ಹೈದರಾಬಾದ್: ಬಾಲಿವುಡ್ ಮೆಗಾಸ್ಟಾರ್ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್ ಸೇರಿ ಎಂಟು ಜನರನ್ನು ಡ್ರಗ್ ಪ್ರಕರಣದಲ್ಲಿ ಬಂಧಿಸುವ ಸಾಧ್ಯತೆಯಿದೆ. ಉನ್ನತ ಅಧಿಕಾರಿಯೊಬ್ಬರು ಈ ಬಗ್ಗೆ ಹೇಳಿದ್ದಾರೆ.
ಡ್ರಗ್ ಕಂಟ್ರೋಲ್ ಏಜೆನ್ಸಿ ಆರ್ಯನ್‌ನನ್ನು ಪ್ರಶ್ನಿಸಿದ ವರದಿಗಳಿಗೆ ಪ್ರತಿಕ್ರಿಯಿಸಿರುವ ನಟ ಸುನೀಲ್ ಶೆಟ್ಟಿ, ಊಹಾತ್ಮಕ ಆರೋಪಗಳನ್ನು ಮಾಡುವ ಮೊದಲು ಜನರು ತನಿಖೆಯ ಫಲಿತಾಂಶಕ್ಕಾಗಿ ಕಾಯಬೇಕು ಎಂದಿದ್ದಾರೆ.
ಆ ಮಗುವಿಗೆ ಉಸಿರಾಡಲು ಅವಕಾಶ ನೀಡಿ ಎಂದ ಸುನೀಲ್ ಶೆಟ್ಟಿ ಮಾದಕದ್ರವ್ಯ ನಿಯಂತ್ರಣ ಬ್ಯೂರೋ (NCB) ಮಹಾನಿರ್ದೇಶಕ S N ಪ್ರಧಾನ್ ಈ ಸಂಬಂಧ ಪ್ರತಿಕ್ರಿಯೆ ನೀಡಿದ್ದಾರೆ. ಎನ್‌ಸಿಬಿ ತಂಡವು ಮುಂಬೈನಲ್ಲಿ ನಡೆಸಿದ ದಾಳಿಗಳಲ್ಲಿ ಎಲ್ಲಾ ಆರೋಪಿಗಳನ್ನು ಶನಿವಾರ ವಶಪಡಿಸಿಕೊಂಡು ವಿಚಾರಣೆ ನಡೆಸುತ್ತಿದೆ ಎಂದಿದ್ದಾರೆ.
ಡ್ರಗ್ ಪಾರ್ಟಿಯಲ್ಲಿ ಆರ್ಯನ್ ಹೆಸರು ಕೇಳಿ ಬರುತ್ತಿರುವುದರ ಬಗ್ಗೆ ಏನು ಹೇಳುತ್ತೀರಿ ಎಂದು ಸುನೀಲ್ ಶೆಟ್ಟಿ ಅವರನ್ನು ಪ್ರಶ್ನಿಸಿದಾಗ, ಒಂದು ಸ್ಥಳದಲ್ಲಿ ದಾಳಿ ನಡೆಸುವಾಗ ಅಲ್ಲಿರುವ ಅನೇಕ ಜನರನ್ನು ವಶಕ್ಕೆ ತೆಗೆದುಕೊಳ್ಳಲಾಗುತ್ತದೆ.
ಆ ಹುಡುಗ ಅದನ್ನು ಸೇವಿಸಿರಬಹದು ಎಂದೇ ಊಹಿಸಿಕೊಳ್ಳೋಣ. ಆದರೆ, ಈ ಸಂಬಂಧ ಕಾನೂನು ಪ್ರಕ್ರಿಯೆ ನಡೆಯುತ್ತಿದೆ. ಆ ಮಗುವಿಗೆ ಉಸಿರಾಡಲು ಅವಕಾಶ ನೀಡೋಣ. ನೈಜ ವರದಿಗಳು ಹೊರಬರಲಿ ಎಂದು ಹೇಳಿದ್ದಾರೆ. ಇದರ ನಡುವೆ ಮುಂಬೈನ ಎನ್‌ಸಿಬಿ ಕಚೇರಿಗೆ ವಿಚಾರಣೆಗೆ ಕರೆತಂದವರಲ್ಲಿ ಮೂವರು ಮಹಿಳೆಯರೂ ಸೇರಿದ್ದಾರೆ. ಎಲ್ಲರೂ ದೆಹಲಿಯ ನಿವಾಸಿಗಳಾಗಿದ್ದಾರೆ.