ಕರ್ನಾಟಕ

karnataka

ETV Bharat / bharat

ಆರ್ಯನ್ ಖಾನ್ ಡ್ರಗ್ಸ್‌ ಸೇರಿದಂತೆ 6 ಪ್ರಕರಣಗಳ ತನಿಖೆ: ಮುಂಬೈ ತಲುಪಿದ ದೆಹಲಿ NCB SIT

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ವಿವಾದಿತ ಕ್ರೂಸ್ ಡ್ರಗ್ಸ್ ಪ್ರಕರಣ ಸೇರಿದಂತೆ ಇತರೆ ಆರು ಪ್ರಕರಣಗಳ ತನಿಖೆ ನಡೆಸಲು ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ವಿಶೇಷ ತನಿಖಾ ತಂಡ (SIT) ಮುಂಬೈಗೆ ಬಂದಿಳಿದಿದೆ.

NCB SIT ತಂಡ
NCB SIT ತಂಡ

By

Published : Nov 7, 2021, 7:51 AM IST

ಮುಂಬೈ: ಕ್ರೂಸ್​ ಶಿಫ್​ ಡ್ರಗ್ಸ್‌ ಪತ್ತೆ ಪ್ರಕರಣವನ್ನು ದೆಹಲಿ ಎನ್‌ಸಿಬಿಗೆ ವರ್ಗಾವಣೆ ಮಾಡಲಾಗಿದ್ದು, ಮಾದಕ ದ್ರವ್ಯ ನಿಯಂತ್ರಣ ಬ್ಯೂರೋ ವಿಶೇಷ ತನಿಖಾ ತಂಡ (SIT) ಶನಿವಾರ ಮುಂಬೈ ತಲುಪಿದೆ.

ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಅವರ ವಿವಾದಿತ ಕ್ರೂಸ್ ಡ್ರಗ್ಸ್ ಪ್ರಕರಣ ಸೇರಿದಂತೆ ಆರು ಪ್ರಕರಣಗಳ ತನಿಖೆಯನ್ನು ದೆಹಲಿಯ ಎನ್‌ಸಿಬಿ (NCB)ಯ ಎಸ್‌ಐಟಿ (SIT) ತನಿಖೆ ನಡೆಸುತ್ತಿದೆ. ದೆಹಲಿಯಿಂದ ಬಂದ ಈ ತಂಡವು ನಿನ್ನೆ ಮಧ್ಯಾಹ್ನ ದಕ್ಷಿಣ ಮುಂಬೈನಲ್ಲಿರುವ ಎನ್‌ಸಿಬಿ ವಲಯ ಕಚೇರಿಗೆ ಭೇಟಿ ನೀಡಿ, ಕೆಲ ಮಾಹಿತಿ ಪಡೆದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಹಿರಿಯ ಐಪಿಎಸ್ ಅಧಿಕಾರಿ ಸಂಜಯ್ ಕುಮಾರ್ ಸಿಂಗ್, ನಾವು ಕೆಲವು ಪ್ರಕರಣಗಳನ್ನು ಕೈಗೆತ್ತಿಕೊಂಡಿದ್ದು, ತನಿಖೆ ಪ್ರಾರಂಭಿಸಿದ್ದೇವೆ ಎಂದರು.

ಎನ್‌ಸಿಬಿ ಮಹಾನಿರ್ದೇಶಕರು ರಚಿಸಿರುವ ಎನ್‌ಸಿಬಿ ಕೇಂದ್ರ ಕಚೇರಿಯ ಶಾಖೆಯ ಅಧಿಕಾರಿಗಳನ್ನು ಒಳಗೊಂಡ ಎಸ್‌ಐಟಿಯು ಆಳವಾದ ತನಿಖೆಯನ್ನು ನಡೆಸಲು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಪರಿಣಾಮಗಳನ್ನು ಹೊಂದಿರುವ ಫಾರ್ವರ್ಡ್ ಮತ್ತು ಬ್ಯಾಕ್‌ವರ್ಡ್ ಸಂಪರ್ಕಗಳನ್ನು ಕಂಡುಹಿಡಿಯಲು ಎನ್‌ಸಿಬಿ ಮುಂಬೈ ವಲಯ ಘಟಕದಿಂದ ಒಟ್ಟು 6 ಪ್ರಕರಣಗಳನ್ನು ತೆಗೆದುಕೊಳ್ಳುತ್ತಿದೆ ಎಂದು ಶುಕ್ರವಾರ ಎನ್‌ಸಿಬಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿತ್ತು.

ಎನ್‌ಸಿಬಿಯ ವಲಯ ನಿರ್ದೇಶಕ ಸಮೀರ್ ವಾಂಖೆಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಎನ್​ಸಿಬಿ, ಅವರು ಈ ಪ್ರಕರಣಗಳ ತನಿಖಾಧಿಕಾರಿಯಲ್ಲ, ವಲಯ ನಿರ್ದೇಶಕರಾಗಿ ಮೇಲ್ವಿಚಾರಣಾ ಅಧಿಕಾರಿಯಾಗಿದ್ದರು. ಯಾವುದೇ ಅಧಿಕಾರಿಯನ್ನೂ ತನಿಖಾ ತಂಡದಿಂದ ತೆಗೆದುಹಾಕಲಾಗಿಲ್ಲ. ಅವರು ತನಿಖೆಯಲ್ಲಿ ಸಹಕಾರ ನೀಡಲಿದ್ದಾರೆ. ಮುಂದಿನ ಆದೇಶದವರೆಗೆ ಅವರು ತಮ್ಮ ಸ್ಥಾನದಲ್ಲಿಯೇ ಮುಂದುವರೆಯಲಿದ್ದಾರೆ ಎಂದು ಹೇಳಿದೆ.

ABOUT THE AUTHOR

...view details