ಕರ್ನಾಟಕ

karnataka

ETV Bharat / bharat

ಕೋವಿಡ್​ ಹೋರಾಟದಲ್ಲಿ 'ಹನುಮ ಪಡೆ'..100 ಮಂದಿ ತಂಡ ರಚಿಸಿ ನೆರವು - ಟೆಸ್ಟ್ ಕ್ರಿಕೆಟರ್ ಹನುಮ ವಿಹಾರಿ

ಟೀಂ ಇಂಡಿಯಾದ ಟೆಸ್ಟ್ ಪ್ಲೇಯರ್ ಹನುಮ ವಿಹಾರಿ ಕೋವಿಡ್ ವಿರುದ್ಧದ ಹೋರಾಟದಲ್ಲಿ ಕೈಜೋಡಿಸಿದ್ದು, ಇಂಗ್ಲೆಂಡ್​ನಲ್ಲಿದ್ದುಕೊಂಡು ಅವರು ಭಾರತೀಯರಿಗಾಗಿ ಕೆಲಸ ಮಾಡ್ತಿದ್ದಾರೆ.

Vihari
Vihari

By

Published : May 14, 2021, 3:34 PM IST

ನವದೆಹಲಿ: ದೇಶಾದ್ಯಂತ ಮಹಾಮಾರಿ ಕೊರೊನಾ ವೈರಸ್ ಹಾವಳಿ ಜೋರಾಗಿದ್ದು, ನಿತ್ಯ ಲಕ್ಷಾಂತರ ಸೋಂಕಿತ ಪ್ರಕರಣ ಹಾಗೂ ಸಾವಿರಾರು ಜನರು ತಮ್ಮ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಡೆಡ್ಲಿ ವೈರಸ್​ ವಿರುದ್ಧದ ಹೋರಾಟದಲ್ಲಿ ಈಗಾಗಲೇ ಅನೇಕರು ಕೈಜೋಡಿಸಿದ್ದು, ಸದ್ಯ ಟೀಂ ಇಂಡಿಯಾ ಟೆಸ್ಟ್​ ಪ್ಲೇಯರ್ ಹನುಮ ವಿಹಾರಿ ಕೂಡ ಇದರಲ್ಲಿ ಭಾಗಿಯಾಗಿದ್ದಾರೆ.

ಸದ್ಯ ಕೌಂಟಿ ಚಾಂಪಿಯನ್​ಷಿಪ್​ನಲ್ಲಿ ಕ್ರಿಕೆಟ್​ ಆಡಲು ಉದ್ದೇಶದಿಂದ ಇಂಗ್ಲೆಂಡ್​ನಲ್ಲಿರುವ ಹನುಮ ವಿಹಾರಿ ಅಲ್ಲಿಂದಲೇ ನೆರವಿಗೆ ಮನವಿ ಮಾಡ್ತಿದ್ದಾರೆ. ಇದರ ಜತೆಗೆ 100 ಮಂದಿ ತಂಡ ರಚನೆ ಮಾಡಿದ್ದು, ಅದರಲ್ಲಿ ಆಂಧ್ರಪ್ರದೇಶ, ತೆಲಂಗಾಣ ಹಾಗೂ ಕರ್ನಾಟಕದ ಅನೇಕರು ಸೇರಿಕೊಂಡಿದ್ದಾರೆ. ಈ ಮೂಲಕ ಕೋವಿಡ್​ ಸೋಂಕಿಗೊಳಗಾಗಿ ಆಕ್ಸಿಜನ್​, ಔಷಧ, ಆಹಾರ ಸೇರಿದಂತೆ ಅನೇಕ ಸಮಸ್ಯೆ ಎದುರಿಸುತ್ತಿರುವವರ ಪಾಲಿಗೆ ಸಹಾಯ ಮಾಡ್ತಿದ್ದಾರೆ.

ಇದನ್ನೂ ಓದಿ: ಕೊನೆಗೂ ಬದುಕಿ ಬರಲಿಲ್ಲ ಈ ಧೈರ್ಯಶಾಲಿ ಯುವತಿ!

