ಕರ್ನಾಟಕ

karnataka

ETV Bharat / bharat

ಬಳಕೆದಾರರ ಅನುಕೂಲಕ್ಕಾಗಿ 'ಟು ಥಂಬ್ಸ್ ಅಪ್' ಬಟನ್ ಪರಿಚಯಿಸಿದ ನೆಟ್‌ಫ್ಲಿಕ್ಸ್​ - ಬಳಕೆದಾರರ ಅನುಕೂಲಕ್ಕಾಗಿ 'ಟು ಥಂಬ್ಸ್ ಅಪ್' ಬಟನ್ ಪರಿಚಯಿಸಿದ ನೆಟ್‌ಫ್ಲಿಕ್ಸ್​

ನೆಟ್‌ಫ್ಲಿಕ್ಸ್​ ತನ್ನ ಬಳಕೆದಾರರಿಗೆ ಉತ್ತಮ ಅನುಭವವನ್ನು ನೀಡಲು ಮತ್ತು ಮುಖಪುಟದಲ್ಲಿ ಉತ್ತಮ ಶಿಫಾರಸುಗಳನ್ನು ನೀಡಲು ಹೊಸ 'ಟು ಥಂಬ್ಸ್ ಅಪ್' ಬಟನ್ ಅನ್ನು ಪರಿಚಯಿಸಿದೆ..

'ಟು ಥಂಬ್ಸ್ ಅಪ್' ಬಟನ್ ಪರಿಚಯಿಸಿದ ನೆಟ್‌ಫ್ಲಿಕ್ಸ್​
'ಟು ಥಂಬ್ಸ್ ಅಪ್' ಬಟನ್ ಪರಿಚಯಿಸಿದ ನೆಟ್‌ಫ್ಲಿಕ್ಸ್​

By

Published : Apr 13, 2022, 7:49 PM IST

ವಾಷಿಂಗ್ಟನ್ :ಜನಪ್ರಿಯ ಒಟಿಟಿ ಫ್ಲಾಟ್‌ಫಾರ್ಮ್​ ಆಗಿರುವನೆಟ್‌ಫ್ಲಿಕ್ಸ್ ತನ್ನ ಚಂದಾರರಿಗೆ ಹೊಸ 'ಟು ಥಂಬ್ಸ್ ಅಪ್' ಬಟನ್ ಅನ್ನು ಹೊರ ತಂದಿದೆ. ಇದು ತನ್ನ ಬಳಕೆದಾರರಿಗೆ ತಮ್ಮ ಸ್ಟ್ರೀಮಿಂಗ್ ಸೇವೆಯ ವೀಕ್ಷಣಾ ಅನುಭವವನ್ನು ಹೆಚ್ಚಿಸಲು ಉತ್ತಮ ಶಿಫಾರಸುಗಳೊಂದಿಗೆ ತಮ್ಮ ಮುಖಪುಟವನ್ನು ಕ್ಯೂರೇಟ್ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಿಕೊಂಡಿದೆ.

ದಿ ವರ್ಜ್ ಪ್ರಕಾರ, ಹೊಸ ವೈಶಿಷ್ಟ್ಯವು ಅಸ್ತಿತ್ವದಲ್ಲಿರುವ 'ಥಮ್ಸ್ ಅಪ್' ಮತ್ತು 'ಥಂಬ್ಸ್ ಡೌನ್' ಆಯ್ಕೆಗಳನ್ನು ಹೊಂದಿದೆ. ಅದು ಈಗಾಗಲೇ ನೆಟ್‌ಫ್ಲಿಕ್ಸ್‌ನಲ್ಲಿ ಚಂದಾದಾರರಾಗಿರುವ ಸದಸ್ಯರ ಆದ್ಯತೆಯನ್ನು ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಬಳಕೆದಾರರು ಚಲನಚಿತ್ರ ಅಥವಾ ಶೋಗಳನ್ನು ಸಂಪೂರ್ಣವಾಗಿ ಆನಂದಿಸಿದ್ದಾರೆಯೇ ಮತ್ತು ಅದೇ ರೀತಿ ಹೆಚ್ಚಿನದನ್ನು ನೋಡಲು ಬಯಸುತ್ತಾರೆಯೇ? ಎಂಬುದನ್ನು ಸೂಚಿಸುತ್ತದೆ.

