ಮುಂಬೈ:ಹಾಸ್ಯನಟಿ ಭಾರ್ತಿ ಸಿಂಗ್ ಮತ್ತು ಅವರ ಪತಿ ಹರ್ಷ್ ಲಿಂಬಾಚಿಯಾ ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಏಕೆಂದರೆ ಅವರ ವಿರುದ್ಧ ಮಹಾರಾಷ್ಟ್ರದ ಎನ್‌ಸಿಬಿ 200 ಪುಟಗಳ ಚಾರ್ಜ್ಶೀಟ್ ನ್ನು ನ್ಯಾಯಾಲಯಕ್ಕೆ ಸಲ್ಲಿಸಿದೆ. ಹಿಂದೆ 2020ರಲ್ಲಿ ಮಾದಕ ದ್ರವ್ಯ ಪ್ರಕರಣದಲ್ಲಿ ಅವರನ್ನು ಬಂಧಿಸಲಾಗಿತ್ತು. ಸದ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಪ್ರಕರಣ ಹಿನ್ನೆಲೆ ಏನು: ನವೆಂಬರ್ 2020ರಲ್ಲಿ ಭಾರ್ತಿ ಅವರ ಮುಂಬೈನ ಮನೆ ಮೇಲೆ ಎನ್‌ಸಿಬಿ ದಾಳಿ ನಡೆಸಿತು. ಈ ವೇಳೆ, ಗಾಂಜಾ ಜಪ್ತಿ ಮಾಡಲಾಯಿತು. ವಿಚಾರಣೆ ವೇಳೆ ಭಾರತಿ ಸಿಂಗ್ ತಾನು ಡ್ರಗ್ಸ್ ಸೇವಿಸಿದ್ದನ್ನು ಒಪ್ಪಿಕೊಂಡಿದ್ದರು. ಸುಮಾರು 6 ಗಂಟೆಗಳ ವಿಚಾರಣೆ ಬಳಿಕ ಭಾರ್ತಿ ಅವರನ್ನು ಬಂಧಿಸಲಾಯಿತು.
ಇದರ ನಂತರ, ಹರ್ಷ ಲಿಂಬಾಚಿಯಾ ಅವರನ್ನು ತಡರಾತ್ರಿ ಬಂಧಿಸಲಾಯಿತು. ಭಾರ್ತಿ ಸಿಂಗ್ ಮತ್ತು ಹರ್ಷ ಲಿಂಬಾಚಿಯಾ ಅವರನ್ನು ಮೊದಲು ವೈದ್ಯಕೀಯ ಮತ್ತು ಕೊರೊನಾ ಪರೀಕ್ಷೆಗೆ ಒಳಪಡಿಸಲಾಯಿತು. ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಯಿತು. ಭಾರ್ತಿ ಮತ್ತು ಹರ್ಷ ಇಬ್ಬರು ನ್ಯಾಯಾಲಯಕ್ಕೆ ಹಾಜರಾಗಿದ್ದರು.