ನವದೆಹಲಿ:INDIA ಮತ್ತು ಭಾರತ ಹೆಸರು ಮತ್ತೆ ಮುನ್ನೆಲೆಗೆ ಬಂದಿದೆ. ಜಿ20 ಶೃಂಗಸಭೆ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರ ಆಸನದ ಮುಂದೆ ಮತ್ತು ಗಣ್ಯರಿಗೆ ರಾಷ್ಟ್ರಪತಿಗಳ ಆಹ್ವಾನ ಪತ್ರಿಕೆಯಲ್ಲಿ 'ಭಾರತ' ಎಂದಿರುವುದು ಭಾರೀ ಚರ್ಚೆಗೆ ಗ್ರಾಸವಾಗಿತ್ತು. ಇದೀಗ ಶಾಲಾ ಪಠ್ಯಕ್ರಮಗಳಲ್ಲಿ ಇಂಡಿಯಾ ಬದಲಿಗೆ ಭಾರತ ಎಂದು ಬದಲಿಸಲು ರಾಷ್ಟ್ರೀಯ ಶೈಕ್ಷಣಿಕ ಸಂಶೋಧನೆ ಮತ್ತು ತರಬೇತಿ ಮಂಡಳಿಯ (ಎನ್‌ಸಿಇಆರ್‌ಟಿ) ಉನ್ನತ ಸಮಿಯು ಶಿಫಾರಸು ಮಾಡಿದೆ.
ಸಮಿತಿಯ ಅಧ್ಯಕ್ಷ ಸಿಐ ಐಸಾಕ್ ಅವರು ಈ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದು, INDIA ಎಂಬ ಹೆಸರನ್ನು ಶಾಲಾ ಪಠ್ಯಕ್ರಮದಿಂದ ತೆಗೆದು 'ಭಾರತ' ಎಂದು ಬರೆಯಲು ಸೂಚಿಸಲಾಗಿದೆ. ಜೊತೆಗೆ 'ಪ್ರಾಚೀನ ಇತಿಹಾಸ'ವನ್ನು ತೆಗೆದುಹಾಕಿ ಅದರ ಬದಲಿಗೆ 'ಶಾಸ್ತ್ರೀಯ ಇತಿಹಾಸ'ವನ್ನು ಮಕ್ಕಳಿಗೆ ಕಲಿಸುವ ಬಗ್ಗೆಯೂ ಶಿಫಾರಸು ಮಾಡಲಾಗಿದೆ ಎಂದು ಹೇಳಿದರು.
ಇಂಡಿಯಾ ಬ್ರಿಟಿಷರು ಕೊಟ್ಟ ಪದ:ಎನ್‌ಸಿಇಆರ್‌ಟಿಯ ಏಳು ಸದಸ್ಯರ ಸಮಿತಿಯು ಈ ಎಲ್ಲಾ ಶಿಫಾರಸುಗಳನ್ನು ಸರ್ವಾನುಮತದಿಂದ ಅಂಗೀಕರಿಸಿದೆ. ಭಾರತ ಎಂಬ ಹೆಸರು ಪ್ರಾಚೀನ ಕಾಲದಿಂದ ಬಂದಿದೆ. 7 ಸಾವಿರ ವರ್ಷಗಳಷ್ಟು ಹಳೆಯದಾದ ವಿಷ್ಣು ಪುರಾಣದಂತಹ ಪ್ರಾಚೀನ ಗ್ರಂಥಗಳಲ್ಲಿ 'ಭಾರತ' ಎಂಬ ಹೆಸರಿದೆ. 'ಈಸ್ಟ್ ಇಂಡಿಯಾ ಕಂಪನಿಯ ಸ್ಥಾಪನೆ, 1757ರಲ್ಲಿ ಪ್ಲಾಸಿ ಕದನದ ನಂತರವೇ INDIA ಎಂಬ ಪದವು ಬಳಕೆಗೆ ಬಂದಿತು. ಆದ್ದರಿಂದ ಎಲ್ಲ ವರ್ಗದ ಪುಸ್ತಕಗಳಲ್ಲಿ INDIA ಬದಲಿಗೆ ಭಾರತ ಎಂಬ ಹೆಸರನ್ನು ಬಳಸಬೇಕು ಎಂದು ಸಮಿತಿ ಒಮ್ಮತದಿಂದ ಸೂಚಿಸಿದೆ.
ಬ್ರಿಟಿಷರು ಭಾರತೀಯ ಇತಿಹಾಸವನ್ನು ಮೂರು ಹಂತಗಳಾಗಿ ವಿಂಗಡಿಸಿದ್ದಾರೆ. ಪ್ರಾಚೀನ, ಮಧ್ಯಕಾಲೀನ ಮತ್ತು ಆಧುನಿಕ ಇದರಲ್ಲಿ ಭಾರತವನ್ನು ಕತ್ತಲೆಯಲ್ಲಿ ತೋರಿಸಲಾಗಿದೆ. ವೈಜ್ಞಾನಿಕ ಜ್ಞಾನ ಮತ್ತು ಪ್ರಗತಿಯ ಅಜ್ಞಾನ. ಆದಾಗ್ಯೂ, ಆ ಯುಗದಲ್ಲಿ ಭಾರತದ ಸಾಧನೆಗಳ ಅನೇಕ ಉದಾಹರಣೆಗಳು ಸೌರವ್ಯೂಹದ ಮಾದರಿಯಲ್ಲಿ ಆರ್ಯಭಟನ ಕೆಲಸವನ್ನು ಒಳಗೊಂಡಿವೆ.