ಮುಂಬೈ (ಮಹಾರಾಷ್ಟ್ರ):ಕರ್ನಾಟಕದಲ್ಲಿ ಫಲಿತಾಂಶದ ನಂತರ ಮಹಾವಿಕಾಸ ಅಘಾಡಿಯಲ್ಲಿರುವ ಮೂರೂ ಪಕ್ಷಗಳಿಂದ ಚುಟುವಟಿಕೆ ಚುರುಕುಗೊಂಡಿರುವುದು ಕಂಡು ಬರುತ್ತಿದೆ. ಇಂದು ಮುಂಬೈನ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿ ಪ್ರಮುಖ ರಾಷ್ಟ್ರೀಯವಾದಿ ನಾಯಕರ ಸಭೆ ನಡೆಯಿತು. ಪಕ್ಷದ ಅಧ್ಯಕ್ಷ ಶರದ್ ಪವಾರ್ ನೇತೃತ್ವದಲ್ಲಿ ಸಭೆ ಜರುಗಿದೆ. ಪಕ್ಷದಲ್ಲಿನ ಕೆಲವು ಪದಾಧಿಕಾರಿಗಳು ಬದಲಾಗಲಿದ್ದಾರೆ. ಇದರಿಂದ ಎನ್‌ಸಿಪಿಯಲ್ಲಿ ರಾಜಕೀಯ ಚಟುವಟಿಕೆಗಳು ಚುರುಕಾಗಿದ್ದು, ಮತ್ತೊಮ್ಮೆ ರಣಕಹಳೆ ಮೊಳಗುತ್ತಿದೆ. ಇದರೊಂದಿಗೆ ರಾಷ್ಟ್ರೀಯವಾದಿಗಳು ಮುಂಬರುವ ಚುನಾವಣೆಗೆ ಪ್ರಬಲ ಯೋಜನೆಗಳನ್ನು ರೂಪಿಸಿದ್ದಾರೆ.
ಕೋರ್ ಕಮಿಟಿ ಸಭೆ:ಅಧ್ಯಕ್ಷ ಶರದ್ ಪವಾರ್ ಸಮ್ಮುಖದಲ್ಲಿ ಯಶವಂತರಾವ್ ಚವಾಣ್ ಸೆಂಟರ್‌ನಲ್ಲಿ ಎಲ್ಲ ಶಾಸಕರು ಹಾಗೂ ಮುಖಂಡರ ಸಭೆ ನಡೆಯಿತು. ಈ ಸಭೆಯಲ್ಲಿ ಶಾಸಕರು ತಮ್ಮ ಕ್ಷೇತ್ರಗಳ ಪರಿಶೀಲನೆ ನಡೆಸಿದರು. ವಿರೋಧ ಪಕ್ಷದ ನಾಯಕ ಅಜಿತ್ ಪವಾರ್, ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಹಿರಿಯ ನಾಯಕ ಛಗನ್ ಭುಜಬಲ್, ಮಾಜಿ ಗೃಹ ಸಚಿವ ಅನಿಲ್ ದೇಶಮುಖ್, ಜಿತೇಂದ್ರ ಅವದ್ ಎಲ್ಲ ಶಾಸಕರು ಉಪಸ್ಥಿತರಿದ್ದರು. ಈ ಸಭೆಯಲ್ಲಿ ಏನಾಯಿತು ಎಂದು ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಮಾಧ್ಯಮಗಳಿಗೆ ಮಾಹಿತಿ ನೀಡಿದರು.