ಈಗ ಇರುವಷ್ಟು ಉತ್ತಮವಾದ ಮನರಂಜನಾ ಆಯ್ಕೆಯನ್ನು ವೀಕ್ಷಕರು ಹಿಂದೆಂದೂ ಹೊಂದಿರಲು ಸಾಧ್ಯವಿಲ್ಲ. ಅಲ್ಲದೇ, ಇದರ ಸಹಾಯದಿಂದ ಜನರ ಅಭಿರುಚಿಯನ್ನು ಕಂಡುಕೊಳ್ಳಬಹುದಾಗಿದೆ. ಈ ಕುರಿತು ಮಾತನಾಡಿರುವ ನೆಟ್‌ಫ್ಲಿಕ್ಸ್‌ನಲ್ಲಿ ಉತ್ಪನ್ನ ನಾವೀನ್ಯತೆ ಮತ್ತು ವೈಯಕ್ತೀಕರಣದ ಅನುಭವಗಳ ನಿರ್ದೇಶಕ ಕ್ರಿಸ್ಟೀನ್ ಡೋಯಿಗ್-ಕಾರ್ಡೆಟ್​, 'ಇದು ವೀಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಹಾಗೂ ಶೋಗಳನ್ನು ಆಯ್ಕೆ ಮಾಡಲು ಅವಕಾಶ ನೀಡುತ್ತದೆ. ಇದರಿಂದಾಗಿ ನಾವು ಸಿನಿಮಾ ಉತ್ಪಾದನೆ ಮೇಲೆ ಹೂಡಿಕೆ ಮಾಡಲು ಸಹಾಯ ಮಾಡುತ್ತದೆ' ಎಂದು ಹೇಳಿದ್ದಾರೆ.

ನೆಟ್‌ಫ್ಲಿಕ್ಸ್ ಈ ಹಿಂದೆ ಬಳಕೆದಾರರಿಗೆ ಒಂದರಿಂದ ಐದು ನಕ್ಷತ್ರಗಳ ಪ್ರಮಾಣದಲ್ಲಿ ರೇಟ್ ಮಾಡಲು ಅವಕಾಶ ನೀಡುವ ರೇಟಿಂಗ್ ವ್ಯವಸ್ಥೆಯನ್ನು ನೀಡಿತ್ತು. ಇದನ್ನು 2017ರಲ್ಲಿ 'ಥಂಬ್ಸ್ ಅಪ್' ಮತ್ತು 'ಥಂಬ್ಸ್ ಡೌನ್' ಸೆಟಪ್‌ಗಾಗಿ ಬದಲಾಯಿಸಲಾಯಿತು. ಇದೀಗ ನೆಟ್‌ಫ್ಲಿಕ್ಸ್‌ನ ವೆಬ್, ಟಿವಿ, ಆಂಡ್ರಾಯ್ಡ್ ಮತ್ತು ಐಒಎಸ್ ಇಂಟರ್‌ಫೇಸ್‌ಗಳಲ್ಲಿ 'ಥಂಬ್ಸ್ ಅಪ್' ಮತ್ತು 'ಥಂಬ್ಸ್ ಡೌನ್' ಬಟನ್‌ಗಳ ಪಕ್ಕದಲ್ಲಿ ಹೊಸ 'ಟು ಥಂಬ್ಸ್ ಅಪ್' ಬಟನ್ ಕಾಣಿಸಿಕೊಳ್ಳುತ್ತದೆ.

ಓದಿ:ವಿವಾದಗಳಿಗೂ ಈಶ್ವರಪ್ಪಗೂ ಬಿಡಿಸಲಾರದ ನಂಟು! ಕೊರಳಿಗೆ ಉರುಳಾಗುವುದೇ 'ಕಮಿಷನ್‌'?

ABOUT THE AUTHOR

...view details