ಕರ್ನಾಟಕ

karnataka

ETV Bharat / bharat

ಭಾರತಕ್ಕೆ 3ದಿನ ಪ್ರವಾಸ ಕೈಗೊಂಡಿರುವ ನೇಪಾಳ ಪ್ರಧಾನಿ: ಕಾಶಿಯಲ್ಲಿ ಸ್ವಾಗತಕೋರಲಿದ್ದಾರೆ ಯೋಗಿ - ಕಾಶಿಯಲ್ಲಿ ಸ್ವಾಗತಕೋರಲಿರುವ ಯೋಗಿ ಆದಿತ್ಯನಾಥ್

ನೇಪಾಳದ ಪ್ರಧಾನಿ ಶೇರ್ ಸಿಂಗ್ ದೇವುಬಾ ಅವರ ಭಾರತ ಭೇಟಿಯು ಪ್ರಮುಖವಾಗಿದೆ. ಏಕೆಂದರೆ ನೇಪಾಳ ಮತ್ತು ಭಾರತ ನಡುವಿನ ಸಂಬಂಧ ಇತ್ತೀಚೆಗೆ ಉತ್ತಮವಾಗಿರಲಿಲ್ಲ. ಅದೇ ಸಮಯದಲ್ಲಿ, ಚೀನಾದೊಂದಿಗಿನ ಉದ್ವಿಗ್ನತೆಯ ನಡುವೆ ನೇಪಾಳದ ವರ್ತನೆಯು ಭಾರತದೊಂದಿಗಿನ ಸಂಬಂಧ ಹಾಳುಮಾಡುವಂತೆಯೇ ಇತ್ತು. ಇಂತಹ ಪರಿಸ್ಥಿತಿಯಲ್ಲಿ ನೇಪಾಳ ಪ್ರಧಾನಿ ಭಾರತ ಭೇಟಿಯು ಉಭಯ ದೇಶಗಳ ನಡುವಿನ ಹದಗೆಡುತ್ತಿರುವ ಸಂಬಂಧವನ್ನು ಸುಧಾರಿಸುವ ನಿರೀಕ್ಷೆಯಿದೆ.

nepalese-pm-will-do-special-worship-at-kaal-bhairav
ಮೂರು ದಿನದ ಭಾರತ ಪ್ರವಾಸದಲ್ಲಿ ನೇಪಾಳ ಪ್ರಧಾನಿ

By

Published : Apr 1, 2022, 3:28 PM IST

ವಾರಣಾಸಿ:ನೇಪಾಳದ ಪ್ರಧಾನಿ ಶೇರ್ ಸಿಂಗ್ ದೇವುಬಾ ಅವರು ಇಂದು ಭಾರತಕ್ಕೆ ಬರಲಿದ್ದಾರೆ. ಅವರ ಭಾರತ ಭೇಟಿಯೂ ತುಂಬಾ ಮಹತ್ವದ್ದಾಗಿದೆ. ಏಕೆಂದರೆ ನೇಪಾಳ ಮತ್ತು ಭಾರತದ ನಡುವಿನ ಸಂಬಂಧ ಕಳೆದ ಕೆಲವು ವರ್ಷಗಳಿಂದ ಉತ್ತಮವಾಗಿಲ್ಲ. ಹೀಗಾಗಿ ನೇಪಾಳದ ಪ್ರಧಾನಿಯ ಮೂರು ದಿನಗಳ ಭಾರತ ಭೇಟಿಯೂ ಅತ್ಯಂತ ಮಹತ್ವದ್ದಾಗಿದೆ.

