ಗಡಚಿರೋಲಿ(ಮಹಾರಾಷ್ಟ್ರ):ಪೊಲೀಸ್ ತಂಡಗಳ ಮೇಲೆ ದಾಳಿ ಮಾಡುತ್ತಿದ್ದ ಹಾಗೂ ಕೆಲವು ಗ್ರಾಮಸ್ಥರ ಕೊಲೆಯಲ್ಲಿ ಭಾಗಿಯಾಗಿದ್ದ ಓರ್ವ ನಕ್ಸಲೈಟ್ನನ್ನು ಮಹಾರಾಷ್ಟ್ರದ ಗಡಚಿರೋಲಿ ಜಿಲ್ಲೆಯ ಜಿಮಲ್ಗಟ್ಟ ಅರಣ್ಯ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ.
ಗುಡ್ಡುರಾಮ್ ಕಿಡಿಯಾಮಿ(23) ಬಂಧಿತ ನಕ್ಸಲೈಟ್ ಆಗಿದ್ದು, ಛತ್ತೀಸ್ಗಢದ ಬಿಜಾಪುರ ಮೂಲದವನಾಗಿದ್ದಾನೆ. ಮುಕ್ಕವೆಲ್ಲಿ ಆರ್ಪಿಸಿ ಮಿಲಿಷಿಯಾದ ಸದಸ್ಯನಾಗಿರುವ ಈತ 2017ರಿಂದ ನಕ್ಸಲ್ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದನು.
ಇದನ್ನೂ ಓದಿ:ಗಣರಾಜ್ಯೋತ್ಸವ ದಿನ ರೆಡ್ ಫೋರ್ಟ್ ಮೇಲೆ ಧ್ವಜ ಹಾರಿಸಿದ ಜಸ್ಪ್ರೀತ್ ಸಿಂಗ್ ಅರೆಸ್ಟ್!
ಇದರ ಜೊತೆಗೆ ಗರ್ತುಲ್ ಅರಣ್ಯದಲ್ಲಿ 15 ದಿನಗಳ ಕಾಲ ಶಸ್ತ್ರಾಸ್ತ್ರ ಬಳಕೆಯ ತರಬೇತಿ ಪಡೆದಿದ್ದನು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದು, ಗಡಚಿರೋಲಿ ಪೊಲೀಸ್ನ ವಿಭಾಗವಾದ ಸಿ-60 ಕಮಾಂಡೋಗಳು ಈತನನ್ನು ಬಂಧಿಸಿದ್ದಾರೆ.
ಗ್ರಾಮಗಳ ಮೇಲೆ ದಾಳಿ ಮಾಡಿ, ಸಾರ್ವಜನಿಕರನ್ನು ಕೊಲ್ಲುತ್ತಿದ್ದದ್ದು, ಮಾತ್ರವಲ್ಲದೇ ಪರ್ಸೆಗಢದಲ್ಲಿ ಪೊಲೀಸ್ ಟೀಂನ ಮೇಲೆ ದಾಳಿ ಮಾಡಿ, ಓರ್ವ ಸಿಬ್ಬಂದಿ ಹತ್ಯೆಯ ಮಾಡಿದ್ದನು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.