ಕರ್ನಾಟಕ

karnataka

ETV Bharat / bharat

ಅತಿ ಚಿಕ್ಕ ವಯಸ್ಸಿನಲ್ಲೇ ನಕ್ಸಲ್ ಚಟುವಟಿಕೆಗಳಲ್ಲಿ ತೊಡಗಿದ್ದ ಬಾಲಕಿ: ಇದೀಗ 12ನೇ ತರಗತಿ ಪರೀಕ್ಷೆಯಲ್ಲಿ ಉತ್ತೀರ್ಣ - ಈಟಿವಿ ಭಾರತ್​ ಕನ್ನಡ ನ್ಯೂಸ್​

ಗಡ್ಚಿರೋಲಿ ಗೊಂಡಿಯಾ ಪ್ರದೇಶದಲ್ಲಿ 6 ಅಪರಾಧಗಳನ್ನು ಮಾಡಿದ್ದ ಬಾಲಕಿ, 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾಳೆ.

ರಾಜುಲಾ ಹಿದಾಮಿ
ರಾಜುಲಾ ಹಿದಾಮಿ

By

Published : May 26, 2023, 10:51 PM IST

ನಾಗ್ಪುರ (ಮಹಾರಾಷ್ಟ್ರ) : ಕೆಲ ದಿನಗಳ ಹಿಂದೆ 12ನೇ ತರಗತಿಯ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿಗಳ ಫಲಿತಾಂಶ ಹೊರ ಬಿದಿತ್ತು. ಈ ಪರೀಕ್ಷೆಯಲ್ಲಿ ಎಂದಿನಂತೆ ಅನೇಕ ವಿದ್ಯಾರ್ಥಿಗಳು ಯಶಸ್ವಿಯಾಗಿ ಉತ್ತೀರ್ಣರಾಗಿದ್ದರು. ಆದರೆ, ಈ ಯಶಸ್ಸಿನಲ್ಲಿ ರಾಜುಲಾ ಹಿದಾಮಿ ಎಂಬ ವಿದ್ಯಾರ್ಥಿನಿ ಉತ್ತೀರ್ಣರಾಗಿ ಶೇಕಡಾ 45.83 ಅಂಕಗಳನ್ನು ಗಳಿಸಿದ್ದಾಳೆ.

ಆದರೆ ಶೇಕಡಾ 45.83 ಅಂಕಗಳನ್ನು ಪಡೆಯುವ ಅವಳು ಮಾಡಿದ ಹೋರಾಟ ಬಹಳ ದೊಡ್ಡದು. ಗಡ್ಚಿರೋಲಿ ಗೊಂಡಿಯಾದಲ್ಲಿ 15 ವರ್ಷದ ಬುಡಕಟ್ಟು ಬಾಲಕಿ ರಾಜುಲಾ ಹಿದಾಮಿ ದೊಡ್ಡ ಭಯೋತ್ಪಾದನೆ ಸೃಷ್ಟಿಸಿದ್ದಳು. ರಾಜುಲಾ ಹಿದಾಮಿ ವಿರುದ್ದ ಅತಿ ಚಿಕ್ಕ ವಯಸ್ಸಿನಲ್ಲೇ 6 ಗಂಭೀರ ಅಪರಾಧಗಳು ದಾಖಲಾಗಿದ್ದವು. ಆದರೆ, ಸಂದೀಪ್ ಅಟೋಲೆ ಎಂಬ ಪೊಲೀಸ್ ಅಧಿಕಾರಿಯಿಂದ ಆಕೆಯ ಜೀವನದಲ್ಲಿ ಆಶಾ ದೀಪವಾಗಿ ಬಂದ ಮೇಲೆ ರಾಜುಲಾ ಹಿದಾಮಿ ತನ್ನ ಕೈಯಲ್ಲಿದ್ದ ಆಯುಧವನ್ನು ಬಿಟ್ಟು. ಪೊಲೀಸರ ಮುಂದೆ ಶರಣಾಗಿದ್ದಳು. ನಂತರ, ರಾಜುಲಾ ತನ್ನ ಶಿಕ್ಷಣವನ್ನು ಮುಂದುವರಿಸಿದಳು.

ರಾಜುಲಾ ಹಿದಾಮಿ ಹಿನ್ನಲೇ ಏನು ಗೊತ್ತೇ? : ಗೊಂಡಿಯಾ ಮತ್ತು ಗಡ್ಚಿರೋಲಿ ಪ್ರದೇಶದ ಪ್ರಮುಖ ನಕ್ಸಲಿಸ್ಟ್ ಆಗಿದ್ದ ಈಕೆ ತನ್ನ ಆರನೇ ವಯಸ್ಸಿನಲ್ಲಿ 6 ಅಪರಾಧಗಳನ್ನು ಮಾಡಿದ್ದಳು ಹಾಗೂ ಈ ಸಂಬಂಧ ಪ್ರಕರಣಗಳು ಕೂಡ ದಾಖಲಾಗಿದ್ದವು. ಪೊಲೀಸರ ಮೇಲೆ ಮನ ಬಂದಂತೆ ಗುಂಡು ಹಾರಿಸಿದ ಪ್ರಕರಣಗಳ ಜೊತೆಗೆ ಲೂಟಿ ಮತ್ತು ಹಲವು ಪ್ರದೇಶಗಳಲ್ಲಿ ಬಾಂಬ್​ ಸ್ಫೋಟ ನಡೆಸಿದ ಘಟನೆಗಳನ್ನು ಸಹ ಒಳಗೊಂಡಿವೆ. ಆದರೆ ಇಷ್ಟು ಚಿಕ್ಕ ವಯಸ್ಸಿಗೆ ರಾಜುಲಾ ನಕ್ಸಲ್ ಚುಟುವಟಿಕೆಯಲ್ಲಿ ಏಕೆ ತೊಡಗಿಕೊಂಡಿದ್ದರು ಎಂಬುದು ಮಾತ್ರ ಇನ್ನು ನಿಗೂಢವಾಗಿದ್ದು, ಪೊಲೀಸರಿಂದಲೂ ಭೇದಿಸಲು ಸಾಧ್ಯವಾಗಿಲ್ಲ.