ಪಕ್ಷ ಕಟ್ಟುವ ಜವಾಬ್ದಾರಿ 18 ನಾಯಕರ ಮೇಲಿದೆ:ಎನ್‌ಸಿಪಿ ಸಂಘಟನೆಯಲ್ಲಿ ಸದ್ಯದಲ್ಲೇ ಪಕ್ಷದ ಆಂತರಿಕ ಚುನಾವಣೆ ನಡೆಯಲಿದೆ. ಜಿಲ್ಲಾ ಮುಖ್ಯಸ್ಥರ ಬದಲಿಗೆ ತಾಲೂಕು ಮುಖ್ಯಸ್ಥರು ಬರುತ್ತಾರೆ. ಮೂರು ವರ್ಷಕ್ಕಿಂತ ಹೆಚ್ಚು ಕಾಲ ಒಂದೇ ಹುದ್ದೆಯಲ್ಲಿರುವವರನ್ನು ಸಹ ಬದಲಾಯಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಇಂದು ಪಕ್ಷದಿಂದ ಇಲಾಖೆವಾರು ಶಿಬಿರಗಳು ನಡೆಯಲಿವೆ. ಇದರಿಂದ ಪಕ್ಷದ ಬೆಳವಣಿಗೆಗೆ ಅನುಕೂಲವಾಗಲಿದೆ ಎನ್ನಲಾಗುತ್ತಿದೆ.
ಪಕ್ಷವನ್ನು ಬಲಪಡಿಸಲು ಬೂತ್ ಕಮಿಟಿ ನಿರ್ಮಾಣ ಕಾರ್ಯಕ್ರಮ ಕೈಗೆತ್ತಿಕೊಳ್ಳಲಾಗಿದೆ. ಪಕ್ಷ ಕಟ್ಟುವ ಜವಾಬ್ದಾರಿಯನ್ನು 18 ನಾಯಕರಿಗೆ ನೀಡಲಾಗಿದೆ. ಇಂದು ಲೋಕಸಭಾ ಕ್ಷೇತ್ರಗಳ ಬಗ್ಗೆ ಯಾವುದೇ ಚರ್ಚೆ ನಡೆಯಲಿಲ್ಲ. ಆದರೆ, ಈಗ ಏನು ನಡೆಯುತ್ತಿದೆಯೋ, ಭವಿಷ್ಯದಲ್ಲೀ ಅದೇ ನಡೆಯುತ್ತದೆ. ರಾಜ್ಯದಲ್ಲಿ 48 ಲೋಕಸಭಾ ಕ್ಷೇತ್ರಗಳಿದ್ದು, ಮಹಾವಿಕಾಸ ಅಘಾಡಿಯಲ್ಲಿ ಆ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿಯನ್ನು ಪಕ್ಷಗಳಿಂದ ಪರಿಗಣಿಸಲಾಗುವುದು ಎಂದು ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ತಿಳಿಸಿದರು.
ಪಟ್ಟಾಭಿಷೇಕ ದಿನವನ್ನು ಒಟ್ಟಾಗಿ ಆಚರಿಸಲು ನಿರ್ಧಾರ:ಈ ರಾಜ್ಯವು ಛತ್ರಪತಿ ಶಿವಾಜಿ ಮಹಾರಾಜರ ಪಟ್ಟಾಭಿಷೇಕ ಮಹೋತ್ಸವವನ್ನು 349 ವರ್ಷಗಳಿಂದ ಆಚರಿಸಲಾಗುತ್ತಿದೆ. ಛತ್ರಪತಿ ಶಿವಾಜಿ ಮಹಾರಾಜರನ್ನು ಆರಾಧ್ಯ ದೈವವೆಂದು ಪರಿಗಣಿಸಲಾಗಿದೆ. ಜೂನ್ 6 ರಂದು ಎನ್‌ಸಿಪಿ ರಾಜ್ಯಾದ್ಯಂತ ವಿವಿಧ ಕಾರ್ಯಕ್ರಮಗಳ ಮೂಲಕ ಆಚರಿಸಲಿದೆ. ಜೂನ್ 10 ಎನ್‌ಸಿಪಿಯ ವಾರ್ಷಿಕೋತ್ಸವ, ಪಕ್ಷ 25ನೇ ವರ್ಷಕ್ಕೆ ಕಾಲಿಡುತ್ತಿದೆ. ಈ ವಾರ್ಷಿಕೋತ್ಸವ ಕಾರ್ಯಕ್ರಮವು ಅಹಮದ್‌ನಗರದಲ್ಲಿ ನಡೆಯಲಿದೆ.