ಮುಂಬೈ:ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ವಿಚಾರಣೆ ನಡೆಸಿದರೂ ಬಾಲಿವುಡ್ ನಟ ಅರ್ಜುನ್ ರಾಂಪಾಲ್ಗೆ ಕ್ಲೀನ್ ಚಿಟ್ ನೀಡಿಲ್ಲ ಎಂದು ಎನ್‌ಸಿಬಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ ತಿಳಿಸಲಾಗಿದೆ. ಇನ್ನು ಅರ್ಜುನ್ ರಾಂಪಾಲ್ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಲು ತಯಾರಿ ನಡೆಸಿದ್ದರಿಂದ ಎನ್‌ಸಿಬಿ ದಕ್ಷಿಣ ಆಫ್ರಿಕಾ ಗಣರಾಜ್ಯದ ರಾಯಭಾರ ಕಚೇರಿಗೆ ಪತ್ರ ಬರೆದಿದೆ.
ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಮಾದಕವಸ್ತು ಕಳ್ಳಸಾಗಣೆಗೆ ಸಂಬಂಧಿಸಿದಂತೆ ಎನ್‌ಸಿಬಿ ಸಲ್ಲಿಸಿದ ಚಾರ್ಜ್‌ಶೀಟ್‌ನಲ್ಲಿ 33 ಆರೋಪಿಗಳ ಹೆಸರನ್ನು ದಾಖಲಿಸಲಾಗಿದೆ. ಸುಮಾರು 50,000 ಪುಟಗಳ ದೋಷಾರೋಪಣೆಯು ಅರ್ಜುನ್ ರಾಂಪಾಲ್ ಅವರ ಗೆಳತಿಯ ಸಹೋದರನ ಹೆಸರನ್ನು ಸಹ ಹೊಂದಿದೆ. ಹಾಗೂ ಚಾರ್ಜ್‌ಶೀಟ್‌ನಲ್ಲಿ ರಿಯಾ ಚಕ್ರವರ್ತಿ, ಆಕೆಯ ಸಹೋದರ ಶೋವಿಕ್ ಚಕ್ರವರ್ತಿ, ಸುಶಾಂತ್ ಅವರ ಮನೆ ವ್ಯವಸ್ಥಾಪಕ ಸ್ಯಾಮ್ಯುಯೆಲ್ ಸೇರಿದಂತೆ ಎನ್‌ಸಿಬಿ ಮತ್ತಿತರ ಹೆಸರನ್ನು ಉಲ್ಲೇಖಿಸಿದೆ. ಚಾರ್ಜ್‌ಶೀಟ್‌ನ ಪ್ರಕಾರ, ಮುಂಬೈ ಎನ್‌ಸಿಬಿ 2020 ರ ಡಿಸೆಂಬರ್ 3 ರಂದು ದಕ್ಷಿಣ ಆಫ್ರಿಕಾ ಗಣರಾಜ್ಯದ ಕೌನ್ಸೆಲ್ ಜನರಲ್‌ಗೆ ಪತ್ರವೊಂದನ್ನು ಬರೆದಿದ್ದು, "ಬಾಲಿವುಡ್ ನಟಿ ರಿಯಾ ಚಕ್ರವರ್ತಿ ಅವರನ್ನು ಎನ್‌ಸಿಬಿ ಬಂಧಿಸಿದ ಪ್ರಕರಣದಲ್ಲಿ ಅರ್ಜುನ್ ರಾಂಪಾಲ್ ಕೂಡ ಶಂಕಿತ ಆರೋಪಿ. ಅವರು ಭಾರತದಿಂದ ಓಡಿಹೋಗಿ ದಕ್ಷಿಣ ಆಫ್ರಿಕಾಕ್ಕೆ ಪಲಾಯನ ಮಾಡಬಹುದೆಂದು ಉಲ್ಲೇಖಿಸಿದೆ.