ಕರ್ನಾಟಕ

karnataka

ETV Bharat / bharat

ಭಾರತದ ಧ್ವಜಧಾರಿಯಾಗುವ ಅವಕಾಶ ಕಳೆದುಕೊಂಡೆ: ನೀರಜ್​ ಚೋಪ್ರಾ ಬೇಸರ

ರಾಷ್ಟ್ರವನ್ನು ಪ್ರತಿನಿಧಿಸುವ ಮತ್ತೊಂದು ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ಬೇಸರವಿದೆ- 'ಜಾವೆಲಿನ್‌ ದೊರೆ' ನೀರಜ್ ಚೋಪ್ರಾ

Neeraj Chopra
ನೀರಜ್​ ಚೋಪ್ರಾ

By

Published : Jul 27, 2022, 8:00 AM IST

ಮುಂಬರುವ ಕಾಮನ್‌ವೆಲ್ತ್ ಗೇಮ್ಸ್‌ನಿಂದ ಹೊರಗುಳಿದಿದ್ದರಿಂದ ಮನಸ್ಸಿಗೆ ನೋವಾಗಿದೆ. ಕಾರ್ಯಕ್ರಮದ ಉದ್ಘಾಟನಾ ಸಮಾರಂಭದಲ್ಲಿ ಭಾರತದ ಧ್ವಜಧಾರಿಯಾಗುವ ಅವಕಾಶವನ್ನು ಕಳೆದುಕೊಂಡಿದ್ದಕ್ಕಾಗಿ ನಿರಾಸೆಗೊಂಡಿದ್ದೇನೆ ಎಂದು ನೀರಜ್ ಸುದೀರ್ಘ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ನನ್ನ ದೀರ್ಘಕಾಲೀನ ಗುರಿಗಳನ್ನು ಗಮನದಲ್ಲಿಟ್ಟುಕೊಂಡು ಕಾಮನ್‌ವೆಲ್ತ್ ಬಿಟ್ಟುಬಿಡುವುದು ಉತ್ತಮ ಎಂದು ನಾವು ಒಟ್ಟಾಗಿ ನಿರ್ಧರಿಸಿದ್ದೇವೆ. ಸದ್ಯಕ್ಕೆ, ವಿಶ್ರಾಂತಿ ಪಡೆಯುತ್ತೇನೆ ಮತ್ತು ಶೀಘ್ರದಲ್ಲೇ ಗುಣಮುಖವಾಗುವೆ. ನಿಮ್ಮೆಲ್ಲರ ಪ್ರೀತಿ ಮತ್ತು ಬೆಂಬಲಕ್ಕಾಗಿ ಧನ್ಯವಾದಗಳು. ಮುಂಬರುವ ವಾರಗಳಲ್ಲಿ ಬರ್ಮಿಂಗ್‌ ಹ್ಯಾಮ್‌ನಲ್ಲಿ ದೇಶದ ಅಥ್ಲೀಟ್‌ಗಳನ್ನು ಹುರಿದುಂಬಿಸಲು ನನ್ನೊಂದಿಗೆ ನೀವೆಲ್ಲರೂ ಸಹಕರಿಸಿ" ಎಂದು ಅವರು ಮನವಿ ಮಾಡಿದ್ದಾರೆ.

ಒರೆಗನ್‌ನಲ್ಲಿ ನಡೆದ ವಿಶ್ವ ಅಥ್ಲೆಟಿಕ್ ಚಾಂಪಿಯನ್‌ಶಿಪ್‌ನಲ್ಲಿ 88.13 ಮೀಟರ್‌ ದೂರ ಜಾವೆಲಿನ್‌ ಎಸೆದು ಬೆಳ್ಳಿ ಪದಕ ಗೆದ್ದಿದ್ದ ನೀರಜ್‌ ಚೋಪ್ರಾ, ಪ್ರದರ್ಶನದ ವೇಳೆ ಗಾಯಗೊಂಡಿದ್ದರು. ವೈದ್ಯರ ತಂಡ ಅವರಿಗೆ ಒಂದು ತಿಂಗಳ ವಿಶ್ರಾಂತಿಗೆ ಸಲಹೆ ನೀಡಿದೆ. ಕಾಮನ್‌ವೆಲ್ತ್ ಗೇಮ್ಸ್‌ ಜುಲೈ 28 ರಂದು ಪ್ರಾರಂಭವಾಗುತ್ತದೆ.

ಇದನ್ನೂ ಓದಿ:ಗಾಯಗೊಂಡ ಜಾವೆಲಿನ್‌ ದೊರೆ ನೀರಜ್​ ಚೋಪ್ರಾ ಕಾಮನ್​ವೆಲ್ತ್​ ಗೇಮ್ಸ್​ನಿಂದ ಔಟ್​

ABOUT THE AUTHOR

...view details