ಕಠ್ಮಂಡು (ನೇಪಾಳ) :ಶೆರ್ಪಾಗಳಾದ ನಾರ್ವೆಯ ಕ್ರಿಸ್ಟಿನ್ ಹರಿಲಾ ಮತ್ತು ನೇಪಾಳದ ಟೆನ್ಜೆನ್ (ಲಾಮಾ) ಅವರು 92 ದಿನಗಳಲ್ಲಿ 8000 ಮೀಟರ್‌ಗಳ ಎತ್ತರದ 14 ಶಿಖರಗಳನ್ನು ಹತ್ತುವ ಮೂಲಕ ಅತಿ ಕಡಿಮೆ ಅವಧಿಯಲ್ಲಿ ಇದನ್ನು ಸಾಧಿಸಿದ ವಿಶಿಷ್ಟ ದಾಖಲೆ ನಿರ್ಮಿಸಿದ್ದಾರೆ.
ಗುರುವಾರ ಟೆನ್ಜೆನ್ ಮತ್ತು ಹರಿಲಾ ಎವರೆಸ್ಟ್ ಶಿಖರದ ನಂತರದ ಎರಡನೇ ಅತ್ಯುನ್ನತ ಶಿಖರವಾದ K2 ಹಿಮರಾಶಿಯನ್ನು ಸೇರಿ 92 ದಿನಗಳಲ್ಲಿ 14 ಇತರ ಶಿಖರಗಳನ್ನು ಆರೋಹಣ ಮಾಡುವ ಮೂಲಕ ಈ ಸಾಧನೆಗೆ ಪಾತ್ರರಾದರು. ಈ ಮೂಲಕ ನಿರ್ಮಲ್ ಪುರ್ಜಾ ಅವರು ನಿರ್ಮಿಸಿದ ಹಿಂದಿನ ದಾಖಲೆಯನ್ನು ಮುರಿದರು. ಅವರು ಇಷ್ಟೇ ದಿನಗಳಲ್ಲಿ 8 ಶಿಖರವನ್ನು ಏರುವ ಮೂಲಕ ದಾಖಲೆ ಬರೆದಿದ್ದರು.
ಇಂದು ಬೆಳಗ್ಗೆ (ಜುಲೈ 27, 2023) K2 ಶಿಖರದದ ಜೊತೆಗೆ 8000 ಮೀಟರ್‌ಗಿಂತ ಎತ್ತರದಲ್ಲಿರುವ 14 ಶಿಖರಗಳನ್ನು ಅತಿ ವೇಗವಾಗಿ ಪೂರ್ಣಗೊಳಿಸಿದ ದಾಖಲೆಯನ್ನು ಬರೆದರು. 3 ತಿಂಗಳೊಳಗೆ ಈ ಟಾಸ್ಕ್ ಅನ್ನು ಮುಗಿಸಿದ್ದಾರೆ ಎಂದು ಸೆವೆನ್ ಸಮ್ಮಿಟ್ ಟ್ರೆಕ್ಸ್‌ನ ಎಕ್ಸ್‌ಪೆಡಿಶನ್ ಡೈರೆಕ್ಟರ್ ಚಾಂಗ್ ದೇವಾ ಶೆರ್ಪಾ ಅವರು ತಿಳಿಸಿದರು.
ಶೆರ್ಪಾಗಳಾದ ಕ್ರಿಸ್ಟಿನ್ ಮತ್ತು ಲಾಮಾ ಅವರು ಜುಲೈ 18 ರಂದು G1 ಮತ್ತು ಜುಲೈ 23 ರಂದು ಬ್ರಾಡ್ ಪೀಕ್ ಶಿಖರವನ್ನು ಹತ್ತಿದರು. ಜುಲೈ 15 ರಂದು ವಿಶ್ವದ 13 ನೇ ಅತಿ ಎತ್ತರದ ಪರ್ವತವಾದ G2 ಅನ್ನು ಏರಿದರು. ಜೂನ್ 26 ರಂದು ಈ ಜೋಡಿಯು ನಂಗಾ ಪರ್ವತ್ ಅನ್ನು ಸಹ ಆರೋಹಣ ಮಾಡಿದ್ದಾರೆ.