ಮುಂಬೈ:ಕ್ರೂಸ್ ಶಿಪ್(Cruise ship)ನಲ್ಲಿ ಡ್ರಗ್ಸ್ ಪಾರ್ಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಬಾಲಿವುಡ್ ನಿರ್ಮಾಪಕ ಇಮ್ತಿಯಾಜ್ ಖತ್ರಿ ಮನೆ ಮತ್ತು ಕಚೇರಿ ಮೇಲೆ ಎನ್ಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಲ್ಲಿನ ಬಾಂದ್ರಾದಲ್ಲಿರುವ ಮನೆ ಮತ್ತು ಕಚೇರಿಯಲ್ಲಿ ಪರಿಶೀಲನೆ ಮುಂದುವರೆದಿದೆ.
ರೆವ್ ಪಾರ್ಟಿ ಪ್ರಕರಣದಲ್ಲಿ ಭಾಗಿಯಾಗಿದ್ದ ಅಚಿತ್ ಕುಮಾರ್ ಅವರ ವಿಚಾರಣೆಯಲ್ಲಿ ಇಮ್ತಿಯಾಜ್ ಖಾತ್ರಿಯ ಹೆಸರು ಕೇಳಿ ಬಂದ ಹಿನ್ನೆಲೆಯಲ್ಲಿ ಎನ್ಸಿಬಿ ವಿಚಾರಣೆ ಮುಂದಾಗಿದೆ. ಮುಂಬೈನ ಉದ್ಯಮಿಯೊಬ್ಬರ ಪುತ್ರನಾಗಿರುವ ಇಮ್ತಿಯಾಜ್ ಖತ್ರಿಗೆ ಬಾಲಿವುಡ್ನ ಹಲವು ಮಂದಿ ಜೊತೆ ಸಂಪರ್ಕ ಇದೆ.
ಕಳೆದ ವರ್ಷ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಪ್ರಕರಣದಲ್ಲಿ ಇಮ್ತಿಯಾಜ್ ಖತ್ರಿ ಹೆಸರು ಕೇಳಿ ಬಂದಿತ್ತು. ಆದರೆ, ಆತನ ವಿರುದ್ಧ ಯಾವುದೇ ಕ್ರಮ ಕೈಗೊಂಡಿಲ್ಲ. ಈಗ ಮತ್ತೊಮ್ಮೆ ಅವರ ಹೆಸರು ಮುನ್ನೆಲೆಗೆ ಬಂದಿದೆ.
ವಿವಿಐಪಿ ಯೂನಿವರ್ಸಲ್ ಎಂಟರ್ಟೇನ್ಮೆಂಟ್ ಕಂಪನಿ ಮೂಲಕ ನಿರ್ಮಾಪಕನಾಗಿ ಇಮ್ತಿಯಾಜ್ ಖತ್ರಿ ಗುರುತಿಸಿಕೊಂಡಿದ್ದರು. ಹಲವು ಸೆಲೆಬ್ರಿಟಿಗಳಿಗೆ ಮಾದಕ ವಸ್ತು ಪೂರೈಕೆ ಮಾಡುತ್ತಾರೆ ಎಂಬ ಆರೋಪವೂ ಇವರ ಮೇಲೆ ಇದೆ. ಈ ಹಿನ್ನೆಲೆಯಲ್ಲಿ ಎನ್ಸಿಬಿ ದಾಳಿ ನಡೆಸಿದೆ. ಶಾರುಖ್ ಪುತ್ರನಿಗೆ ಡ್ರಗ್ಸ್ ಪೂರೈಕೆ ಮಾಡಿರಬಹುದು ಎಂಬ ಶಂಕೆ ಕೂಡ ಮೂಡಿದೆ. ಪೂರ್ತಿ ವಿಚಾರಣೆ ಬಳಿಕ ಸತ್ಯ ಹೊರ ಬರಬೇಕಿದೆ.
ಇದನ್ನೂ ಓದಿ: ಆರ್ಯನ್ ಖಾನ್ಗೆ ಬೇಲ್ ನಿರಾಕರಣೆ: ಬಿಕ್ಕಿ ಬಿಕ್ಕಿ ಅತ್ತ ಅಮ್ಮ ಗೌರಿ ಖಾನ್