ಕರ್ನಾಟಕ

karnataka

ETV Bharat / bharat

ಬೆಂಗಳೂರಿಗೆ ಬರುತ್ತಿದ್ದ ಟ್ರಕ್‌ನಿಂದ 7 ಕೋಟಿ ರೂ. ಮೌಲ್ಯದ 9,000 ಮೊಬೈಲ್ ಲೂಟಿ! - Uttar Pradesh's Mathura

ರಿಯಾಲಿಟಿ ಮತ್ತು ಒಪ್ಪೋ ಕಂಪನಿಯ ಸುಮಾರು 9,000 ಮೊಬೈಲ್ ಫೋನ್​​ಗಳನ್ನು ಟ್ರಕ್​ನಿಂದ ಲೂಟಿ ಮಾಡಿ ಖದೀಮರು ಪರಾರಿಯಾಗಿದ್ದಾರೆ.

ಮೊಬೈಲ್ ಲೂಟಿ
ಮೊಬೈಲ್ ಲೂಟಿ

By

Published : Oct 17, 2021, 3:47 PM IST

ಮಥುರಾ (ಉತ್ತರ ಪ್ರದೇಶ): ಬೆಂಗಳೂರಿಗೆ ಬರುತ್ತಿದ್ದ ಟ್ರಕ್​ವೊಂದನ್ನು ಅಡ್ಡಗಟ್ಟಿದ ಅಪರಿಚಿತ ವ್ಯಕ್ತಿಗಳು ಟ್ರಕ್​ನಲ್ಲಿದ್ದ 7 ಕೋಟಿ ರೂ. ಮೌಲ್ಯದ ಸುಮಾರು 9,000 ಮೊಬೈಲ್ ಫೋನ್​​ಗಳನ್ನು ಲೂಟಿ ಮಾಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಮಧ್ಯಪ್ರದೇಶದ ಶಿಯೋಪುರ್ ಜಿಲ್ಲೆಯಲ್ಲಿ ಅಕ್ಟೋಬರ್ 5 ರಂದು ಈ ಘಟನೆ ನಡೆದಿದ್ದು, ಟ್ರಕ್​ನಲ್ಲಿ ರಿಯಾಲಿಟಿ ಮತ್ತು ಒಪ್ಪೋ ಕಂಪನಿಯ ಮೊಬೈಲ್​ಗಳಿದ್ದವು. ಈ ಸಂಬಂಧ ಒಪ್ಪೋ ಮೊಬೈಲ್ ಕಂಪನಿಯ ಮ್ಯಾನೇಜರ್ ಸಚಿನ್ ಮಾನವ್ ಉತ್ತರ ಪ್ರದೇಶದ ಮಥುರಾದಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಆ ದಿನ ಬೆಳಗ್ಗೆ ಉತ್ತರ ಪ್ರದೇಶದ ಫಾರೂಖಾಬಾದ್ ಜಿಲ್ಲೆಯ ಚಾಲಕ ಮುನೀಶ್ ಯಾದವ್ ಎಂಬವರು ಮೊಬೈಲ್ ಫೋನ್‌ಗಳನ್ನು ಟ್ರಕ್​ನಲ್ಲಿ ಹೊತ್ತು ಗ್ರೇಟರ್ ನೋಯ್ಡಾದಿಂದ ಬೆಂಗಳೂರಿಗೆ ಬರುತ್ತಿದ್ದನು. ದಾರಿ ಮಧ್ಯೆ ಲಿಫ್ಟ್ ಕೇಳಿ ಕುಳಿತ ಇಬ್ಬರು ವ್ಯಕ್ತಿಗಳು ಶಿಯೋಪುರ್ ಜಿಲ್ಲೆಯಲ್ಲಿ ಚಾಲಕನನ್ನು ಹೊಡೆದು ಕೆಳಗೆ ದೂಕಿ, ಮೊಬೈಲ್​ ಫೋನ್​ಗಳನ್ನು ಲೂಟಿ ಮಾಡಿದ್ದಾರೆ. ಖಾಲಿ ಟ್ರಕ್​ ಅನ್ನು ಶಿಯೋಪುರ್ ಜಿಲ್ಲೆಯ ಮಾನ್ಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ:Watch: ದುರ್ಗಾ ಮೂರ್ತಿ ನಿಮಜ್ಜನಕ್ಕೆ ಹೊರಟವರ ಮೇಲೆ ಹರಿದ ಕಾರು

ಈ ಸಂಬಂಧ ದೂರು ದಾಖಲಿಸಿಕೊಳ್ಳಲು ಮಧ್ಯಪ್ರದೇಶ ಪೊಲೀಸರನ್ನು ನಿರಾಕರಿಸಿ ಕಾರಣ ಸಚಿನ್ ಮಾನವ್ ಅವರು ಮಥುರಾದಲ್ಲಿ ಕೇಸ್​ ದಾಖಲಿಸಿದ್ದಾರೆ. ಪ್ರಕರಣದ ತನಿಖೆಗಾಗಿ ವಿಶೇಷ ಪೊಲೀಸ್ ತಂಡವನ್ನು ರಚಿಸಲಾಗಿದ್ದು, ಈ ವಿಷಯದಲ್ಲಿ ಮಧ್ಯಪ್ರದೇಶ ಪೊಲೀಸರನ್ನು ಸಹ ಸಂಪರ್ಕಿಸಲಾಗುತ್ತಿದೆ ಎಂದು ಮಥುರಾ ಪೊಲೀಸ್​ ವರಿಷ್ಠಾಧಿಕಾರಿ ಮಾರ್ತಾಂಡ್ ಪ್ರಕಾಶ್ ಸಿಂಗ್ ಮಾಹಿತಿ ನೀಡಿದ್ದಾರೆ.

ABOUT THE AUTHOR

...view details