ನವದೆಹಲಿ: ಭಾರತದ 74ನೇ ಗಣರಾಜ್ಯೋತ್ಸವ ಆಚರಣೆಗೆ ಎರಡೇ ದಿನಗಳು ಉಳಿದಿದ್ದು, ರಾಷ್ಟ್ರ ರಾಜಧಾನಿ ನವದಹೆಲಿಯಲ್ಲಿ ಗಣರಾಜ್ಯೋತ್ಸವ ಪರೇಡ್ಗೆ ಸಿದ್ಧತೆ ಭರದಿಂದ ಸಾಗಿದೆ. ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್ (ಎನ್‌ಸಿಸಿ)ನ 148 ಮಹಿಳಾ ಕೆಡೆಟ್ಗಳು ಕವಾಯತು ಮಾಡಲು ಆಯ್ಕೆಗೊಂಡಿದ್ದಾರೆ. ಕೆಡೆಟ್ಗಳು ಹುರುಪು ಹಾಗೂ ಉತ್ಸಾಹದಿಂದ ಭಾಗವಹಿಸಲು ಸಜ್ಜಾಗಿದ್ದಾರೆ.
ದೇಶದ ಮೊದಲ ಪ್ರಜೆ ಮಹಿಳಾ ರಾಷ್ಟ್ರಪತಿ ಆಗಿರುವುದು ಹೆಮ್ಮೆ: ಜಮ್ಮು ಕಾಶ್ಮೀರ ಮತ್ತು ಲಡಾಖ್ ನಿರ್ದೇಶನಾಲಯದ 20 ವರ್ಷದ ಯುವತಿ ಈಟಿವಿ ಭಾರತದೊಂದಿಗೆ ಮಾತನಾಡಿ, ಈ ಅವಕಾಶಕ್ಕಾಗಿ ಕಾಯುತ್ತಿದ್ದೆ, ಈಗ ನನ್ನ ಕನಸು ನನಸಾಗಿದೆ. ಇದು ನನಗೆ ಹೆಮ್ಮೆಯ ಕ್ಷಣ. ಏಕೆಂದರೆ ನಾನು ಮೊದಲ ಬಾರಿಗೆ ಗಣರಾಜ್ಯೋತ್ಸವದ ತಂಡದೊಂದಿಗೆ ಕರ್ತವ್ಯ ಪಥದಲ್ಲಿ ಮೆರವಣಿಗೆಯಲ್ಲಿ ಭಾಗವಹಿಸುತ್ತಿದ್ದೇನೆ. ಇಂದು ಈ ಕನಸು ಈಡೇರಿದೆ. ದೇಶದಲ್ಲಿ ಮಹಿಳಾ ಸಬಲೀಕರಣಕ್ಕೆ ಹೆಚ್ಚು ಒತ್ತು ನೀಡಲಾಗಿದೆ. ನಮ್ಮ ದೇಶವನ್ನು ಮಹಿಳಾ ರಾಷ್ಟ್ರಪತಿಗಳು ಮುನ್ನೆಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದು ತಿಳಿಸಿದ್ದಾರೆ.
ವಾಸ್ತವವಾಗಿ ಗಣರಾಜ್ಯೋತ್ಸವದ ಪರೇಡ್‌ನ ಬಹುತೇಕ ಎಲ್ಲ ಮೆರವಣಿಗೆಯ ಪಡೆಗಳು ಸಹ ಮಹಿಳಾ ನೇತೃತ್ವದಲ್ಲಿ ನಡೆಯುತ್ತಿವೆ. ಇದು ಮಹಿಳೆಯರಿಗೆ ಉತ್ತಮ ಪ್ರೇರಣೆ. ಸಮಾಜದ ಎಲ್ಲ ಸಂಕೋಲೆಗಳನ್ನು ಮೀರಿ, ಜಮ್ಮು ಕಾಶ್ಮೀರ ಪ್ರದೇಶದ ಹುಡುಗಿಯರು ಇಂದು ಗಣರಾಜ್ಯೋತ್ಸವ ಪರೇಡ್‌ನಲ್ಲಿ ಪ್ರಥಮ ಬಾರಿಗೆ ಪರೇಡ್ ಪಥಸಂಚಲನದಲ್ಲಿ ಭಾಗವಹಿಸುತ್ತಿದ್ದಾರೆ. ಅಭಿವೃದ್ಧಿಯತ್ತ ಮುನ್ನುಗ್ಗುತ್ತಿರುವ ಭಾರತದ ಉತ್ತಮ ಹೆಜ್ಜೆ ಇಡುತ್ತಿದೆ ಎಂದು ಹೇಳಿದ್ದಾರೆ.
ಸಿಆರ್‌ಪಿಎಫ್, ನೌಕಾಪಡೆ ಆರ್‌ಡಿಸಿಯಲ್ಲೂ ಮಹಿಳೆಯರಿಗೆ ಆದ್ಯತೆ: ದೆಹಲಿ ನಿರ್ದೇಶನಾಲಯವನ್ನು ಪ್ರತಿನಿಧಿಸುತ್ತಿರುವ ಮತ್ತೊಬ್ಬ ಎನ್‌ಸಿಸಿ ಕೆಡೆಟ್ ಇಶಿತಾ ಶುಕ್ಲಾ ಮಾತನಾಡಿ, ನಾನು ಆರ್‌ಡಿಸಿ 2023 ರ ಪಡೆಯಲ್ಲಿ ಭಾಗವಹಿಸಿದ್ದೇನೆ. ಸಿಆರ್‌ಪಿಎಫ್ ಮತ್ತು ಭಾರತೀಯ ನೌಕಾಪಡೆ ಆರ್‌ಡಿಸಿ ಮಹಿಳೆಯರು ಮುನ್ನಡೆಸುತ್ತಿದ್ದು, ಅವರಿಂದ ಸ್ಫೂರ್ತಿಗೊಂಡಿದ್ದೇನೆ. ಅವರು ನನಗೆ ಸಶಸ್ತ್ರ ಪಡೆಗಳಿಗೆ ಸೇರಿಕೊಳ್ಳಿ ಎಂದು ಪ್ರೋತ್ಸಾಹಿಸಿದ್ದಾರೆ. ಪ್ರಸಕ್ತ ಸಾಲಿನ ಗಣರಾಜ್ಯೋತ್ಸವದಲ್ಲಿ ದೇಶದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರನ್ನು ವಂದಿಸುವ ತನ್ನ ತುಕಡಿಯ ಪಥಸಂಚಲನದ ಭಾಗವಾಗಿರುವುದಕ್ಕೆ ಹೆಮ್ಮೆಯಿದೆ ಎಂದು ತಿಳಿಸಿದ್ದಾರೆ.