ಕರ್ನಾಟಕ

karnataka

ETV Bharat / bharat

ಎನ್​ಸಿಪಿ ನಾಯಕಿಯಾಗಿರುವ ವೈದ್ಯೆ ಮೇಲೆ ಚಾಕುವಿನಿಂದ ಹಲ್ಲೆ - Etv bharat kannada

ಪಾನ್ ಪನಾ ಟೋಕ್ಯಾ ಬಂಧನದಿಂದಾಗಿ ಎನ್​ಸಿಪಿ ನಾಯಕಿಯೂ ಆಗಿರುವ ವೈದ್ಯೆಯೊಬ್ಬರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.

ಎನ್​ಸಿಪಿ ನಾಯಕಿ ಡಾ. ಪ್ರಾಚಿ ಪವರ್​ ಮೇಲೆ ಚಾಕುವಿನಿಂದ ಹಲ್ಲೆ
ncp-leader-dr-prachi-power-was-attacked-with-a-knife

By

Published : Dec 14, 2022, 10:05 AM IST

ನಾಸಿಕ್(ಮಹಾರಾಷ್ಟ್ರ): ಇಲ್ಲಿನ ಮಣಿಶಂಕರ್ ಕಣ್ಣಿನ ಆಸ್ಪತ್ರೆಯ ನಿರ್ದೇಶಕಿಯೂ ಆಗಿರುವ ಎನ್​ಸಿಪಿ ನಾಯಕಿ ಡಾಕ್ಟರ್​​ ಪ್ರಾಚಿ ವಸಂತ್ ಪವಾರ್​ ಮೇಲೆ ದುಷ್ಕರ್ಮಿಗಳ ಗುಂಪೊಂದು ದಾಳಿ ನಡೆಸಿದೆ.

ಮಂಗಳವಾರ ಸಂಜೆ ಗೀರ್ವಾಣೆ ರಸ್ತೆಯ ಗೋವರ್ಧನ್‌ನಲ್ಲಿರುವ ಅವರ ತೋಟದ ಮನೆಯ ಬಳಿ ಕುಡುಕರ ಗುಂಪೊಂದು ಈ ದುಷ್ಕೃತ್ಯ ಎಸಗಿದೆ. ಅವರ ತೋಟದ ಮನೆಗೆ ನುಗ್ಗಿದ ಗುಂಪೊಂದು ಅವರಿಗೆ ಚಾಕು ಇರಿದು ಹಲ್ಲೆ ನಡೆಸಿರುವ ಘಟನೆ ನಡೆದಿದೆ.

ಪಾನ್ ಪನಾ ಟೋಕ್ಯಾ ಬಂಧನದಿಂದಾಗಿ ಅವರ ಮೇಲೆ ಈ ಹಲ್ಲೆ ನಡೆಸಲಾಗಿದೆ ಎನ್ನಲಾಗ್ತಿದೆ. ದುಷ್ಕರ್ಮಿಗಳು ಹಲ್ಲೆಗೆ ಮುಂದಾದ ವೇಳೆ ಅವರ ಕಿರುಚಾಟದಿಂದಾಗಿ ಸುತ್ತಮುತ್ತಲಿನ ಜನರು ದುಷ್ಕರ್ಮಿಗಳನ್ನು ಹಿಡಿಯಲು ಮುಂದಾಗಿದ್ದಾರೆ. ಆದರೆ, ಕತ್ತಲು ಇದ್ದ ಪರಿಣಾಮ ಅವರು ತಪ್ಪಿಸಿಕೊಂಡಿದ್ದಾರೆ.

ಗಾಯಗೊಂಡ ವೈದ್ಯೆಯನ್ನು ಸುಶ್ರುತ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಪೊಲೀಸರು ತನಿಖೆಗೆ ಮುಂದಾಗಿದ್ದಾರೆ. ಇನ್ನು, ಇದೇ ರಸ್ತೆಯಲ್ಲಿ ವಾರದ ಹಿಂದೆ ಗ್ಯಾಂಬ್‌ಮಟ್ ಜಮ್ಮಾತ್ ಹೋಟೆಲ್ ಬಳಿ ಇದೇ ರೀತಿಯ ಘಟನೆ ನಡೆದಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ.

ಇದನ್ನೂ ಓದಿ: ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್‌ಗೆ ಕೊಲೆ ಬೆದರಿಕೆ ಕರೆ

ABOUT THE AUTHOR

...view details