ನವದೆಹಲಿ: ಸುಮಾರು 400 ರೈಲ್ವೆ ನಿಲ್ದಾಣಗಳು 'ಕುಲ್ಹಾದ್' (ಮಣ್ಣಿನ ಕಪ್) ಗಳಲ್ಲಿ ಚಹಾ ವಿತರಿಸುತ್ತಿವೆ. ಭಾರತವನ್ನು ಪ್ಲಾಸ್ಟಿಕ್ ಮುಕ್ತವಾಗಿಸುವಲ್ಲಿ ರೈಲ್ವೆ ಇಲಾಖೆಯ ಕೊಡುಗೆಯಾಗಿ ದೇಶಾದ್ಯಂತ ಇದನ್ನು ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ ಎಂದು ಕೇಂದ್ರ ರೈಲ್ವೆ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
400 ರೈಲ್ವೆ ನಿಲ್ದಾಣಗಳು ಮಣ್ಣಿನ ಕಪ್ನಲ್ಲಿ ಟೀ ವಿತರಣೆ
ಈಗಾಗಲೇ ಸುಮಾರು 400 ರೈಲ್ವೆ ನಿಲ್ದಾಣಗಳಲ್ಲಿ ಮಣ್ಣಿನ ಕಪ್ಗಳಲ್ಲಿ ಟೀ, ಕಾಫಿ ನೀಡಲಾಗುತ್ತಿದ್ದು, ದೇಶಾದ್ಯಂತ ಇದನ್ನು ಜಾರಿಗೆ ತರಲು ಪ್ರಯತ್ನಗಳು ನಡೆಯುತ್ತಿವೆ.
ರಾಜಸ್ಥಾನದ ಅಲ್ವಾರ್ನಲ್ಲಿ ಹೊಸದಾಗಿ ಸ್ಥಾಪನೆಯಾದ ವಾಯುವ್ಯ ರೈಲ್ವೆಯ ಧಿಗವಾರ - ಬಂಡಿಕುಯಿ ವಿಭಾಗವನ್ನು ಉದ್ಘಾಟಿಸಿ ಮಾತನಾಡಿದ ಗೋಯಲ್, ಭಾರತೀಯ ರೈಲ್ವೆ ಹಂತ ಹಂತವಾಗಿ ವೇಗವಾಗಿ ಹಾಗೂ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ರೈಲ್ವೆ ನಿಲ್ದಾಣಗಳಲ್ಲಿ ಹೀಗೆ ಮಣ್ಣಿನ ಕಪ್ಗಳಲ್ಲಿ ಟೀ, ಕಾಫಿ ನೀಡುವುದರಿಂದ ಉದ್ಯೋಗವನ್ನೂ ಸೃಷ್ಟಿಸಿದಂತಾಗುತ್ತದೆ ಎಂದರು.
ರೈಲ್ವೆ ನಿಲ್ದಾಣ ಹಾಗೂ ಏರ್ಪೋರ್ಟ್ಗಳಲ್ಲಿ ಮಹತ್ವದ ಬದಲಾವಣೆ ತರಲು ಕೇಂದ್ರ ಸರ್ಕಾರ ಉದ್ದೇಶಿಸಿತ್ತು. ಇದರಂತೆ ಪಿಯೂಷ್ ಗೋಯಲ್ ದೇಶದ 100 ರೈಲ್ವೆ ನಿಲ್ದಾಣಗಳಲ್ಲಿ ಚಹಾ, ಕಾಫಿ ವಿತರಣೆಗೆ ಮಣ್ಣಿನ ಕಪ್ ಕಡ್ಡಾಯಗೊಳಿಸಿದ್ದರು.