ನವದೆಹಲಿ: ಪಂಜಾಬ್ನ ನೂತನ ಮುಖ್ಯಮಂತ್ರಿ ಭಗವಂತ್ ಮಾನ್ ಅವರನ್ನು ಅಭಿನಂದಿಸುವ ಭರದಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಎಡವಟ್ಟೊಂದು ಮಾಡಿದ್ದಾರೆ. ಮಾಫಿಯಾ ವಿರೋಧಿ ಆಡಳಿತಕ್ಕೆ ಮಾನ್ ಮುನ್ನುಡಿ ಬರೆಯುವ ಭರವಸೆ ಮೂಡಿಸಿದ್ದಾರೆ ಎನ್ನುವ ಸಿಧು ಅಭಿಪ್ರಾಯವು ಕಾಂಗ್ರೆಸ್ ಅನ್ನು ಇಕ್ಕಟ್ಟಿಗೆ ಸಿಲುಕಿಸುವುದರೊಂದಿಗೆ ಮುಜಗರಕ್ಕೂ ಈಡಾಗುವಂತೆ ಮಾಡಿದೆ.
ಆಡಳಿತದಲ್ಲಿ ಇದ್ದೂ ಚುನಾವಣೆಯಲ್ಲಿ ಕಾಂಗ್ರೆಸ್ ಸೋತ ಬೆನ್ನಲ್ಲೇ ನವಜೋತ್ ಸಿಂಗ್ ಸಿಧು, ಪಂಜಾಬ್ ಜನತೆ ಬದಲಾವಣೆ ಬಯಸಿದ್ದಾರೆ. ಹೀಗಾಗಿ ಆಮ್ ಆದ್ಮಿ ಪಕ್ಷವನ್ನು ಆಯ್ಕೆ ಮಾಡಿದ್ದಾರೆ ಎಂದು ಹೇಳಿದ್ದರು. ಈಗ ಭಗವಂತ್ ಮಾನ್ ಕುರಿತಂತೆ ಟ್ವೀಟ್ ಮಾಡಿ ತಮ್ಮದೇ ಪಕ್ಷದ ಕೆಂಗಣ್ಣಿಗೆ ಗುರಿಯಾಗುವಂತೆ ಮಾಡಿಕೊಂಡಿದ್ದಾರೆ.