ಪ್ರಯಾಗರಾಜ್:ಉತ್ತರಪ್ರದೇಶ ಜ್ಞಾನವಾಪಿ ಮಸೀದಿ ಆವರಣದಲ್ಲಿ ಸಿಕ್ಕಿರುವ ವಿವಾದಿತ ಶಿವಲಿಂಗಕ್ಕೆ ಪೂಜೆ, ಜಲಾಭಿಷೇಕ ಮಾಡಲು ಹೊರಟಿದ್ದ ಸ್ವಾತಂತ್ರ್ಯ ಸೇನಾನಿ ಸುಭಾಷ್ ಚಂದ್ರ ಬೋಸ್ ಅವರ ಮರಿ ಮೊಮ್ಮಗಳಾದ ರಾಜಶ್ರೀ ಚೌಧರಿ ಅವರನ್ನು ಪೊಲೀಸರ ವಶಕ್ಕೆ ಪಡೆದು ಗೃಹ ಬಂಧನ ವಿಧಿಸಿದ್ದಾರೆ.
ದೆಹಲಿಯಿಂದ ರೈಲು ಮುಖಾಂತರ ವಾರಾಣಸಿಗೆ ಹೊರಟಿದ್ದ ಹಿಂದೂ ಮಹಸಭಾ ರಾಷ್ಟ್ರೀಯ ಅಧ್ಯಕ್ಷೆಯಾಗಿರುವ ರಾಜಶ್ರೀ ಚೌಧರಿ ಅವರನ್ನು ಸಂಗಮ್ ನಗರದಲ್ಲಿಯೇ ತಡೆಯಲಾಗಿದೆ. ಪ್ರಯಾರಾಜ್ ಜಂಕ್ಷನ್ ಬಳಿ ಅವರನ್ನು ರೈಲಿನಿಂದ ಕೆಳಗಿಳಿಸಿ ಪೊಲೀಸ್ ಅತಿಥಿ ಗೃಹಕ್ಕೆ ಕರೆದೊಯ್ಯಲಾಯಿತು. ಅಲ್ಲಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿದ್ದು, ಖಾಕಿ ಪಡೆ ಅವರ ಮೇಲೆ ನಿಗಾ ಇಟ್ಟಿದೆ.