ಮುಂಬೈ(ಮಹಾರಾಷ್ಟ್ರ): ಬಾಲಿವುಡ್ನಲ್ಲಿ ಸಾಕಷ್ಟು ಸಂಚಲನ ಸೃಷ್ಟಿಸಿದ್ದ ಕಾರ್ಡೆಲಿಯಾ ಕ್ರೂಸ್ ಡ್ರಗ್ ಪ್ರಕರಣದ ತನಿಖೆ ಇನ್ನೂ ನಡೆಯುತ್ತಿದೆ. ಈ ಪ್ರಕರಣದ ತನಿಖೆಯನ್ನು ಎನ್‌ಸಿಬಿ ಕೈಗೊಂಡಿದ್ದು, ಈ ಪ್ರಕರಣದ ಸಾಕ್ಷಿಯಾಗಿದ್ದ ಪ್ರಭಾಕರ್ ಸೈಲ್ ಶುಕ್ರವಾರ ನಿಧನರಾಗಿದ್ದಾರೆ. ಪ್ರಭಾಕರ ಸೈಲ್ ಅವರ ವಕೀಲರಾದ ತುಷಾರ್ ಖಂಡಾರೆ ಅವರ ಪ್ರಕಾರ, ಪ್ರಭಾಕರ್ ಸೈಲ್ ಚೆಂಬೂರಿನ ಮಹುಲ್ ಪ್ರದೇಶದ ತಮ್ಮ ನಿವಾಸದಲ್ಲಿ ಹೃದಯಾಘಾತದಿಂದ ಮೃತಪಟ್ಟಿದ್ದಾರೆ.
ಡ್ರಗ್ಸ್ ಪತ್ತೆ ಪ್ರಕರಣದಲ್ಲಿ ಬಾಲಿವುಡ್ ನಟ ಶಾರೂಖ್ ಖಾನ್ ಪುತ್ರ ಆರ್ಯನ್ ಖಾನ್ ಕೂಡಾ ಆರೋಪಿಯಾಗಿದ್ದು, ಇದೇ ವೇಳೆ ಪ್ರಭಾಕರ್ ಸೈಲ್ ಕೂಡಾ ಬೆಳಕಿಗೆ ಬಂದಿದ್ದರು. ಡ್ರಗ್ಸ್ ಪ್ರಕರಣದ ಪ್ರಮುಖ ವ್ಯಕ್ತಿಯಾದ ಕಿರಣ್ ಗೋಸಾವಿ ಅವರ ಅಂಗರಕ್ಷಕರಾಗಿದ್ದ ಪ್ರಭಾಕರ್ ಸೈಲ್ ಅವರು ಎನ್‌ಸಿಬಿ ಅಧಿಕಾರಿ ಸಮೀರ್ ವಾಂಖೆಡೆ ವಿರುದ್ಧ ಸುಲಿಗೆ ಆರೋಪ ಮಾಡಿದ್ದರು.