUT THE AUTHOR

...view details