ಕರ್ನಾಟಕ

karnataka

ETV Bharat / bharat

ಭಾರತಕ್ಕೆ ನೆದರ್​ಲ್ಯಾಂಡ್​ ನೆರವು: ವೆಂಟಿಲೇಟರ್‌, ಸಾಂದ್ರಕ ಹೊತ್ತ ವಿಮಾನ ಆಗಮನ

ನೆದರ್‌ಲ್ಯಾಂಡ್​ನಿಂದ ಭಾರತಕ್ಕೆ 449 ವೆಂಟಿಲೇಟರ್‌ಗಳು, 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡ ಮೊದಲ ವಿಮಾನ ಭಾರತಕ್ಕೆ ಆಗಮಿಸಿದೆ.

Netherland
ಭಾರತಕ್ಕೆ ನೆದರ್​ಲ್ಯಾಂಡ್​ ನೆರವು

By

Published : May 7, 2021, 11:04 AM IST

ನವದೆಹಲಿ: ಭಾರತದ ಕೊರೊನಾ ವಿರುದ್ಧದ ಹೋರಾಟಕ್ಕೆ ನೆದರ್​ಲ್ಯಾಂಡ್​ ನೆರವು ನೀಡಿದ್ದು, 449 ವೆಂಟಿಲೇಟರ್‌ಗಳು, 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ಒಳಗೊಂಡ ಮೊದಲ ಸಾಗಣೆ ಭಾರತಕ್ಕೆ ಆಗಮಿಸಿದೆ.

ನೆದರ್‌ಲ್ಯಾಂಡ್ಸ್‌ನ ಈ ಬೆಂಬಲವನ್ನು ಭಾರತವು ಗೌರವಿಸುತ್ತದೆ ಎಂದು ಎಂಇಎ ವಕ್ತಾರ ಅರಿಂದಮ್​ ಬಾಗ್ಚಿ ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಉಳಿದ ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗುವುದು ಎಂದು ಮಾಹಿತಿ ನೀಡಿದರು.

ಭಾರತಕ್ಕೆ ನೆದರ್​ಲ್ಯಾಂಡ್​ ನೆರವು

"ನಮ್ಮ ಬಹುಮುಖಿ ಸಹಕಾರವನ್ನು ಇನ್ನಷ್ಟು ಬಲಪಡಿಸುತ್ತದೆ. ಮೊದಲು 449 ವೆಂಟಿಲೇಟರ್‌ಗಳು, 100 ಆಮ್ಲಜನಕ ಸಾಂದ್ರಕಗಳು ಮತ್ತು ಇತರ ವೈದ್ಯಕೀಯ ಸಾಮಗ್ರಿಗಳನ್ನು ನೆದರ್‌ಲ್ಯಾಂಡ್‌ನಿಂದ ಆಗಮಿಸಿದೆ. ಮುಂಬರುವ ದಿನಗಳಲ್ಲಿ ಉಳಿದ ವೈದ್ಯಕೀಯ ಉಪಕರಣಗಳನ್ನು ರವಾನಿಸಲಾಗುವುದು" ಎಂದು ಬಾಗ್ಚಿ ಟ್ವೀಟ್ ಮಾಡಿದ್ದಾರೆ.

ABOUT THE AUTHOR

...view details