ಕರ್ನಾಟಕ

karnataka

ETV Bharat / bharat

ರೈತರು ನಮ್ಮದೇ ರಕ್ತ, ಮಾಂಸಗಳು, ಅವರನ್ನ ಗೌರವಯುತವಾಗಿ ನಡೆಸಿಕೊಳ್ಳಬೇಕು : ಸಂಸದ ವರುಣ್ ಗಾಂಧಿ

ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರನ್ನು ನಾವು ಗೌರವಪೂರ್ಣವಾಗಿ ನಡೆಸಿಕೊಳ್ಳಬೇಕು. ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ವಿವಾದಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕು..

Need to start re-engaging with protesting farmers, understand their pain: Varun Gandhi
ಅವರು ನಮ್ಮದೇ ರಕ್ತ, ಮಾಂಸಗಳು, ಗೌರವಯುತವಾಗಿ ನಡೆಸಿಕೊರಳ್ಳಬೇಕು: ಸಂಸದ ವರುಣ್ ಗಾಂಧಿ

By

Published : Sep 5, 2021, 4:04 PM IST

ನವದೆಹಲಿ :ಮೂರು ನೂತನ ಕೃಷಿ ಕಾಯ್ದೆಗಳ ವಿಚಾರಕ್ಕೆ ಸಂಬಂಧಿಸಿದಂತೆ ಬಿಜೆಪಿ ಸಂಸದ ವರುಣ್ ಗಾಂಧಿ ಪ್ರತಿಕ್ರಿಯೆ ನೀಡಿದ್ದಾರೆ. ರೈತರು ನಮ್ಮದೇ ಮಾಂಸ ಮತ್ತು ರಕ್ತಗಳಿದ್ದಂತೆ ಎಂದಿದ್ದಾರೆ. ಜೊತೆಗೆ ಕೇಂದ್ರ ಸರ್ಕಾರ ರೈತರೊಡನೆ ಮತ್ತೆ ಮಾತುಕತೆ ನಡೆಸಿ, ವಿವಾದಕ್ಕೆ ಅಂತ್ಯವಾಡಬೇಕು ಎಂದು ಮನವಿ ಮಾಡಿದ್ದಾರೆ.

ಉತ್ತರಪ್ರದೇಶದ ಮುಜಾಫ್ಫರ್​​ನಗರದ ಸರ್ಕಾರಿ ಇಂಟರ್​ ಕಾಲೇಜು ಮೈದಾನದಲ್ಲಿ ಸಂಯುಕ್ತ ಕಿಸಾನ್ ಮೋರ್ಚಾ (ಎಸ್​ಕೆಎಂ) ಆಯೋಜಿಸಿದ್ದ ಮಹಾ ಪಂಚಾಯತ್ ಪ್ರತಿಭಟನಾ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಈ ರೀತಿಯಾಗಿ ರೈತರಿಗೆ ಬೆಂಬಲ ಸೂಚಿಸಿದ್ದಾರೆ.

ಲಕ್ಷಾಂತರ ರೈತರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ. ಅವರೆಲ್ಲರೂ ನಮ್ಮದೇ ಮಾಂಸ ಮತ್ತು ರಕ್ತ. ಅವರನ್ನು ನಾವು ಗೌರವಪೂರ್ಣವಾಗಿ ನಡೆಸಿಕೊಳ್ಳಬೇಕು. ಅವರ ನೋವನ್ನು ಅರ್ಥ ಮಾಡಿಕೊಳ್ಳಬೇಕು. ವಿವಾದಕ್ಕೆ ಅಂತ್ಯವಾಡುವ ನಿಟ್ಟಿನಲ್ಲಿ ಸರ್ಕಾರ ಕೆಲಸ ಮಾಡಬೇಕೆಂದು ವರುಣ್ ಗಾಂಧಿ ಅಭಿಪ್ರಾಯಪಟ್ಟಿದ್ದಾರೆ.

ಮುಂದಿನ ವರ್ಷ ಉತ್ತರಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಮಹಾಪಂಚಾಯತ್ ಪ್ರತಿಭಟನಾ ಕಾರ್ಯಕ್ರಮಗಳು ಪ್ರಾಮುಖ್ಯತೆ ಪಡೆದಿವೆ. ಈಗಾಗಲೇ ಕೇಂದ್ರ ಸರ್ಕಾರ ರೈತರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದು, ಅವೆಲ್ಲವೂ ವಿಫಲವಾಗಿವೆ.

ಇದನ್ನೂ ಓದಿ:ಹಿರಿತನ, ಅರ್ಹತೆ ಪರಿಗಣಿಸಿದ ನಂತರ ಹೈಕೋರ್ಟ್ ನ್ಯಾಯಾಧೀಶರ ನೇಮಕಾತಿ ಮಾಡಲಾಗುತ್ತದೆ : ಸುಪ್ರೀಂಕೋರ್ಟ್‌

ABOUT THE AUTHOR

...view details