ಕರ್ನಾಟಕ

karnataka

ETV Bharat / bharat

Cruise Drugs Case​: ಪಾರ್ಟಿ ನಡೆದ ಸ್ಥಳಕ್ಕೆ NCB SIT ಭೇಟಿ, 7 ಮಂದಿಗೆ ಸಮನ್ಸ್​ - ಮುಂಬೈ ಡ್ರಗ್ಸ್ ಕೇಸ್​​ನ ಬಂಧಿತರು

ನಟ ಶಾರುಖ್​ ಖಾನ್ ಮ್ಯಾನೇಜರ್ ದದ್ಲಾನಿ ಮೂಲಕ ಸ್ಯಾಮ್ ಡಿಸೋಜ ಮತ್ತು ಕೆ.ಪಿ ಗೋಸಾವಿ 50 ಲಕ್ಷ ರೂ. ಪಡೆದಿದ್ದರು ಎನ್ನಲಾಗಿರುವ ಫೀನಿಕ್ಸ್ ಮಾಲ್ ಬಳಿಯ ಲೋವರ್ ಪರೇಲ್‌ ಸ್ಥಳಕ್ಕೆ ಎನ್​ಸಿಬಿ ಎಸ್​ಐಟಿ(NCB SIT) ಭೇಟಿ ನೀಡಿದೆ. ಜೊತೆಗೆ ಪಾರ್ಟಿ ನಡೆದಿದ್ದ ಸ್ಥಳಕ್ಕೂ ಭೇಟಿ ನೀಡಿ ಪರಿಶೀಲನೆ ನಡೆಸಿದೆ.

ncb-sit
ಕ್ರೂಸ್​ ಡ್ರಗ್ಸ್​ ಕೇಸ್​

By

Published : Nov 9, 2021, 7:35 AM IST

ಮುಂಬೈ:ಕ್ರೂಸ್ ಡ್ರಗ್ಸ್​ ಕೇಸ್ ಪ್ರಕರಣದ ತನಿಖೆ ನಡೆಸುತ್ತಿರುವ ನಾರ್ಕೋಟಿಕ್ಸ್​ ಕಂಟ್ರೋಲ್ ಬ್ಯೂರೋ (NCB)ದ ವಿಶೇಷ ತನಿಖಾ ದಳ ಮುಂಬೈನ ಹಲವು ಸ್ಥಳಗಳಿಗೆ ಬೇಟಿ ನೀಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಜೊತೆಗೆ ಹಿರಿಯ ಅಧಿಕಾರಿ ಸಂಜಯ್ ಕುಮಾರ್ ಸಿಂಗ್ ನೇತೃತ್ವದ ಎಸ್​ಐಟಿಯು ಶಾರುಖ್ ಖಾನ್ ಮ್ಯಾನೇಜರ್ ಪೂಜಾ ದದ್ಲಾನಿ ಸೇರಿ ಒಟ್ಟು 7 ಮಂದಿಗೆ ಸಮನ್ಸ್ ಜಾರಿ ಮಾಡಿದೆ.

ಆದರೆ ಆರ್ಯನ್ ಖಾನ್​ ಹಾಗೂ ದದ್ಲಾನಿ ಅನಾರೋಗ್ಯದ ಕಾರಣವೊಡ್ಡಿದ್ದು, ಎನ್​ಸಿಬಿ-ಎಸ್​ಐಟಿ(NCB SIT) ಮುಂದೆ ಕೆಲ ದಿನಗಳ ಬಳಿಕ ಹಾಜರಾಗಲಿರುವ ಸಾಧ್ಯತೆ ಇದೆ. ಇದರ ಜೊತೆಗೆ ರೇವ್ ಪಾರ್ಟ್​ ನಡೆದಿದೆ ಎನ್ನಲಾಗಿದ್ದ ಇಂಟರ್​ನ್ಯಾಷನಲ್ ಕ್ರೂಸ್ ಟರ್ಮಿನಲ್​​​​ಗೆ ಎಸ್​ಐಟಿ ಭೇಟಿ ನೀಡಿದೆ. ಅಲ್ಲದೆ ಆರ್ಯನ್​ ಖಾನ್ ಬಿಡುಗಡೆಗೆ ಹಣ ನೀಡಲಾಗಿದೆ ಎಂದು ಆರೋಪಿಸಿದ್ದ ಫಿನಿಕ್ಸ್ ಮಾಲ್ ಬಳಿಯ ಲೋವರ್ ಪರೇಲ್‌ನಲ್ಲಿರುವ ಸ್ಥಳಕ್ಕೂ ಭೇಟಿ ನೀಡಿದೆ.

ದದ್ಲಾನಿ ಮೂಲಕ ಸ್ಯಾಮ್ ಡಿಸೋಜ ಮತ್ತು ಕೆ.ಪಿ ಗೋಸಾವಿ 50 ಲಕ್ಷ ರೂ. ಪಡೆದಿದ್ದರು ಎಂದು ಈ ಮೊದಲು ಸ್ವತಂತ್ರ ಸಾಕ್ಷಿದಾರ ಪ್ರಭಾಕರ್ ಸೈಲ್ ಆರೋಪಿಸಿದ್ದ. ಈ ಮಾತುಕತೆ ನಡೆದಿದೆ ಎನ್ನಲಾದ ಜಾಗಕ್ಕೂ ಎಸ್​​​ಐಟಿ ತೆರಳಿದೆ.

ಸದ್ಯ ಮಹಾರಾಷ್ಟ್ರ ಪೊಲೀಸರಿಂದ ಬಂಧಿಸಲ್ಪಟ್ಟಿರುವ ಸೈಲ್ ಅವರ ಹೇಳಿಕೆ ದಾಖಲಿಸಲು ಎಸ್​ಐಟಿ ತಂಡ ಯೋಜಿಸಿದೆ. ಎನ್‌ಸಿಬಿಯ ಮುಂಬೈ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಅವರು ಶಾರುಖ್ ಖಾನ್ ಅವರಿಗೆ 25 ಕೋಟಿ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸುವ ಮೂಲಕ ಸೈಲ್​ ಭಾರಿ ಸಂಚಲನಕ್ಕೆ ಕಾರಣರಾಗಿದ್ದರು. ವಾಂಖೆಡೆ ಈ ಆರೋಪ ಅಲ್ಲಗಳೆದ ಬಳಿಕ ಎನ್​ಸಿಬಿ ತನಿಖೆಗೆ ಆದೇಶಿಸಿದೆ.

ಇದನ್ನೂ ಓದಿ:ಭೂಪಾಲ್​ನ ಮಕ್ಕಳ ಆಸ್ಪತ್ರೆಯ ಐಸಿಯುನಲ್ಲಿ ಬೆಂಕಿ: 4 ಹಸುಗೂಸುಗಳ ದಾರುಣ ಸಾವು

ABOUT THE AUTHOR

...view details