ಶಾಹದೋಲ್(ಮಧ್ಯಪ್ರದೇಶ):ಸರ್ಕಾರಿ ಆಸ್ಪತ್ರೆಗಳಲ್ಲಿ ಸದಾ ಒಂದಿಲ್ಲೊಂದು ಯಡವಟ್ಟು ನಡೆಯುತ್ತಲೇ ಇರ್ತವೆ. ಇದೀಗ ಅಂತಹ ಹೊಸ ಘಟನೆಯೊಂದು ಮಧ್ಯಪ್ರದೇಶದ ಶಾಹದೋಲ್ ಆಸ್ಪತ್ರೆಯಲ್ಲಿ ನಡೆದಿದೆ. ವಯಸ್ಸಾದ ಮಹಿಳೆಯೋರ್ವಳಿಗೆ ಕೆಮ್ಮಿನ ಸಿರಪ್ ಬದಲಿಗೆ ಹೇನಿನ ಔಷಧಿ ನೀಡಲಾಗಿದೆ.
ಶಾಹದೋಲ್ ಜಿಲ್ಲೆಯ ಬುರ್ಹಾಲ್ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿಯ ನಿರ್ಲಕ್ಷ್ಯದಿಂದಾಗಿ ಘಟನೆ ನಡೆದಿದೆ. ಆರೋಗ್ಯದಲ್ಲಿ ಏರುಪೇರು ಕಂಡು ಬಂದಿರುವ ರಾಜ್ ಕುಮಾರಿ ಜೈಸ್ವಾಲ್(65) ಎಂಬಾಕೆ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದು, ಇದರ ಬೆನ್ನಲ್ಲೇ ಆಸ್ಪತ್ರೆ ಸಿಬ್ಬಂದಿ ವಿರುದ್ಧ ದೂರು ದಾಖಲು ಮಾಡಲಾಗಿದೆ.