ಕರ್ನಾಟಕ

karnataka

ನಮ್ಮ ಸರ್ಕಾರದ 8 ವರ್ಷ ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯಕ್ಕೆ ಮೀಸಲಾಗಿದೆ : ಪ್ರಧಾನಿ ಮೋದಿ

By

Published : May 20, 2022, 3:36 PM IST

Updated : May 20, 2022, 4:47 PM IST

ಈ ತಿಂಗಳು ಎನ್‌ಡಿಎ ಸರ್ಕಾರ ಎಂಟು ವರ್ಷಗಳನ್ನು ಪೂರೈಸುತ್ತದೆ. ಈ ಎಂಟು ವರ್ಷಗಳು ಸಂಕಲ್ಪಗಳು ಮತ್ತು ಸಾಧನೆಗಳಿಂದ ಕೂಡಿದೆ ಹಾಗೂ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಈಡೇರಿಸಿದೆ ಎಂದು ಮೋದಿ ಹೇಳಿದರು..

ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ
ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಮೋದಿ

ಜೈಪುರ: ಬಿಜೆಪಿ ನೇತೃತ್ವದ ಎನ್‌ಡಿಎ ಸರ್ಕಾರ ತನ್ನ ಎಂಟು ವರ್ಷಗಳ ಅವಧಿಯನ್ನು ದೇಶದ ಸಮತೋಲಿತ ಅಭಿವೃದ್ಧಿ, ಸಾಮಾಜಿಕ ನ್ಯಾಯ ಮತ್ತು ಸಾಮಾಜಿಕ ಭದ್ರತೆಗೆ ಮೀಸಲಿಟ್ಟಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಜೈಪುರದಲ್ಲಿ ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಬಿಜೆಪಿಯ ರಾಷ್ಟ್ರೀಯ ಪದಾಧಿಕಾರಿಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು, 2014ರ ನಂತರ ಸರ್ಕಾರದ ವಿತರಣಾ ಕಾರ್ಯವಿಧಾನದಲ್ಲಿ ಜನರ ನಂಬಿಕೆಯನ್ನು ಪುನಃಸ್ಥಾಪಿಸಲಾಗಿದೆ.

ಹೀಗಾಗಿ, ಯಾವುದೇ ಬಡವರು, ಅರ್ಹ ಫಲಾನುಭವಿಗಳು ಸರ್ಕಾರದ ಕಲ್ಯಾಣ ಕ್ರಮಗಳಿಂದ ಹೊರಗುಳಿಯದಂತೆ ಪ್ರಚಾರ ಪ್ರಾರಂಭಿಸುವಂತೆ ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಸೂಚಿಸಿದರು.

ಈ ತಿಂಗಳು ಎನ್‌ಡಿಎ ಸರ್ಕಾರ ಎಂಟು ವರ್ಷಗಳನ್ನು ಪೂರೈಸುತ್ತದೆ. ಈ ಎಂಟು ವರ್ಷಗಳು ಸಂಕಲ್ಪಗಳು ಮತ್ತು ಸಾಧನೆಗಳಿಂದ ಕೂಡಿದೆ ಹಾಗೂ ಸೇವೆ, ಉತ್ತಮ ಆಡಳಿತ ಮತ್ತು ಬಡವರ ಕಲ್ಯಾಣಕ್ಕೆ ಬದ್ಧವಾಗಿದೆ. ರೈತರು, ಕಾರ್ಮಿಕರು ಮತ್ತು ಮಧ್ಯಮ ವರ್ಗದವರ ನಿರೀಕ್ಷೆಗಳನ್ನು ಈಡೇರಿಸಿದೆ. ತಾಯಂದಿರು, ಹೆಣ್ಣು ಮಕ್ಕಳು ಮತ್ತು ಸಹೋದರಿಯರ ಸಬಲೀಕರಣಕ್ಕೆ ಮೀಸಲಾಗಿದೆ ಎಂದು ತಮ್ಮ ಸರ್ಕಾರದ ಸಾಧನೆ ಬಗ್ಗೆ ಹೇಳಿದರು.

2014ರ ನಂತರದ ಬಿಜೆಪಿ ಸರ್ಕಾರವು ಸರ್ಕಾರ ಹಾಗೂ ಅದರ ವ್ಯವಸ್ಥೆಗಳು ಮತ್ತು ವಿತರಣಾ ಕಾರ್ಯವಿಧಾನದ ಮೇಲಿನ ಜನರ ನಂಬಿಕೆಯನ್ನು ಮರುಸ್ಥಾಪಿಸಿದೆ. ಜಗತ್ತು ಇಂದು ಭಾರತದತ್ತ ಹೆಚ್ಚಿನ ನಿರೀಕ್ಷೆಯಿಂದ ನೋಡುತ್ತಿದೆ. ಅದೇ ರೀತಿ ಭಾರತದಲ್ಲಿಯೂ ಬಿಜೆಪಿ ಬಗ್ಗೆ ಜನತೆಗೆ ವಿಶೇಷ ಒಲವಿದೆ, ದೇಶದ ಜನತೆ ಬಿಜೆಪಿಯನ್ನು ಅಪಾರ ನಂಬಿಕೆ ಮತ್ತು ಭರವಸೆಯಿಂದ ನೋಡುತ್ತಿದ್ದಾರೆ ಎಂದರು.

ದೇಶದ ಜನರ ಈ ಭರವಸೆ ಮತ್ತು ಆಕಾಂಕ್ಷೆಗಳು ನಮ್ಮ ಜವಾಬ್ದಾರಿಯನ್ನು ಹೆಚ್ಚಿಸುತ್ತವೆ. ಸ್ವಾತಂತ್ರ್ಯದ 75ನೇ ವರ್ಷದಲ್ಲಿ ದೇಶವು ಮುಂದಿನ 25 ವರ್ಷಗಳ ಗುರಿಗಳನ್ನು ಹೊಂದಿದೆ. ಮುಂದಿನ 25 ವರ್ಷಗಳ ಗುರಿಗಳನ್ನು ನಿಗದಿಪಡಿಸಲು ಮತ್ತು ಅದಕ್ಕಾಗಿ ನಿರಂತರವಾಗಿ ಕೆಲಸ ಮಾಡಲು ಬಿಜೆಪಿಗೆ ಇದು ಸಮಯ. ಕೆಲವು ರಾಜಕೀಯ ಪಕ್ಷಗಳು ತಮ್ಮ ಸ್ವಾರ್ಥಕ್ಕಾಗಿ ವಿಷಬೀಜ ಬಿತ್ತಲು ಉದ್ವಿಗ್ನತೆಯ ಸಣ್ಣ ಘಟನೆಗಳನ್ನು ಹುಡುಕುತ್ತಲೇ ಇರುತ್ತವೆ ಎಂದು ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದರು.

ಇದನ್ನೂ ಓದಿ: ಮದುವೆಯಾಗಬೇಕಿದ್ದವ ಮಸಣ ಸೇರಿದ: ಕನ್ಯೆ ನೋಡಿ ವಾಪಸಾಗುವಾಗ ಹಳ್ಳದಲ್ಲಿ ಕೊಚ್ಚಿ ಹೋದ ಯುವಕ

Last Updated : May 20, 2022, 4:47 PM IST

ABOUT THE AUTHOR

...view details