ನವದೆಹಲಿ: ಭಾರತದಲ್ಲಿ ಈವರೆಗೆ ಸುಮಾರು 18 ಕೋಟಿ ಡೋಸ್ ಕೋವಿಡ್-19 ಲಸಿಕೆ ನೀಡಲಾಗಿದೆ. ಯುಎಸ್ನಲ್ಲಿ, ಈವರೆಗೆ 26 ಕೋಟಿ ಡೋಸ್ ವ್ಯಾಕ್ಸಿನ್ ನೀಡಲಾಗಿದೆ. ಆದ್ದರಿಂದ, ಭಾರತ ವ್ಯಾಕ್ಸಿನೇಷನ್ನಲ್ಲಿ ಮೂರನೇ ಸ್ಥಾನದಲ್ಲಿದೆ ಎಂದು ನೀತಿ ಆಯೋಗದ ಸದಸ್ಯ ಡಾ.ವಿ.ಕೆ.ಪಾಲ್ ತಿಳಿಸಿದ್ದಾರೆ.
ರಾಜ್ಯಗಳು ಹೊರಗಿನಿಂದ ಲಸಿಕೆಗಳನ್ನು ಖರೀದಿಸಬೇಕಾದರೆ, ಕೇಂದ್ರವು ಅನುಮತಿ ನೀಡಬೇಕು. ಲಸಿಕೆ ಉತ್ಪಾದಿಸುವ 2 ಕಂಪನಿಗಳು (ಕೋವ್ಯಾಕ್ಸಿನ್, ಕೋವಿಶೀಲ್ಡ್) ಇತರ ಕಂಪನಿಗಳೊಂದಿಗೆ ಫಾರ್ಮುಲಾ ಹಂಚಿಕೊಳ್ಳಬೇಕು. ಲಸಿಕೆಗಳನ್ನು 150 ರೂ.ಗಿಂತ ಹೆಚ್ಚು ಮಾರಾಟ ಮಾಡಲು ಅವರಿಗೆ ಅನುಮತಿ ಕೊಡಬಾರದು ಎಂದು ಕೇಂದ್ರ ಸಚಿವ ಡಾ.ಹರ್ಷವರ್ಧನ್ರಲ್ಲಿ ವಿ.ಕೆ.ಪಾಲ್ ಮನವಿ ಮಾಡಿದರು.