ಮುಂಬೈ (ಮಹಾರಾಷ್ಟ್ರ):ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣ ಸಂಬಂಧದ ಡ್ರಗ್ಸ್ ಕೇಸ್ನಲ್ಲಿ ಸುಶಾಂತ್ರ ಅಂಗರಕ್ಷಕನಿಗೆ ಮಾದಕ ವಸ್ತು ನಿಯಂತ್ರಣ ದಳ (ಎನ್‌ಸಿಬಿ) ಸಮನ್ಸ್ ನೀಡಿದ್ದು, ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.
ನಿನ್ನೆಯಷ್ಟೇ ಸುಶಾಂತ್ರ ಬಾಡಿಗಾರ್ಡ್ನನ್ನು ವಿಚಾರಣೆಗೆ ಒಳಪಡಿಸಿದ್ದ ಎನ್‌ಸಿಬಿ ಇಂದು ಮತ್ತೆ ಸಮನ್ಸ್ ನೀಡಿದೆ. ಇನ್ನು ಪ್ರಕರಣ ಸಂಬಂಧ ನಿನ್ನೆ ಹರೀಶ್ ಖಾನ್ ಎಂಬ ಡ್ರಗ್ಸ್ ಪೆಡ್ಲರ್‌ನನ್ನು ಎನ್‌ಸಿಬಿ ಬಂಧಿಸಿತ್ತು.
ಇದನ್ನೂ ಓದಿ: ಸುಶಾಂತ್ ಸಿಂಗ್ ಸಾವು ಪ್ರಕರಣ: ಇಬ್ಬರು ಕೆಲಸಗಾರರ ವಿಚಾರಣೆ ನಡೆಸಿದ ಎನ್‌ಸಿಬಿ
ಮೇ 26ರಂದು ಎನ್‌ಸಿಬಿ ಮುಂಬೈ ಘಟಕವು ಸುಶಾಂತ್ ಸಿಂಗ್ ರಜಪೂತ್ ಅವರ ಫ್ಲಾಟ್‌ಮೇಟ್ ಸಿದ್ಧಾರ್ಥ್ ಪಿಥಾನಿಯನ್ನು ಹೈದರಾಬಾದ್‌ನಲ್ಲಿ ಬಂಧಿಸಿ, 1985ರ ಎನ್‌ಡಿಪಿಎಸ್ ಕಾಯ್ದೆಯಡಿ ಪಿಥಾನಿ ವಿರುದ್ಧ ಪ್ರಕರಣ ದಾಖಲಿಸಿದೆ. ಮುಂಬೈನ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ (ಸಿಎಂಎಂ) ನ್ಯಾಯಾಲಯವು ಪಿಥಾನಿಯನ್ನು ಜೂನ್ 1ರವರೆಗೆ ಎನ್‌ಸಿಬಿ ಕಸ್ಟಡಿಗೆ ನೀಡಿದೆ.
ಸಿದ್ಧಾರ್ಥ್ ಪಿಥಾನಿ ಬಂಧನದ ಬಳಿಕ ಸುಶಾಂತ್ ಮನೆಯಲ್ಲಿ ಕೆಲಸ ಮಾಡುತ್ತಿದ್ದ ನೀರಜ್ ಮತ್ತು ಕೇಶವ್ರನ್ನು ಎನ್‌ಸಿಬಿ ವಿಚಾರಣೆಗೆ ಒಳಪಡಿಸಿತ್ತು.
2020ರ ಜೂನ್ 14ರಂದು ಮೃತಪಟ್ಟ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣವನ್ನು ವಿವಿಧ ಆಯಾಮಗಳಲ್ಲಿ ಭೇದಿಸಲಾಗುತ್ತಿದ್ದು, ಡ್ರಗ್ಸ್ ಲಿಂಕ್ ಕುರಿತ ತನಿಖೆ ನಡೆಸಲಾಗುತ್ತಿದೆ. ಈ ಸಂಬಂಧ ಬಾಲಿವುಡ್ನ ಅನೇಕ ಸೆಲೆಬ್ರಿಟಿಗಳನ್ನು ಎನ್‌ಸಿಬಿ ವಿಚಾರಣೆ ನಡೆಸಿದ್ದು, ಹಲವು ಆರೋಪಿಗಳನ್ನು ಬಂಧಿಸಲಾಗಿದೆ.