ಕರ್ನಾಟಕ

karnataka

ETV Bharat / bharat

'ಟೊಳ್ಳು ಭಾಷಣ, ಟೀಕಾ ಉತ್ಸವವಲ್ಲ..ಭಾರತಕ್ಕೆ ಪರಿಹಾರದ ಅವಶ್ಯಕತೆಯಿದೆ'

ಅರ್ಥಹೀನ ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳು ದೇಶಕ್ಕೆ ಅಗತ್ಯವಿಲ್ಲ, ಪರಿಹಾರದ ಅವಶ್ಯಕತೆಯಿದೆ ಎಂದು ರಾಹುಲ್ ಗಾಂಧಿ ಟ್ವೀಟ್​ ಮಾಡಿದ್ದಾರೆ.

Rahul Gandhi
ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ

By

Published : Apr 22, 2021, 11:42 AM IST

ನವದೆಹಲಿ: ವಿಶ್ವದಲ್ಲೇ ದಿನವೊಂದರಲ್ಲಿ ಪತ್ತೆಯಾದ ಅತೀ ಹೆಚ್ಚು ಕೋವಿಡ್​ ಕೇಸ್​ಗಳಿಗೆ ಭಾರತ ಸಾಕ್ಷಿಯಾಗುತ್ತಿದ್ದಂತೆಯೇ, ಸೋಂಕು ತಗುಲಿ ಕ್ವಾರಂಟೈನ್​ ಆಗಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕೇಂದ್ರದ ಪ್ರಧಾನಿ ಮೋದಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

"ಟೊಳ್ಳು ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳಲ್ಲ.. ಭಾರತಕ್ಕೆ ಪರಿಹಾರದ ಅವಶ್ಯಕತೆಯಿದೆ" ಎಂದು ಈ ತಿಂಗಳ ಆರಂಭದಲ್ಲಿ ಪಿಎಂ ಮೋದಿ ಕರೆ ನೀಡಿದ್ದ ನಾಲ್ಕು 4 ದಿನಗಳ ಟೀಕಾ ಉತ್ಸವ ಹಾಗೂ ಮಂಗಳವಾರ ಮಾಡಿದ್ದ ಭಾಷಣ ವ್ಯರ್ಥವೆಂದು ಕೈ ನಾಯಕ ಟ್ವೀಟ್​ ಮಾಡಿದ್ದಾರೆ.

ಹಿಂದಿಯಲ್ಲಿ ಟ್ವೀಟ್ ಮಾಡಿರುವ ರಾಗಾ, "ನಾನು ಮನೆಯಲ್ಲಿಯೇ ಕ್ವಾರಂಟೈನ್​ಗೆ ಒಳಗಾಗಿದ್ದೇನೆ ಮತ್ತು ದೇಶಾದ್ಯಂತ ದುರಂತ ಕಥೆಗಳು ವರದಿಯಾಗುತ್ತಿರುವುದನ್ನು ನೋಡುತ್ತಿದ್ದೇನೆ. ಭಾರತವು ಕೇವಲ ಕೋವಿಡ್​ ಬಿಕ್ಕಟ್ಟಿನಿಂದ ಬಳಲುತ್ತಿಲ್ಲ, ಸರ್ಕಾರದ ಜನ ವಿರೋಧಿ ನೀತಿಗಳಿಂದ ಬೇಸತ್ತಿದೆ. ಟೊಳ್ಳಾದ (ಅರ್ಥಹೀನ) ಭಾಷಣಗಳು ಮತ್ತು ಅನುಪಯುಕ್ತ ಹಬ್ಬಗಳು ದೇಶಕ್ಕೆ ಅಗತ್ಯವಿಲ್ಲ, ಪರಿಹಾರದ ಅವಶ್ಯಕತೆಯಿದೆ" ಎಂದು ಹೇಳಿದ್ದಾರೆ.

ಇದನ್ನೂ ಓದಿ: ದೇಶದಲ್ಲಿ ಒಂದೇ ದಿನ 3.14 ಲಕ್ಷ ಸೋಂಕಿತರು ಪತ್ತೆ, 2,104 ಮಂದಿ ಸಾವು

ಭಾರತದಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ 3,14,835 ಹೊಸ ಕೋವಿಡ್​ ಕೇಸ್​ಗಳು ದೃಢಪಟ್ಟಿದ್ದು, 2,104 ಸಾವು ವರದಿಯಾಗಿದೆ. ಅನೇಕ ರಾಜ್ಯಗಳಲ್ಲಿ ಆಮ್ಲಜನಕದ ಕೊರತೆಯಿಂದ ಕೊರೊನಾ ರೋಗಿಗಳು ಮೃತಪಡುತ್ತಿದ್ದಾರೆ.

ABOUT THE AUTHOR

...view details