ಕರ್ನಾಟಕ

karnataka

ETV Bharat / bharat

Neet Ug 2023 Results: ಇಂದು ನೀಟ್​ ಪರೀಕ್ಷೆ ಫಲಿತಾಂಶ; ಈ ಟಾಪ್​ 10 ಮೆಡಿಕಲ್​​ ಕಾಲೇಜುಗಳನ್ನ ಆಯ್ಕೆ ಮಾಡಬಹುದು - ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ

ವೈದ್ಯಕೀಯ ಕೋರ್ಸ್​​ಗಾಗಿ ಎನ್​ಟಿಎ ನಡೆಸುವ ನೀಟ್​ ಯುಜಿ 2023 ಫಲಿತಾಂಶ ಇಂದು ಬಿಡುಗಡೆಯಾಗಲಿದೆ.

neet-ug-2023-result-here-is-the-top-10-best-medical-college-in-india
neet-ug-2023-result-here-is-the-top-10-best-medical-college-in-india

By

Published : Jun 13, 2023, 10:53 AM IST

ನವದೆಹಲಿ: ವೈದ್ಯಕೀಯ ಶಿಕ್ಷಣಗಳಿಗೆ ನ್ಯಾಷನಲ್​ ಟೆಸ್ಟಿಂಗ್​ ಏಜೆನ್ಸಿ (NTA) ನಡೆಸುವ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ (ನೀಟ್​ ಯುಜಿ- 2023) (NEET UG 2023)ರ ಫಲಿತಾಂಶ ಇಂದು ಬಿಡುಗಡೆಯಾಗುವ ಸಾಧ್ಯತೆ ಇದೆ. ಮಣಿಪುರ ಹೊರತು ಪಡಿಸಿ, ದೇಶಾದ್ಯಂತ ಏಕಕಾಲದಲ್ಲಿ ಮೇ 7ರಂದು ನೀಟ್​ ಪರೀಕ್ಷೆಯನ್ನು ನಡೆಸಲಾಗಿದ್ದು, ಕಳೆದ ವಾರ ಅಂದರೆ ಜೂನ್​ 4ರಂದು ಇದರ ಕೀ ಉತ್ತರವನ್ನು ಪ್ರಕಟಿಸಲಾಗಿತ್ತು. ಈ ಉತ್ತರದ ವಿರುದ್ಧ ಆಪೇಕ್ಷಣೆ ಸಲ್ಲಿಕೆಗೆ ಜೂನ್​ 6ರವರೆಗೆ ಅವಕಾಶ ನೀಡಲಾಗಿತ್ತು.

ಈ ಬಾರಿಗೆ 20.87 ಲಕ್ಷ ವಿದ್ಯಾರ್ಥಿಗಳು ನೀಟ್​ ಯುಜಿ ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದರು. ಮಣಿಪುರದಲ್ಲಿ ಜೂನ್​​ 6ರಂದು ಈ ಪರೀಕ್ಷೆಯನ್ನು ನಡೆಸಲಾಗಿತ್ತು. ಅಖಿಲ ಭಾರತದ ಶ್ರೇಣಿಯ ಆಧಾರದ ಮೇಲೆ ಈ ಫಲಿತಾಂಶ ಬಿಡುಗಡೆ ಮಾಡಲಾಗುವುದು. ಫಲಿತಾಂಶ ಬಿಡುಗಡೆ ವೇಳೆಗೆ ಕಟ್​ ಆಫ್​ ಶೇಕಡಾವಾರುಗಳನ್ನು ಪ್ರಕಟಿಸಲಾಗುವುದು. ಅಭ್ಯರ್ಥಿಗಳು ನೀಟ್​ ಫಲಿತಾಂಶವನ್ನು neet.nta.nic.in ಅಥವಾ ntaresults.nic.in ಅಲ್ಲಿ ವೀಕ್ಷಣೆ ಮಾಡಬಹುದು.

ಫಲಿತಾಂಶ ವೀಕ್ಷಣೆ ಹೇಗೆ:ಈಗಾಗಲೇ ಅಭ್ಯರ್ಥಿಗಳು ಫಲಿತಾಂಶಕ್ಕಾಗಿ ಕಾಯುತ್ತಿದ್ದು, ಇಂದು ಫಲಿತಾಂಶ ಬಿಡುಗಡೆಯಾಗಲಿದೆ ಎಂದು ಘೋಷಿಸಲಾಗಿದೆ. ಆದರೆ, ಯಾವಾಗ, ಎಷ್ಟು ಹೊತ್ತಿಗೆ ಎಂಬ ನಿರ್ಧಿಷ್ಟ ಸಮಯವನ್ನು ಎನ್​ಟಿಎ ಬಹಿರಂಗ ಪಡಿಸಿಲ್ಲ. ಫಲಿತಾಂಶ ಬಿಡುಗಡೆಯಾದ ಕೂಡಲೇ ಅಭ್ಯರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.

