ನವದೆಹಲಿ:ಉಕ್ರೇನ್‌ನಲ್ಲಿ ಸಿಲುಕಿರುವ ಭಾರತೀಯರನ್ನು ಮರಳಿ ಕರೆತರಲು ಭಾರತ ಸರ್ಕಾರವು ಆಪರೇಷನ್ ಗಂಗಾ ಕಾರ್ಯಾಚರಣೆಯನ್ನು ಆರಂಭಿಸಿದೆ. ಈ ನಡುವೆಯೇ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಬುಧವಾರ ಉಕ್ರೇನ್‌ಗೆ ಪರಿಹಾರ ಸಾಮಗ್ರಿಗಳನ್ನು ಕಳುಹಿಸಿದೆ.
ಎನ್ಡಿಆರ್ಎಫ್ ಉಕ್ರೇನ್‌ನ ಜನರಿಗೆ ಹೊದಿಕೆಗಳು, ಮಲಗುವ ಚಾಪೆಗಳು ಮತ್ತು ಸೋಲಾರ್ ಸ್ಟಡಿ ಲ್ಯಾಂಪ್‌ಗಳು ಸೇರಿದಂತೆ ಪರಿಹಾರ ಸಾಮಗ್ರಿಗಳನ್ನು ಒದಗಿಸಿದೆ. ಪರಿಹಾರ ಸಾಮಗ್ರಿಗಳನ್ನು ಕೊಂಡೊಯ್ಯುತ್ತಿರುವ ಫೋಟೋಗಳನ್ನು ಟ್ವಿಟರ್ನಲ್ಲಿ ಹಂಚಿಕೊಳ್ಳಲಾಗಿದೆ.
ಬುಧವಾರ ಬೆಳಗ್ಗೆ ಪೋಲೆಂಡ್‌ಗೆ ತೆರಳಿದ ವಿಮಾನದ ಮೂಲಕ ಮತ್ತು ಮಧ್ಯಾಹ್ನ ರೊಮೇನಿಯಾಗೆ ತೆರಳಿರುವ ಭಾರತೀಯ ವಾಯುಪಡೆಯ ಮತ್ತೊಂದು ವಿಮಾನದ ಮೂಲಕ ಪರಿಹಾರ ಸಾಮಗ್ರಿಗಳನ್ನು ಕಳುಹಿಸಲಾಗಿದೆ ಎಂದು ಗೃಹ ಸಚಿವಾಲಯ ತಿಳಿಸಿದೆ.