ಕರ್ನಾಟಕ

karnataka

ETV Bharat / bharat

LPG ಸಂಪರ್ಕ ಬೇಕೇ? ಜಸ್ಟ್ ಒಂದು​ ಮಿಸ್ಡ್ ಕಾಲ್ ಕೊಡಿ ಸಾಕು..!

ಇಂಡಿಯನ್ ಆಯಿಲ್ ಕಾರ್ಪೊರೇಷನ್ (ಐಒಸಿ) ನಿಂದ ಹೊಸದಾಗಿ ಎಲ್‌ಪಿಜಿ ಸಂಪರ್ಕ ಬೇಕೇ? ಹಾಗಾದರೆ 8454955555 ನಂಬರ್​ಗೆ ಮಿಸ್ಡ್ ಕಾಲ್ ಕೊಡಿ.

new lpg connection
LPG ಸಂಪರ್ಕ

By

Published : Aug 9, 2021, 8:19 PM IST

ನವದೆಹಲಿ:ಭಾರತದ ಅತಿದೊಡ್ಡ ಎಲ್‌ಪಿಜಿ ರೀಟೇಲರ್​ ವ್ಯಾಪಾರಿ ಸಂಸ್ಥೆ ಇಂಡಿಯನ್ ಆಯಿಲ್ ಕಾರ್ಪೊರೇಶನ್ ದೇಶದ ಯಾವುದೇ ಮೂಲೆಯಲ್ಲಾದರೂ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಮಿಸ್ಡ್ ಕಾಲ್ ಸೌಲಭ್ಯವನ್ನು ಆರಂಭಿಸಿದೆ. 8454955555 ಗೆ ಮಿಸ್​​ ಕಾಲ್ ನೀಡುವ ಮೂಲಕ ಹೊಸ LPG ಸಿಲಿಂಡರ್​ ಬುಕ್ ಮಾಡಬಹುದು.

ಈಗಾಗಲೇ ಸಂಪರ್ಕ ಪಡೆದಿರುವ ಗ್ರಾಹಕರು ನೋಂದಾಯಿತ ಫೋನ್ ಸಂಖ್ಯೆಯಿಂದ ಮಿಸ್ಡ್ ಕಾಲ್ ನೀಡುವ ಮೂಲಕ LPG ರೀಫಿಲ್ ಅನ್ನು ಬುಕ್ ಮಾಡಬಹುದು. ಈ ಬಗ್ಗೆ ಪ್ರತಿಕ್ರಿಯಿಸಿರುವ ಐಒಸಿ ಅಧ್ಯಕ್ಷ ಎಸ್ ಎಂ ವೈದ್ಯ ದೇಶದಲ್ಲಿ ಎಲ್ಲಿಯಾದರೂ ಹೊಸ ಎಲ್‌ಪಿಜಿ ಸಂಪರ್ಕ ಪಡೆಯಲು ಮಿಸ್ಡ್ ಕಾಲ್ ಸೌಲಭ್ಯ ಆರಂಭಿಸಲಾಗಿದೆ ಎಂದು ಕಂಪನಿಯು ಹೇಳಿಕೆಯಲ್ಲಿ ತಿಳಿಸಿದೆ. ಗ್ರಾಹಕರ ಮನೆ ಬಾಗಿಲಿಗೆ ಡಬಲ್ ಬಾಟಲ್ ಕನೆಕ್ಷನ್​ (ಡಿಬಿಸಿ) ಪಡೆಯುವ ಸೌಲಭ್ಯಕ್ಕೆ ಅವರು ಚಾಲನೆ ನೀಡಿದರು.

ಈ ಉಪಕ್ರಮದ ಅಡಿ, ವಿತರಣಾ ಸಿಬ್ಬಂದಿ ಅಸ್ತಿತ್ವದಲ್ಲಿರುವ ಸಿಂಗಲ್ ಬಾಟಲ್ ಸಂಪರ್ಕಗಳನ್ನು (SBC) ಗ್ರಾಹಕರಿಗೆ DBC ಗೆ ಪರಿವರ್ತಿಸುವ ಆಯ್ಕೆಯನ್ನು ನೀಡುತ್ತಾರೆ. ಆಸಕ್ತ ಗ್ರಾಹಕರು ಸಾಮಾನ್ಯ 14.2 ಕೆಜಿ ಸಿಲಿಂಡರ್ ಬದಲಿಗೆ 5 ಕೆಜಿ ಸಿಲಿಂಡರ್ ಅನ್ನು ಬ್ಯಾಕಪ್ ಆಗಿ ಆಯ್ಕೆ ಮಾಡಬಹುದು."ಎಲ್ಲಾ ದೇಶೀಯ ಗ್ರಾಹಕರಿಗೆ ಹೊಸ ಎಲ್‌ಪಿಜಿ ಸಂಪರ್ಕವನ್ನು ಪಡೆಯಲು ಐಒಸಿ ತನ್ನ ಮಿಸ್ಡ್ ಕಾಲ್ ಸೌಲಭ್ಯವನ್ನು ವಿಸ್ತರಿಸಿದೆ.

ದೇಶಾದ್ಯಂತದ ನಿರೀಕ್ಷಿತ ಗ್ರಾಹಕರು ಹೊಸ ಸಂಪರ್ಕವನ್ನು ಪಡೆಯಲು 8454955555 ಗೆ ಮಿಸ್ಡ್ ಕಾಲ್ ನೀಡಬಹುದು ಎಂದು ಕಂಪನಿ ಹೇಳಿದೆ. ಪ್ರಸ್ತುತ, ಐಒಸಿ ಈ ಸೌಲಭ್ಯವನ್ನು ಒದಗಿಸುವ ಏಕೈಕ ತೈಲ ಮಾರುಕಟ್ಟೆ ಕಂಪನಿಯಾಗಿದೆ.

"ಗ್ರಾಹಕರು ತಮ್ಮ ಎಲ್‌ಪಿಜಿ ರೀಫಿಲ್​ಗಾಗಿ ಭಾರತ್ ಬಿಲ್ ಪಾವತಿ ವ್ಯವಸ್ಥೆ (ಬಿಬಿಪಿಎಸ್), ಇಂಡಿಯನ್ ಆಯಿಲ್ ಒನ್ ಆಪ್, ಅಥವಾ ಪೋರ್ಟಲ್ - https://cx.indianoil.in ಮೂಲಕ ಬುಕ್ ಮಾಡಬಹುದು ಮತ್ತು ವಾಟ್ಸ್​ಆ್ಯಪ್​ ಮೂಲಕ ರೀಫಿಲ್​ಗಾಗಿ ಬುಕ್ ಮಾಡಬಹುದು ಮತ್ತು ಪಾವತಿಸಬಹುದು (7588888824), SMS/IVRS (7718955555), ಅಥವಾ ಅಮೆಜಾನ್ ಮತ್ತು PayTM ಚಾನೆಲ್‌ಗಳಲ್ಲಿ ಅಲೆಕ್ಸಾ ಮೂಲಕವೂ ಮಾಡಬಹುದು ಎಂದು ಕಂಪನಿ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ABOUT THE AUTHOR

...view details