ನೇಪಾಳದ ಪ್ರಧಾನಿ ಭಾರತದಲ್ಲಿ ಮೂರು ದಿನ ಇರಲಿದ್ದು, ಏಪ್ರಿಲ್ 3 ರಂದು ಬನಾರಸ್​ಗೆ ಭೇಟಿ ನೀಡಲಿದ್ದಾರೆ ಎಂದು ತಿಳಿದು ಬಂದಿದೆ. ಇಲ್ಲಿ ಕಾಲ ಭೈರವ ಮತ್ತು ಕಾಶಿ ವಿಶ್ವನಾಥ ದೇವಾಲಯದಲ್ಲಿ ಪೂಜೆ ಸಲ್ಲಿಸಿ, ನಂತರ ಅವರು ನೇಪಾಳದ ಪ್ರಸಿದ್ಧ ಪಶುಪತಿನಾಥ ದೇವಾಲಯದ ಪ್ರತಿಕೃತಿಗೆ ಹೋಗುತ್ತಾರೆ. ಅಂದರೆ, ಬನಾರಸ್‌ನಲ್ಲಿರುವ ಪಶುಪತಿನಾಥ ನೇಪಾಳಿ ದೇವಾಲಯಕ್ಕೆ ಪೂಜೆ ಸಲ್ಲಿಸುತ್ತಾರೆ. ಇಲ್ಲಿ ಹಲವು ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸಲಿದ್ದಾರೆ.

ಭದ್ರತೆ ಸಂಬಂಧ ಚರ್ಚಿಸುತ್ತಿರುವ ಅಧಿಕಾರಿಗಳು

ನೇಪಾಳ ಪ್ರಧಾನಿಯವರ ಬನಾರಸ್ ಭೇಟಿಗೆ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಅವರ ಆಗಮನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ವಾರಾಣಸಿಯ ಅಧಿಕಾರಿಗಳು ಹೇಳಿದ್ದಾರೆ. ಭಾರತಕ್ಕೆ ಭೇಟಿ ನೀಡುತ್ತಿರುವ ನೇಪಾಳದ ಪ್ರಧಾನಿಯನ್ನು ಕಾಶಿಯಲ್ಲಿ ಭಾರತೀಯ ಸಂಸ್ಕೃತಿ ಪ್ರಕಾರ ಸ್ವಾಗತಿಸಲಾಗುತ್ತದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಪ್ರಧಾನಿ ಮೋದಿಗೆ ಬೆದರಿಕೆಯ ಮೇಲ್ ​: 20 ಕೆಜಿ ಆರ್‌ಡಿಎಕ್ಸ್​ ರೆಡಿ ಮಾಡಿಟ್ಟುಕೊಳ್ಳಲಾಗಿದೆಯಂತೆ

ಲಾಲ್ ಬಹದ್ದೂರ್ ಶಾಸ್ತ್ರಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬನಾರಸ್ ಸಂಸ್ಕೃತಿಯ ಪ್ರಕಾರ, ಬಾಬಾ ವಿಶ್ವನಾಥ್ ಅವರ ರುದ್ರಾಕ್ಷಿ ಮತ್ತು ಅಂಗವಸ್ತ್ರದ ಮಾಲೆಯನ್ನು ಅರ್ಪಿಸಿ ಅವರನ್ನು ಸ್ವಾಗತಿಸಲಾಗುತ್ತದೆ. ಮಾಹಿತಿ ಪ್ರಕಾರ, ರಾಜ್ಯದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನು ಬರ ಮಾಡಿಕೊಳ್ಳಲಿದ್ದಾರೆ.

ಅದೇ ಸಮಯದಲ್ಲಿ, ಅವರು ವಿಮಾನ ನಿಲ್ದಾಣದಿಂದ ನೇರವಾಗಿ ಕಾಲ ಭೈರವ ದೇವಸ್ಥಾನಕ್ಕೆ ಬರಲಿದ್ದಾರೆ. ಅಧಿಕಾರಿಗಳ ಪ್ರಕಾರ, ಕಾಶಿಯಲ್ಲಿ ಸುಮಾರು 4 ರಿಂದ 5 ಗಂಟೆಗಳ ಕಾಲ ಇವರ ಕಾರ್ಯಕ್ರಮ ಇರುತ್ತದೆ. ಇದರಲ್ಲಿ ಅವರು ದರ್ಶನದ ಪೂಜೆಯ ಜೊತೆಗೆ ನೇಪಾಳಿ ದೇವಸ್ಥಾನದಲ್ಲಿ ವಾಸಿಸುವ ನೇಪಾಳದ ವಿಧವೆ ವೃದ್ಧೆಯರನ್ನು ಭೇಟಿಯಾಗುತ್ತಾರೆ ಎನ್ನಲಾಗ್ತಿದೆ.

ABOUT THE AUTHOR

...view details