ಕರ್ನಾಟಕ

karnataka

ETV Bharat / bharat

ಸೆಪ್ಟೆಂಬರ್‌ 12 ರಿಂದ ನೀಟ್‌-ಯುಜಿ ಪರೀಕ್ಷೆ: ನಾಳೆಯಿಂದ ನೋಂದಣಿ ಆರಂಭ - ಧರ್ಮೇಂದ್ರ ಪ್ರಧಾನ್‌

ನೀಟ್‌(ಯುಜಿ) 2021 ಪರೀಕ್ಷೆ ಸೆಪ್ಟೆಂಬರ್‌ 12 ರಿಂದ ಆರಂಭವಾಗಲಿದ್ದು, ನಾಳೆ ಸಂಜೆ 5 ಗಂಟೆಗೆ ನೋಂದಣಿ ನಡೆಯಲಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್‌ ಟ್ವೀಟ್‌ ಮೂಲಕ ಸ್ಪಷ್ಟಪಡಿಸಿದ್ದಾರೆ. ಈ ಬಾರಿ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ.

NEET UG 2021 to be held on Sept 12; registration starts tomorrow
ಸೆಪ್ಟೆಂಬರ್‌ 12 ರಿಂದ ನೀಟ್‌ - ಯುಜಿ 2021 ಪರೀಕ್ಷೆ; ನಾಳೆಯಿಂದ ನೋಂದಣಿ ಆರಂಭ

By

Published : Jul 12, 2021, 9:31 PM IST

ನವದೆಹಲಿ:ಶಿಕ್ಷಣ ಸಚಿವರಾಗಿ ಹೊಸ ಜವಾಬ್ದಾರಿ ಹೊತ್ತಿರುವ ಸಚಿವ ಧರ್ಮೇಂದ್ರ ಪ್ರಧಾನ್‌ ಅವರು ಇಂದು ನೀಟ್ (ಯುಜಿ) 2021 ರ ವೇಳಾಪಟ್ಟಿ ಪ್ರಕಟಿಸಿದರು. ಸೆಪ್ಟೆಂಬರ್ 12 ರಂದು ಪರೀಕ್ಷೆ ನಡೆಯಲಿದೆ ಎಂದು ಟ್ವೀಟ್‌ ಮೂಲಕ ಮಾಹಿತಿ ನೀಡಿದ್ದಾರೆ.

ಪರೀಕ್ಷೆಯ ಅರ್ಜಿ ಸಲ್ಲಿಕೆ ಪ್ರಕ್ರಿಯೆ ನಾಳೆ ಸಂಜೆ 5 ಗಂಟೆಯಿಂದ ಪ್ರಾರಂಭವಾಗಲಿದ್ದು, ವಿದ್ಯಾರ್ಥಿಗಳು ಎನ್‌ಟಿಎ ವೆಬ್‌ಸೈಟ್‌ಗೆ ಲಾಗಿನ್ ಆಗಿ ಪರೀಕ್ಷೆಗೆ ನೋಂದಾಯಿಸಿಕೊಳ್ಳಬಹುದು. ಇದಕ್ಕೆ ಸಂಬಂಧಿಸಿದ ಹೆಚ್ಚಿನ ಮಾಹಿತಿ ಪಡೆಯಬಹುದು ಎಂದಿದ್ದಾರೆ.

ಕೋವಿಡ್ -19 ಪ್ರೋಟೋಕಾಲ್‌ ಅನುಸರಿಸಿ 2021ರ ಸೆಪ್ಟೆಂಬರ್ 12 ರಂದು ದೇಶಾದ್ಯಂತ ನೀಟ್ (ಯುಜಿ) 2021 ನಡೆಯಲಿದೆ. ಕಳೆದ ವರ್ಷ 3,862 ಪರೀಕ್ಷಾ ಕೇಂದ್ರಗಳ ಬಳಸಿಕೊಳ್ಳಲಾಗಿತ್ತು. ಈ ಬಾರಿ ಆ ಸಂಖ್ಯೆಯನ್ನು ಹೆಚ್ಚಿಸಲಾಗುವುದು ಎಂದು ಪ್ರಧಾನ್ ಹೇಳಿದ್ದಾರೆ.

ಸಾಮಾಜಿಕ ಅಂತರವನ್ನು ಕಾಪಾಡಿಕೊಂಡು ಪರೀಕ್ಷೆಗಳನ್ನು ನಡೆಸಲಾಗುವುದು. ಪರೀಕ್ಷೆಗಳು ನಡೆಯುವ ನಗರಗಳ ಸಂಖ್ಯೆಯನ್ನು 155 ರಿಂದ 198 ಕ್ಕೆ ಹೆಚ್ಚಿಸಲಾಗಿದೆ. ಕೋವಿಡ್ -19 ಮಾನದಂಡಗಳನ್ನು ಪಾಲಿಸಲಿದ್ದು, ಪರೀಕ್ಷಾ ಕೇಂದ್ರಗಳಲ್ಲಿ ಎಲ್ಲಾ ಅಭ್ಯರ್ಥಿಗಳಿಗೆ ಮಾಸ್ಕ್‌ ನೀಡುವುದಾಗಿ ತಿಳಿಸಿದ್ದಾರೆ.

ABOUT THE AUTHOR

...view details