ಸುಕ್ಮಾ (ಛತ್ತೀಸ್ಗಢ):ನಕ್ಸಲ್ ಪೀಡಿತ ಪ್ರದೇಶವಾದ ಛತ್ತೀಸ್ಗಢದ ಸುಕ್ಮಾದಲ್ಲಿ ಮಾವೋವಾದಿಗಳ ಗುಂಪೊಂದು ನಿನ್ನೆ ರಾತ್ರಿ ಏಳು ವಾಹನಗಳಿಗೆ ಬೆಂಕಿ ಹಚ್ಚಿ ಅಟ್ಟಹಾಸ ಮೆರೆದಿದೆ. ಭಾರತ್ ಬಂದ್‌ಗೆ ಒಂದು ದಿನದ ಮುಂಚಿತವಾಗಿ ಕೃತ್ಯ ನಡೆದಿದೆ ಎಂದು ಸುಕ್ಮಾ ಎಸ್ಪಿ ಎಲ್.ಧ್ರುವ ತಿಳಿಸಿದರು.
ಘಟನೆಯಲ್ಲಿ ಯಾವುದೇ ವಾಹನ ಚಾಲಕರಿಗೆ ತೊಂದರೆಯಾಗಿಲ್ಲ. ಮಾಹಿತಿ ತಿಳಿದ ಕೂಡಲೇ ಭದ್ರತಾ ಪಡೆಗಳು ಸ್ಥಳಕ್ಕೆ ಧಾವಿಸಿ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ. ವಾಹನಗಳಿಗೆ ಬೆಂಕಿ ಹಚ್ಚಿದ ಮಾವೋವಾದಿಗಳು ಭಾರತ್ ಬಂದ್ ಅನ್ನು ಯಶಸ್ವಿಯಾಗಿಸುವಂತೆ ಜನರಿಗೆ ಸೂಚಿಸಿ ಕರಪತ್ರಗಳನ್ನು ಎಸೆದು ಹೋಗಿದ್ದಾರೆ.
ಇದನ್ನೂ ಓದಿ: ಛತ್ತೀಸ್ಗಢಲ್ಲಿ ರೈಲು ಅಡ್ಡಗಟ್ಟಿದ ನಕ್ಸಲರು: ಏ. 26ರಂದು ಭಾರತ್ ಬಂದ್ ಮಾಡುವಂತೆ ಪ್ರಯಾಣಿಕರಿಗೆ ಕರೆ