ಕರ್ನಾಟಕ

karnataka

ETV Bharat / bharat

ನಾಯಿ ಬೊಗಳಿದ್ದಕ್ಕೆ ಕೋಪಗೊಂಡು ಮೂವರ ಮೇಲೆ ಕಬ್ಬಿಣದ ರಾಡ್‌ನಿಂದ ಹಲ್ಲೆ - Paschim Vihar

ಪಕ್ಕದ ಮನೆಯ ನಾಯಿ ತನ್ನನ್ನು ನೋಡಿ ಬೊಗಳಿತು ಎಂದು ಕೋಪಗೊಂಡ ವ್ಯಕ್ತಿ, ನಾಯಿ ಸೇರಿದಂತೆ ಒಂದೇ ಕುಟುಂಬದ ಮೂವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಗಾಯಗೊಳಿಸಿದ್ದಾನೆ.

ನಾಯಿ
ನಾಯಿ

By

Published : Jul 4, 2022, 11:06 AM IST

ನವದೆಹಲಿ: ಇಂದಿನ ದಿನಗಳಲ್ಲಿ ನಾಯಿ ಸಾಕುವುದು ಸಹ ಪ್ರತಿಷ್ಠೆಯ ಪ್ರಶ್ನೆಯೆಂದು ಜನರು ಭಾವಿಸಲಾರಂಭಿಸಿದ್ದಾರೆ. ನಗರಗಳಲ್ಲಿ ಸಾಕುನಾಯಿಗಳ ಸಂಖ್ಯೆಯೂ ಹೆಚ್ಚಾಗುತ್ತಿದೆ. ಆದರೆ, ಸಾಕು ನಾಯಿಯೊಂದು ಬೊಗಳಿತು ಎಂಬ ಕಾರಣಕ್ಕೆ ಪಕ್ಕದ ಮನೆಯ ಮೂವರು ಸದಸ್ಯರು ಹಾಗೂ ನಾಯಿಯನ್ನು ಮನಬಂದಂತೆ ಥಳಿಸಿರುವ ಘಟನೆ ದೆಹಲಿಯ ಪಶ್ಚಿಮ್ ವಿಹಾರ್​ನಲ್ಲಿ ನಡೆದಿದೆ.

ಪಕ್ಕದ ಮನೆಯ ನಾಯಿ ತನ್ನನ್ನು ನೋಡಿ ಬೊಗಳಿತು ಎಂದು ಕೋಪಗೊಂಡ ವ್ಯಕ್ತಿ ನಾಯಿಗೆ ಹೊಡೆದಿದ್ದಾನೆ. ಇದರಿಂದ ಕೋಪಗೊಂಡ ಶ್ವಾನದ ಮಾಲೀಕರು ಆ ವ್ಯಕ್ತಿಯೊಂದಿಗೆ ವಾಗ್ವಾದ ನಡೆಸಿದರು. ಬಳಿಕ ಕೋಪಗೊಂಡ ವ್ಯಕ್ತಿ, ನಾಯಿ ಸೇರಿದಂತೆ ಒಂದೇ ಕುಟುಂಬದ ಮೂವರಿಗೆ ಕಬ್ಬಿಣದ ರಾಡ್‌ನಿಂದ ಹೊಡೆದು ಗಾಯಗೊಳಿಸಿದ್ದಾನೆ.

ನಾಯಿಯ ಮಾಲೀಕರು ಪೊಲೀಸ್​ ಠಾಣೆಗೆ ದೂರು ನೀಡಿದ್ದಾರೆ. ಗಾಯಳುಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಇದನ್ನೂ ಓದಿ:ಹಿಮಾಚಲ ಪ್ರದೇಶದಲ್ಲಿ ಕಣಿವೆಗೆ ಬಿದ್ದ ಬಸ್‌; ಶಾಲಾ ಮಕ್ಕಳು ಸೇರಿ 16 ಜನ ಸಾವು

ABOUT THE AUTHOR

...view details