ಮುಂಬೈ:ಪತ್ರಚಾಲ್ ಹಗರಣದಲ್ಲಿ ಶಿವಸೇನಾ ಮುಖಂಡ ಸಂಜಯ್ ರಾವತ್ ಅವರನ್ನು ಇಡಿ ಈಗಾಗಲೇ ಬಂಧಿಸಿ ವಿಚಾರಣೆ ನಡೆಸುತ್ತಿದೆ. ಇದೇ ಪ್ರಕರಣದಲ್ಲಿ ಮತ್ತೊಬ್ಬ ಮಹಾನ್ ನಾಯಕನೂ ಭಾಗಿಯಾಗಿರುವ ಆರೋಪ ಕೇಳಿ ಬಂದಿದ್ದು, ಇಡಿ ಸಲ್ಲಿಸಿದ ಚಾರ್ಜ್ಶೀಟ್ನಲ್ಲಿ ಅವರ ಹೆಸರಿದೆ.
ಪತ್ರಚಾಲ್ ಪುನರಾಭಿವೃದ್ಧಿ ಯೋಜನೆಗೆ ಸಂಬಂಧಿಸಿದಂತೆ 2006 -07 ಸಂಜಯ್ ರಾವತ್ ಅವರು ಆಗಿನ ಕೇಂದ್ರ ಕೃಷಿ ಸಚಿವರ ಜೊತೆಗೂಡಿ ಸಭೆ ನಡೆಸಿದ್ದರು. ಕೇಂದ್ರ ಮಾಜಿ ಸಚಿವರು ಕೂಡ ಇದರಲ್ಲಿ ಭಾಗಿದಾರರು ಎಂದು ಇಡಿ ಸಲ್ಲಿಸಿರುವ ಚಾರ್ಜ್ ಶೀಟ್‌ನಲ್ಲಿ ಉಲ್ಲೇಖಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.