ಮುಂಗೇಲಿ (ಛತ್ತೀಸ್‌ಗಢ): ಭಾರತವನ್ನು ವಿಶ್ವಗುರುವನ್ನಾಗಿ ಮಾಡಲು (make India a Vishwa guru) ಸಮನ್ವಯದಿಂದ ಒಟ್ಟಾಗಿ ಮುನ್ನಡೆಯುವ ಅಗತ್ಯವಿದೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ (RSS chief Mohan Bhagwat) ಹೇಳಿದ್ದಾರೆ.
ಛತ್ತೀಸ್‌ಗಢದ ಮುಂಗೇಲಿ ಜಿಲ್ಲೆಯಲ್ಲಿ ಆಯೋಜಿಸಲಾಗಿದ್ದ ಘೋಷ್ ಶಿಬಿರ (ಸಂಗೀತ ಶಿಬಿರ)ದಲ್ಲಿ ಮಾತನಾಡಿದ ಮೋಹನ್ ಭಾಗವತ್, "ನಾವು ಯಾರನ್ನೂ ಮತಾಂತರಗೊಳಿಸಬೇಕಾಗಿಲ್ಲ. ಆದರೆ, ಹೇಗೆ ಬದುಕಬೇಕೆಂದು ಕಲಿಸಬೇಕು. ನಾವು ಇಡೀ ಜಗತ್ತಿಗೆ ಅಂತಹ ಪಾಠವನ್ನು ನೀಡಲು ಭಾರತ ದೇಶದಲ್ಲಿ ಹುಟ್ಟಿದ್ದೇವೆ. ಯಾರ ಆರಾಧನಾ ವ್ಯವಸ್ಥೆಯನ್ನು ಬದಲಾಯಿಸದೇ ನಮ್ಮ ಪಂಥವು ಜನರನ್ನು ಒಳ್ಳೆಯ ಮನುಷ್ಯರನ್ನಾಗಿ ಮಾಡುತ್ತದೆ ಎಂದರು.