ಕೊಚ್ಚಿ (ಕೇರಳ):ಕೇರಳದ ಎನ್‌ಡಿಎಯ ಭಾಗವಾಗಿದ್ದ ಭಾರತ್ ಧರ್ಮ ಜನಸೇನೆ (ಬಿಡಿಜೆಎಸ್) ಪಕ್ಷವು ಮೈತ್ರಿಕೂಟದೊಂದಿಗಿನ ಸಂಬಂಧವನ್ನು ಕಡಿತಗೊಳಿಸಿ ಯುಡಿಎಫ್ನೊಂದಿಗೆ ಸೇರುವುದಾಗಿ ಘೋಷಿಸಿದೆ.
ಕೇರಳ ವಿಧಾನಸಭಾ ಚುನಾವಣೆಯ ಹಿನ್ನೆಲೆ ಎಂ.ಕೆ. ನೀಲಕಂದನ್ ಮಾಸ್ಟರ್ ಅವರ ನೇತೃತ್ವದಲ್ಲಿ ಭಾರತೀಯ ಜನ ಸೇನಾ (ಬಿಜೆಎಸ್) ಎಂಬ ಹೊಸ ಪಕ್ಷ ರಚಿಸುವುದಾಗಿ ತಿಳಿಸಿದ್ದು, ಯುಡಿಎಫ್ನೊಂದಿಗೆ ಸೇರುವುದಾಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಲಾಗಿದೆ.
ಬಿಡಿಜೆಎಸ್ ಅನ್ನು ಬಿಜೆಪಿ ರಾಜಕೀಯ ಸಾಧನವಾಗಿ ಬಳಸುತ್ತಿದೆ ಎಂದು ಬಿಜೆಎಸ್ ಕಾರ್ಯಕಾರಿ ಅಧ್ಯಕ್ಷ ವಿ. ಗೋಪಕುಮಾರ್ ಆರೋಪಿಸಿದ್ದಾರೆ.
"ಈ ಕುರಿತು ನಮಗೆ ಅತೃಪ್ತಿ ಇರುವುದರಿಂದ ನಾವು ಒಂದು ನಿಮಿಷವೂ ಎನ್‌ಡಿಎಯಲ್ಲಿ ಮುಂದುವರಿಯಲು ಸಾಧ್ಯವಿಲ್ಲ. ಯುಡಿಎಫ್ ಅನ್ನು ಸಂಪೂರ್ಣವಾಗಿ ನಂಬುವ ಮೂಲಕ ಬಿಜೆಎಸ್ ಕಾರ್ಯನಿರ್ವಹಿಸಲಿದೆ. ಬಿಡಿಜೆಎಸ್ ಬಿಜೆಪಿಗೆ ಒಂದು ಸಾಧನವಲ್ಲ, ಹೀಗಾಗಿ ಹೊಸ ಪಕ್ಷವನ್ನು ರಚಿಸಲಾಗಿದೆ "ಎಂದು ಗೋಪಕುಮಾರ್ ಹೇಳಿದರು.