ಚೆನ್ನೈ: ಮಾಧವರಂನಲ್ಲಿ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಅಸ್ಸಿಸ್ತಾನ್ ಪೊಲೀಸ್ ಇನ್ಸ್‌ಪೆಕ್ಟರ್ ಆಂಡ್ಲಿನ್ ರಮೇಶ್ ಬೆನ್ನಟ್ಟಿ ಹಿಡಿದಿದ್ದಾರೆ.
ಮೊಬೈಲ್ ಕಳ್ಳನನ್ನು ಬೈಕ್ನಲ್ಲಿ ಚೇಸ್ ಮಾಡಿ ಹಿಡಿದ ಪೊಲೀಸ್: ನೆಟ್ಟಿಗರಿಂದ ಪ್ರಶಂಸೆ - ಚೆನ್ನೈ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅಗರ್ವಾಲ್
ದಾರಿಹೋಕನ ಮೊಬೈಲ್ ಕದ್ದು ಪರಾರಿಯಾಗುತ್ತಿದ್ದ ಕಳ್ಳನನ್ನು ಪೊಲೀಸ್ ಅಧಿಕಾರಿಯೊಬ್ಬರು ಬೈಕ್ನಲ್ಲಿ ಚೇಸ್ ಮಾಡಿ ಹಿಡಿದಿರುವ ಘಟನೆ ಚೆನ್ನೈನ ಮಾಧವರಂನಲ್ಲಿ ನಡೆದಿದೆ.
ಘಟನೆ ನಡೆದಾಗ ಆಂಡ್ಲಿನ್ ರಮೇಶ್ ಬೈಕ್ನಲ್ಲಿ ಮನೆಗೆ ತೆರಳುತ್ತಿದ್ದರು. ಈ ಸಮಯದಲ್ಲಿ ಬೈಕ್ನಲ್ಲಿ ಬಂದ ಕಳ್ಳರು ದಾರಿಯಲ್ಲಿ ನಡೆದು ಹೋಗುತ್ತಿದ್ದ ವ್ಯಕ್ತಿಯ ಮೊಬೈಲ್ ಕಸಿದು ಪರಾರಿಯಾಗುತ್ತಿದ್ದರು. ತಕ್ಷಣ ಕಾರ್ಯ ಪ್ರವೃತ್ತರಾದ ಆಂಡ್ಲಿನ್ ರಮೇಶ್ ಕಳ್ಳನನ್ನು ಬೆನ್ನಟ್ಟಿ ಹಿಡಿದಿದ್ದಾರೆ.
ಈ ದೃಶ್ಯಗಳು ಸಿಸಿಟಿವಿ ಸೆರೆಯಾಗಿದ್ದು, ಚೆನ್ನೈ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಅಗರ್ವಾಲ್ ವಿಡಿಯೋ ತುಣಕನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿ ಪ್ರಶಂಸಿಸಿದ್ದಾರೆ. ಸಾಹಸದ ತುಣುಕನ್ನು ತಮ್ಮ ಖಾತೆಯಲ್ಲಿ ನೆಟಿಜನ್‌ಗಳು ಸಹ ಹಂಚಿಕೊಂಡು ರಮೇಶ್ಗೆ ಶಹಬ್ಬಾಶ್ ಎಂದಿದ್ದಾರೆ. ಸದ್ಯ ಪ್ರಕರಣ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.