ಕರ್ನಾಟಕ

karnataka

ETV Bharat / bharat

ವಾಮಾಚಾರ ಮಾಡಿದ ಅತ್ತೆ ಕೊಚ್ಚಿ ಕೊಂದ ಸೋದರಳಿಯ.. ಹೀಗೊಂದು ಭೀಕರ ಹತ್ಯೆ - ಜಾರ್ಖಂಡ್​ನಲ್ಲಿ ವಾಮಾಚಾರಕ್ಕಾಗಿ ಕೊಲೆ

ವಾಮಾಚಾರ ನಡೆಸಿದ ಆರೋಪದ ಮೇಲೆ ವ್ಯಕ್ತಿಯೋರ್ವ ತನ್ನ ಅತ್ತೆಯನ್ನೇ ಕೊಚ್ಚಿ ಕೊಲೆ ಮಾಡಿದ ಆಘಾತಕಾರಿ ಘಟನೆ ಜಾರ್ಖಂಡ್​ನ ರಾಂಚಿಯಲ್ಲಿ ನಡೆದಿದೆ.

nephew-murdered-aunt-for-witchcraft-in-ranchi
ವಾಮಾಚಾರ ಮಾಡಿದ ಅತ್ತೆಯನ್ನು ಕೊಚ್ಚಿ ಕೊಂದ ಸೋದರಳಿಯ

By

Published : Sep 27, 2022, 3:59 PM IST

ರಾಂಚಿ, ಜಾರ್ಖಂಡ್​: ಕುಟುಂಬದ ಮಧ್ಯೆ ಪರಸ್ಪರ ದ್ವೇಷ ಮತ್ತು ವಾಮಾಚಾರ ಮಾಡಿದ ಆರೋಪದ ಮೇಲೆ ಮಹಿಳೆಯನ್ನು ವ್ಯಕ್ತಿಯೋರ್ವ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜಾರ್ಖಂಡ್​ನಲ್ಲಿ ನಡೆದಿದೆ. ಹತ್ಯೆ ಮಾಡಿದಾತ ಮೃತರ ಸೋದರಳಿಯ ಎಂದು ಗುರುತಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಕೊಲೆಗಾರರನ್ನು ಬಂಧಿಸಿದ್ದಾರೆ.

ರಾಂಚಿಯ ತಮದ್ ಪೊಲೀಸ್ ಠಾಣೆ ವ್ಯಾಪ್ತಿಯ ಬರೇದಿಹ್ ಗ್ರಾಮದಲ್ಲಿ ಈ ಹತ್ಯೆ ನಡೆದಿದೆ. ತನ್ನ ಕುಟುಂಬದ ಮೇಲೆ ಅತ್ತೆ ವಾಮಾಚಾರ ಮಾಡಿಸಿದ್ದಾಳೆ ಎಂದು ಶಂಕಿಸಿದ್ದ ಸೋದರಳಿಯ ಆಕೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹರಿತವಾದ ಆಯುಧದಿಂದ ದಾಳಿ ಮಾಡಿದ್ದಾನೆ. ಈ ವೇಳೆ ಅಲ್ಲಿಯೇ ಇದ್ದ ಮಾವ ಸಹಾಯಕ್ಕೆ ಬಂದಾಗ ಆತನ ಮೇಲೂ ಹಲ್ಲೆ ಮಾಡಿದ್ದಾನೆ.

ಈ ವೇಳೆ ಹಲ್ಲೆಕೋರನ ಮಾವ ಅಲ್ಲಿಂದ ತಪ್ಪಿಸಿಕೊಂಡು ಗ್ರಾಮಕ್ಕೆ ಬಂದು ನಡೆದ ಘಟನೆ ತಿಳಿಸಿದ್ದಾನೆ. ಕೆಲ ಗ್ರಾಮಸ್ಥರು ಜಮೀನಿಗೆ ತೆರಳಿ ನೋಡಿದಾಗ ಸೋದರಳಿಯ ಅತ್ತೆಯನ್ನು ಕೊಚ್ಚಿ ಕೊಲೆ ಮಾಡಿದ್ದ.

ದೂರು ಕೊಟ್ಟ ಮಾವ, ಅಳಿಯ ಅರೆಸ್ಟ್​:ಘಟನೆಗೆ ಸಂಬಂಧಿಸಿದಂತೆ ಅಳಿಯನ ಮೇಲೆ ಮಾವ ದೂರು ನೀಡಿದ್ದು, ಪೊಲೀಸರು ಹತ್ಯೆ ಆರೋಪಿ ಬಂಧಿಸಿದ್ದಾರೆ. ತಮ್ಮ ವಿರುದ್ಧ ವಾಮಾಚಾರ ಮಾಡಿದ ಕಾರಣಕ್ಕಾಗಿ ಆಕೆಯನ್ನು ಕೊಲೆ ಮಾಡಿರುವುದಾಗಿ ಆರೋಪಿ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ.

ವಾಮಾಚಾರಕ್ಕೆ ಎರಡನೇ ಹತ್ಯೆ: ಇದಕ್ಕೂ ಮೊದಲು ಆಸ್ತಿ ವಿವಾದದ ಕಾರಣಕ್ಕೆ ನಡೆದ ಗಲಾಟೆಯಲ್ಲಿ ಇಬ್ಬರನ್ನು ಕೊಲೆ ಮಾಡಲಾಗಿತ್ತು. ಇದು ಕೂಡ ವಾಮಾಚಾರಕ್ಕೆ ತಳುಕು ಹಾಕಿಕೊಂಡಿತ್ತು. ಆಸ್ತಿಯನ್ನು ಲಪಟಾಯಿಸಲು ಆಕೆ ಮಾಟ ಮಾಡಿದ್ದಳು ಎಂದು ಆರೋಪಿಸಲಾಗಿತ್ತು. ಈ ಬಗ್ಗೆ ಪೊಲೀಸ್​ ತನಿಖೆ ನಡೆಯುತ್ತಿದೆ.

ಓದಿ:ಜಿಲ್ಲಾಸ್ಪತ್ರೆಯಲ್ಲಿ ಸಿಗದ ಸ್ಟ್ರೆಚರ್​​​: ಗರ್ಭಿಣಿ ಹೆಗಲ ಮೇಲೆ ಹೊತ್ತು ಆಪರೇಷನ್​​​​​​​ ಕೋಣೆಗೆ ಹೋದ ಪತಿ

ABOUT THE AUTHOR

...view details