ಕರ್ನಾಟಕ

karnataka

ETV Bharat / bharat

ನಾಗಾಲ್ಯಾಂಡ್​​ನ ಡುಕೌ ಕಣಿವೆಯಲ್ಲಿ ಕಾಡ್ಗಿಚ್ಚು : ಎನ್​ಡಿಆರ್​ಎಫ್​ನ ಸಹಾಯಕ ಸಬ್​ಇನ್ಸ್‌ಪೆಕ್ಟರ್​​ ಸಾವು - Dzukou Valley in Nagaland

ಜನವರಿ 1ರ ರಾತ್ರಿಯಿಂದ ಬೆಂಕಿ ನಂದಿಸಲು ಐಎಎಫ್ ಚಾಪರ್‌ಗಳನ್ನು ನಿಯೋಜಿಸಲಾಗಿದೆ. ಆದಾಗ್ಯೂ ಕಣಿವೆಯಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಪರಿಣಾಮ ಬೆಂಕಿ ಹರಡುತ್ತಿದೆ..

ಎನ್​ಡಿಆರ್​ಎಫ್​ನ ಸಹಾಯಕ ಸಬ್​ಇನ್​ಸ್ಪೆಕ್ಟರ್​​ ಸಾವು
ಎನ್​ಡಿಆರ್​ಎಫ್​ನ ಸಹಾಯಕ ಸಬ್​ಇನ್​ಸ್ಪೆಕ್ಟರ್​​ ಸಾವು

By

Published : Jan 6, 2021, 4:56 PM IST

ತೇಜ್‌ಪುರ :ನಾಗಾಲ್ಯಾಂಡ್​​ನ ಡುಕೌ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಉಂಟಾಗಿದೆ. ಇದನ್ನು ನಂದಿಸಲು ತೆರಳಿದ್ದ ಎನ್​ಡಿಆರ್​ಎಫ್​ನ ಸಹಾಯಕ ಸಬ್​ ಇನ್​ಸ್ಪೆಕ್ಟರ್​​ ಮೃತಪಟ್ಟಿದ್ದಾರೆ.

ಕಳೆದ ಏಳು ದಿನಗಳಿಂದ ಡುಕೌ ಕಣಿವೆಯಲ್ಲಿನ ಅರಣ್ಯ ಪ್ರದೇಶದಲ್ಲಿ ಕಾಡ್ಗಿಚ್ಚು ಹಬ್ಬಿದೆ. ಈ ಬೆಂಕಿ ನಂದಿಸಲು ತೆರಳಿದ್ದ ತಂಡದಲ್ಲಿದ್ದ ಎನ್‌ಡಿಆರ್‌ಎಫ್ ಅಧಿಕಾರಿ ಎನ್‌ ಬೊನಾಯ್ ಮೀಟೈ ಅವರು, ಮಂಗಳವಾರ ತಡರಾತ್ರಿ ಕಣಿವೆಗೆ ಹೋಗುವ ದಾರಿಯಲ್ಲಿ ಸ್ಥಾಪಿಸಲಾದ ಶಿಬಿರದಲ್ಲಿ ನಿಧನರಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಸಾವಿಗೆ ನಿಖರ ಕಾರಣವೇನು ಎಂದು ಇನ್ನೂ ತಿಳಿದಿಲ್ಲ ಎಂದು ಅಧಿಕಾರಿಗಳು ಹೇಳಿದ್ದಾರೆ.

ಓದಿ:ಬಿಪಿಎಫ್‌ ತ್ಯಜಿಸಿ ಬಿಜೆಪಿ ಸೇರಿದ್ದ ಅಸ್ಸೋಂನ ಹಿರಿಯ ಬಿಜೆಪಿ ಮುಖಂಡನ ಮಗ ನಾಪತ್ತೆ

ಮಣಿಪುರದ ಸಿಎಂ ಎನ್. ಬಿರೇನ್‌ ಸಿಂಗ್ ಅವರು ಸಬ್​​ಇನ್ಸ್‌ಪೆಕ್ಟರ್​ ಸಾವಿಗೆ ಸಂತಾಪ ಸೂಚಿಸಿದ್ದು, ಬುಧವಾರ ಅವರ ನಿವಾಸಕ್ಕೆ ಭೇಟಿ ನೀಡಿ ಕುಟುಂಬಸ್ಥರಿಗೆ ಧೈರ್ಯ ತುಂಬಿದರು. ನಾಗಾಲ್ಯಾಂಡ್ ಮತ್ತು ಮಣಿಪುರ ಸರ್ಕಾರಗಳು ಒಂದುಗೂಡಿ ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ಭಾರತೀಯ ವಾಯುಪಡೆ ಮತ್ತು ಸ್ಥಳೀಯ ಸ್ವಯಂಸೇವಕರ ಸಹಾಯದೊಂದಿಗೆ ಬೆಂಕಿ ನಂದಿಸುವಲ್ಲಿ ಕಾರ್ಯನಿರತರಾಗಿದ್ದಾರೆ.

ಜನವರಿ 1ರ ರಾತ್ರಿಯಿಂದ ಬೆಂಕಿ ನಂದಿಸಲು ಐಎಎಫ್ ಚಾಪರ್‌ಗಳನ್ನು ನಿಯೋಜಿಸಲಾಗಿದೆ. ಆದಾಗ್ಯೂ ಕಣಿವೆಯಲ್ಲಿ ಹೆಚ್ಚು ಗಾಳಿ ಬೀಸುತ್ತಿದ್ದು, ಪರಿಣಾಮ ಬೆಂಕಿ ಹರಡುತ್ತಿದೆ.

ABOUT THE AUTHOR

...view details