ಕರ್ನಾಟಕ

karnataka

ETV Bharat / bharat

ಜಿಲ್ಲಾ ಪಂಚಾಯ್ತಿ ಸದಸ್ಯರೇ ಟಾರ್ಗೆಟ್​​... ಮಾವೋವಾದಿಗಳ ದಾಳಿಗೆ ಮತ್ತೋರ್ವ ಬಲಿ! - ಛತ್ತೀಸ್​ಗಢದಲ್ಲಿ ಮಾವೋವಾದಿಗಳು ಅಟ್ಟಹಾಸ

ಛತ್ತೀಸ್​ಗಢದಲ್ಲಿ ಮಾವೋವಾದಿಗಳು ಅಟ್ಟಹಾಸ ಮೆರೆದಿದ್ದು, ಇದೀಗ ಮತ್ತೋರ್ವ ಜಿಲ್ಲಾ ಪಂಚಾಯ್ತಿ ಸದಸ್ಯನ ಕೊಲೆ ಮಾಡಿದ್ದಾರೆ.

Naxalites killed public representatives
Naxalites killed public representatives

By

Published : Mar 27, 2021, 3:09 AM IST

ಬಿಜಾಪುರ(ಛತ್ತೀಸ್‌ಗಢ):ಕಳೆದ ಕೆಲ ದಿನಗಳಿಂದ ಜಿಲ್ಲಾ ಪಂಚಾಯ್ತಿ ಸದಸ್ಯರ ಟಾರ್ಗೆಟ್​ ಮಾಡಿ ನಕ್ಸಲರು ದಾಳಿ ನಡೆಸುತ್ತಿದ್ದು, ಇಲ್ಲಿಯವರೆಗೆ ನಾಲ್ವರು ಬಲಿಯಾಗಿದ್ದಾರೆ. ಬಿಜಾಪುರದ ಮಿರ್ರಾಟೂರ್​ ಪೊಲೀಸ್ ಠಾಣಾ ಪ್ರದೇಶದಲ್ಲಿ ಇದೀಗ ಮತ್ತೋರ್ವ ವ್ಯಕ್ತಿಯ ಕೊಲೆ ಮಾಡಲಾಗಿದೆ.

ಮೃತ ವ್ಯಕ್ತಿಯನ್ನ ಜಿಲ್ಲಾ ಪಂಚಾಯತ್​ ಸದಸ್ಯ ಬುಧ್ರಮ್​ ಕಶ್ಯಪ್​ ಎಂದು ಗುರುತಿಸಲಾಗಿದ್ದು, ಮನೆಯ ಮುಂದೆ ಕುಳಿತ್ತಿದ್ದ ವೇಳೆ ಆತನ ಮೇಲೆ ಏಕಾಏಕಿ ದಾಳಿ ನಡೆಸಲಾಗಿದೆ. ಘಟನಾ ಸ್ಥಳದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಸೇರಿದಂತೆ ಭದ್ರತಾ ಪಡೆ ನಿಯೋಜನೆ ಮಾಡಲಾಗಿದ್ದು, ಮಾವೋವಾದಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ. ಇದಕ್ಕೂ ಮುಂಚಿತವಾಗಿ ಬಿಜಾಪುರ ಜಿಲ್ಲೆಯಲ್ಲಿ ನಕ್ಸಲರು ಮೂವರು ಜಿಲ್ಲಾ ಪಂಚಾಯತ್​ ಸದಸ್ಯರ ಕೊಲೆ ಮಾಡಿದ್ದು, ಇದರಿಂದ ಸ್ಥಳದಲ್ಲಿ ಭಯದ ವಾತಾವರಣ ನಿರ್ಮಾಣಗೊಂಡಿದೆ.

ಇದನ್ನೂ ಓದಿ: ಮಹಾರಾಷ್ಟ್ರ, ಪಂಜಾಬ್, ಕರ್ನಾಟಕ, ಛತ್ತೀಸ್‌ಗಢ, ಗುಜರಾತ್​ನಲ್ಲಿ ಕೊರೊನಾ ತೀವ್ರ ಏರಿಕೆ

ಇದಕ್ಕೂ ಮುಂಚಿತವಾಗಿ ಮಾರ್ಚ್​​ 24ರಂದು ನಾರಾಯಣಪುರದಲ್ಲಿ ಐಇಡಿ ಬಳಸಿ ಬಸ್​ ಸ್ಫೋಟಗೊಳಿಸಿದ್ದರಿಂದ ಇದರಲ್ಲಿ ರಿಸರ್ವ್​ ಗಾರ್ಡ್​ನ ಐವರು ಯೋಧರ ಸಾವನ್ನಪ್ಪಿದ್ದರು. ಇದಾದ ಬಳಿಕ ನಿನ್ನೆ ಧನೋರಾ ಪ್ರದೇಶದಲ್ಲಿ ನಕ್ಸಲರು 11 ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಈ ಘಟನೆ ನಡೆದ 24 ಗಂಟೆಯಲ್ಲೇ ಜಿಲ್ಲಾ ಪಂಚಾಯ್ತಿ ಸದಸ್ಯನ ಕೊಲೆ ಮಾಡಿದ್ದಾರೆ.

ABOUT THE AUTHOR

...view details