ಪಾಣಿಪತ್ (ಹರಿಯಾಣ):ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರಿಗೆ ಸೇರಿದ ಕಾರಿಗೆ ಹರಿಯಾಣದ ಸಾರಿಗೆ ಬಸ್ ಡಿಕ್ಕಿ ಹೊಡೆದ ಘಟನೆ ಪಾಣಿಪತ್ನಲ್ಲಿ ನಡೆದಿದೆ. ಆದರೆ, ನೀರಜ್ ಚೋಪ್ರಾ ಇರಲಿಲ್ಲ. ಅವರ ಚಿಕ್ಕಪ್ಪ ಭೀಮ್ ಚೋಪ್ರಾ ಪ್ರಯಾಣಿಸುತ್ತಿದ್ದರು. ಈ ಘಟನೆಯಲ್ಲಿ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ನೀರಜ್ ಚೋಪ್ರಾ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆದ್ದಾಗ ಈ ಕಾರನ್ನು ಉಡುಗೊರೆಯಾಗಿ ಪಡೆದರು. ಶುಕ್ರವಾರ ಚಿಕ್ಕಪ್ಪ ಭೀಮ್ ಚೋಪ್ರಾ ಕಾರು ತೆಗೆದುಕೊಂಡು ಹೊರ ಬಂದಾಗ ಮಾರ್ಗ ಮಧ್ಯೆ ಬಸ್ ಡಿಕ್ಕಿ ಹೊಡೆದಿದೆ. ಇದರಿಂದ ಕಾರು ಜಖಂಗೊಂಡಿದ್ದು, ಕಾರಿನಲ್ಲಿದ್ದ ಚಿಕ್ಕಪ್ಪನಿಗೆ ಯಾವುದೇ ಗಾಯಗಳು ಆಗಿಲ್ಲ.