ಇದಕ್ಕೆ ಸಂಬಂಧಿಸಿದಂತೆ ಟ್ವೀಟ್ ಮಾಡಿರುವ ಕ್ರಿಕೆಟರ್​ ಹನುಮ ವಿಹಾರಿ, ಇಂತಹ ಕೆಲಸ ವೈಭವೀಕರಣ ಮಾಡುವ ಅವಶ್ಯಕತೆ ಇಲ್ಲ. ಅದು ನನಗಿಷ್ಟವಿಲ್ಲ. ಕೆಳಮಟ್ಟದ ಜನರಿಗೆ ನೆರವಾಗಬೇಕು ಎಂಬ ಉದ್ದೇಶವಿದೆ. ಕಷ್ಟದ ಸಮಯದಲ್ಲಿ ಅನೇಕರಿಗೆ ನೆರವಿನ ಅಗತ್ಯವಿರುವ ಕಾರಣ ಈ ನಿರ್ಧಾರ ಕೈಗೊಂಡಿದ್ದಾನೆ ಎಂದು ತಿಳಿಸಿದ್ದಾರೆ.

ವಿಹಾರಿ ರಚನೆ ಮಾಡಿರುವ ವಾಟ್ಸ್ಆ್ಯಪ್​ ಗ್ರೂಪ್​ನಲ್ಲಿ 100 ಸ್ವಯಂ ಸೇವಕರಿದ್ದು, ಅವರ ಪರಿಶ್ರಮದಿಂದಲೇ ನಾನು ಜನರಿಗೆ ಸಹಾಯ ಮಾಡಲು ಸಾಧ್ಯವಾಗುತ್ತದೆ. ನನ್ನ ಪತ್ನಿ, ಸಹೋದರಿ ಮತ್ತು ಅನೇಕರು ಈ ವಾಲಂಟಿಯರ್​ ತಂಡದಲ್ಲಿದ್ದಾರೆ ಎಂದು ತಿಳಿಸಿದ್ದಾರೆ.

ಮೂಲತಃ ಆಂಧ್ರಪ್ರದೇಶದವರಾಗಿರುವ ವಿಹಾರಿ ಟೀಂ ಇಂಡಿಯಾ ಪರ 11 ಟೆಸ್ಟ್​ ಪಂದ್ಯಗಳನ್ನಾಡಿದ್ದು, 624 ರನ್​ಗಳಿಕೆ ಮಾಡಿದ್ದಾರೆ. ಇದೀಗ ವಿಶ್ವ ಟೆಸ್ಟ್​ ಚಾಪಿಯನ್​ಶಿಪ್​ ಹಾಗೂ ಇಂಗ್ಲೆಂಡ್ ವಿರುದ್ಧದ ಟೆಸ್ಟ್​ ಸರಣಿಗೆ ಅವರು ಆಯ್ಕೆಯಾಗಿದ್ದು, ಜೂನ್​ 3ರಂದು ತಂಡ ಸೇರಿಕೊಳ್ಳಲಿದ್ದಾರೆ.

ಇದೇ ವೇಳೆ, ಗಾಯದ ಸಮಯದಲ್ಲೂ ಮೈದಾನದಲ್ಲಿ ನೆಲಕಚ್ಚಿ ನಿಂತು ಟೆಸ್ಟ್​ ಪಂದ್ಯದ ಸೋಲು ತಪ್ಪಿಸಿದ್ದು ಸಣ್ಣ ಸಾಹಸವೇನಲ್ಲ, ಆದರೆ, ಕೋವಿಡ್​ನಿಂದ ಸಮಸ್ಯೆಗೊಳಗಾಗಿ ದಿಕ್ಕು ತೋಚದ ಈ ಸಮಯದಲ್ಲಿ ಅವರಿಗೆ ಸಹಾಯ ಮಾಡುತ್ತಿರುವುದು ಮತ್ತಷ್ಟು ಸತೃಪ್ತಿ ನೀಡಿದೆ ಎಂದು ಅವರು ಹೇಳಿಕೊಂಡಿದ್ದಾರೆ.

ABOUT THE AUTHOR

...view details