ಕರ್ನಾಟಕ

karnataka

ETV Bharat / bharat

ಓರ್ವ ಬಂಡುಕೋರನನ್ನು ಹೊಡೆದುರುಳಿಸಿದ ಭದ್ರತಾಪಡೆ - ದಂತೇವಾಡದಲ್ಲಿ ಬಂಡುಕೋರನ ಹತ್ಯೆ

ಈ ಪ್ರದೇಶದಲ್ಲಿ ಬಂಡುಕೋರರು ಇರುವ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಗುಂಡಿನ ದಾಳಿಯಲ್ಲಿ ಮೃತಪಟ್ಟವನನ್ನು ರಾಮ್​ಚಂದ್ರ ಕಾರ್ತಿ (20) ಎಂದು ಗುರುತಿಸಲಾಗಿದೆ..

ಎಸ್​ಪಿ ಅಭಿಷೇಕ್ ಪಲ್ಲವ
ಎಸ್​ಪಿ ಅಭಿಷೇಕ್ ಪಲ್ಲವ

By

Published : May 14, 2021, 8:53 PM IST

ದಂತೇವಾಡ (ಛತ್ತಿಸ್​ಗಢ) : ಜಿಲ್ಲೆಯಲ್ಲಿ ಭದ್ರತಾ ಪಡೆ ಹಾಗೂ ಬಂಡುಕೋರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಬಂಡುಕೋರ ಮೃತಪಟ್ಟಿದ್ದಾನೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ಗೀದಂ ಠಾಣಾ ವ್ಯಾಪ್ತಿಯಲ್ಲಿ ಇಂದು ಮುಂಜಾನೆ 7:30ರ ಸುಮಾರಿಗೆ ಗುಂಡಿನ ಚಕಮಕಿ ನಡೆದಿದ್ದು, ಓರ್ವ ಬಂಡುಕೋರ ಮೃತಪಟ್ಟಿದ್ದಾನೆಂದು ದಂತೇವಾಡ ಎಸ್​ಪಿ ಅಭಿಷೇಕ್ ಪಲ್ಲವ ಹೇಳಿದ್ದಾರೆ.

ಈ ಪ್ರದೇಶದಲ್ಲಿ ಬಂಡುಕೋರರು ಇರುವ ಬಗ್ಗೆ ನಮಗೆ ಮಾಹಿತಿ ದೊರೆತಿದ್ದು, ಕಾರ್ಯಾಚರಣೆ ಪ್ರಾರಂಭಿಸಲಾಗಿತ್ತು. ಗುಂಡಿನ ದಾಳಿಯಲ್ಲಿ ಮೃತಪಟ್ಟವನನ್ನು ರಾಮ್​ಚಂದ್ರ ಕಾರ್ತಿ (20) ಎಂದು ಗುರುತಿಸಲಾಗಿದೆ.

ಮೃತದೇಹವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪಲ್ಲವ ಹೇಳಿದರು. ಮೃತನಿಂದ 2 ಕೆಜಿ ಐಇಡಿ, ನಾಲ್ಕು ಚೀಲ, ಪಾತ್ರೆಗಳು, ದೇಶಿ ನಿರ್ಮಿತ ಬಂದೂಕುಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ:ನಿಯಂತ್ರಣ ತಪ್ಪಿ ಪಲ್ಟಿಯಾದ ಟ್ರಕ್​ಗೆ ಬೆಂಕಿ, ಮೂವರು ಜೀವಂತ ಸಮಾಧಿ, ಬದುಕುಳಿದ ಮಗು!

ABOUT THE AUTHOR

...view details