  1. ಅಭ್ಯರ್ಥಿಗಳು neet.nta.nic.in ಅಧಿಕೃತ ಜಾಲತಾಣಕ್ಕೆ ಭೇಟಿ ನೀಡಬೇಕು.
  2. ಬಳಿಕ ವೆಬ್​ ಸೈಟ್​ನಲ್ಲಿ ಕಾಣಿಸುವ ಫಲಿತಾಂಶದ ಲಿಂಕ್​ ಅನ್ನು ಕ್ಲಿಕ್​ ಮಾಡಬೇಕು
  3. ನಂತರ ಅಪ್ಲಿಕೇಶನ್ ಸಂಖ್ಯೆ ಮತ್ತು ಜನ್ಮ ದಿನಾಂಕದಂತಹ ನಿಮ್ಮ ರುಜುವಾತುಗಳನ್ನು ನಮೂದಿಸಿ
  4. ನೀಟ್​ ಯುಜಿ 2023 ಸ್ಕೋರ್‌ಕಾರ್ಡ್ ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
  5. ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶವನ್ನು ವೀಕ್ಷಿಸಿ ಮತ್ತು ಡೌನ್‌ಲೋಡ್ ಮಾಡಿ.

ಇನ್ನು ವೈದ್ಯಕೀಯ ಕನಸು ಹೊತ್ತು ಈ ಪರೀಕ್ಷೆಯನ್ನು ಎದುರಿಸುವ ಅಭ್ಯರ್ಥಿಗಳಿಗೆ ಬಳಿಕ ಅತ್ಯುನ್ನತ ಕಾಲೇಜುಗಳ ಆಯ್ಕೆ ಮಾಡುವುದು ಕೂಡ ಅವಶ್ಯಕವಾಗುತ್ತದೆ. ಕೇಂದ್ರದ ಶಿಕ್ಷಣ ಸಚಿವಾಲಯ ಬಿಡುಗಡೆ ಮಾಡಿದ ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು 2023 ರ ಶ್ರೇಯಾಂಕದ ಪ್ರಕಾರ, ಭಾರತದಲ್ಲಿನ ಟಾಪ್ 10 ವೈದ್ಯಕೀಯ ಕಾಲೇಜುಗಳ ಪಟ್ಟಿ ಇಲ್ಲಿದೆ.

  • ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ದೆಹಲಿ
  • ಸ್ನಾತಕೋತ್ತರ ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆ, ಚಂಡೀಗಢ
  • ಕ್ರಿಶ್ಚಿಯನ್ ವೈದ್ಯಕೀಯ ಕಾಲೇಜು, ವೆಲ್ಲೂರು
  • ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ, ಬೆಂಗಳೂರು
  • ಜವಾಹರಲಾಲ್ ಇನ್ಸ್ಟಿಟ್ಯೂಟ್ ಆಫ್ ಪೋಸ್ಟ್ ಗ್ರಾಜುಯೇಟ್ ಮೆಡಿಕಲ್ ಎಜುಕೇಶನ್ ಅಂಡ್ ರಿಸರ್ಚ್, ಪುದುಚೇರಿ
  • ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು
  • ಸಂಜಯ್ ಗಾಂಧಿ ಪೋಸ್ಟ್ ಗ್ರಾಜುಯೇಟ್ ಇನ್ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್, ಲಕ್ನೋ
  • ಬನಾರಸ್ ಹಿಂದೂ ವಿಶ್ವವಿದ್ಯಾಲಯ, ವಾರಾಣಸಿ
  • ಕಸ್ತೂರ್ಬಾ ವೈದ್ಯಕೀಯ ಕಾಲೇಜು, ಮಣಿಪಾಲ
  • ಶ್ರೀ ಚಿತ್ರ ತಿರುನಾಳ್ ವೈದ್ಯಕೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ, ತಿರುವನಂತಪುರಂ

ಇದನ್ನೂ ಓದಿ: Rozgar Mela: 70,000 ನೇಮಕಾತಿ ಪತ್ರ ವಿತರಿಸಲಿರುವ ಪ್ರಧಾನಿ ಮೋದಿ

ABOUT THE AUTHOR

...view details