ರಾಜುಲಾ ಇದ್ದ ಪ್ರದೇಶದ ಗೊಂಡಿಯಾ ಪೊಲೀಸ್ ಪಡೆಯ ಸೂಪರಿಂಟೆಂಡೆಂಟ್ ಹುದ್ದೆಯನ್ನು ಸಂದೀಪ್ ಅಟೋಲೆ ಅವರು ವಹಿಸಿಕೊಂಡ ನಂತರ ಈಕೆ ಬಗ್ಗೆ ಹೆಚ್ಚು ಗಮನ ಹರಿಸಿದರು. ಬಳಿಕ ಹಂತ ಹಂತವಾಗಿ ಸಂದೀಪ್ ಅಟೋಲೆ, ರಾಜುಲಾಳ ಮನ ಪರಿವರ್ತಿಸುವಲ್ಲಿ ಯಶಸ್ವಿಯಾದರು. ಪೊಲೀಸ್​​ ಅಧಿಕಾರಿ ಪ್ರಯತ್ನದಿಂದಲೇ ರಾಜುಲಾ 2018 ರಲ್ಲಿ ಪೊಲೀಸರಿಗೆ ಶರಣಾಗಿ ನಕ್ಸಲ್ ಚುಟುವಟಿಕೆಗಳಿಂದ ದೂರ ಉಳಿದು ತನ್ನ ಶಿಕ್ಷಣವನ್ನು ಪಡೆದರು.

ಸಂದೀಪ್ ಅಟೋಲೆ ಅವರು ರಾಜುಲಾಳ ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಂಡು ಅವರ ಶಿಕ್ಷಣದ ಎಲ್ಲ ಹೊರೆಯನ್ನು ಹೊತ್ತುಕೊಂಡಿದ್ದರು. ಈ ಹೊರೆಯ ಪ್ರತಿಫಲವೇ ಇಂದು ರಾಜುಲಾ 12ನೇ ತರಗತಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿದ್ದಾರೆ. ಮುಂದಿನ ಭವಿಷ್ಯದಲ್ಲಿಯೂ ರಾಜುಲಾಗೆ ಸಹಾಯ ಮಾಡುವ ಜವಾಬ್ದಾರಿಯನ್ನು ಸಂದೀಪ್ ಅಟೋಲೆ ವಹಿಸಿಕೊಂಡಿದ್ದು, ರಾಜುಲಾ ಈ ಯಶಸ್ಸಿನಿಂದ ನಾವು ಸಂತೋಷಗೊಂಡಿದ್ದೇವೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.

ಪೊಲೀಸ್​ ಇಲಾಖೆ ಸೇರುವ ಆಸೆ : ನಕ್ಸಲ್ ಚಟುವಟಿಕೆಗಳಲ್ಲಿ ಅನೇಕ ಮಹಿಳೆಯರು ಮತ್ತು ಹುಡುಗಿಯರನ್ನು ಹಲವು ಅಮಿಶಾಗಳನ್ನು ತೋರಿಸಿ ಮೋಸಗೊಳಿಸಲಾಗುತ್ತಿದೆ ಎಂದು ಆರೋಪಿಸಲಾಗಿದೆ. ರಾಜುಲಾ ವಿಷಯದಲ್ಲೂ ಅದೇ ಆಗಿತ್ತು. ಆದರೆ, ಪೊಲೀಸ್ ವರಿಷ್ಠಾಧಿಕಾರಿ ಸಂದೀಪ್ ಅಟೋಲೆ ಮತ್ತು ಅವರ ತಂಡದ ಸತತ ಪ್ರಯತ್ನ ಹಾಗೂ ಪರಿಶ್ರಮದಿಂದಾಗಿ ರಾಜುಲಾ ಶರಣಾದರು. ಆದರೇ ಇದೀಗ ರಾಜುಲಾ ನಕ್ಸಲ್ ಎಂಬ ಭೂತದಿಂದ ಮುಕ್ತಿ ಪಡೆದು ಸಾಮಾನ್ಯ ಹೆಣ್ಣುಮಗಳ ಜೀವನ ನಡೆಸುತ್ತಿದ್ದಾರೆ. ಬಾಲಕಿಯೊಬ್ಬರು 15ನೇ ವಯಸ್ಸಿನಲ್ಲಿ ನಕ್ಸಲ್ ಚುಟುವಟಿಕೆಯಲ್ಲಿ ಸೇರಿ 12ನೇ ತರಗತಿ ತೇರ್ಗಡೆಯಾಗಲು ಶಿಕ್ಷಣದ ಹಾದಿಗೆ ಮರಳಿದ ದೇಶ ಮೊದಲ ಪ್ರಕರಣ ಇದು ಎಂದು ಹೇಳಬಹುದು. ಸದ್ಯ ಉತ್ತೀರ್ಣನಾಗಿರುವ ರಾಜುಲಾ ತಾನು ಪೊಲೀಸ್ ಪಡೆಗೆ ಸೇರಲು ಬಯಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನೂ ಓದಿ :ಪರೀಕ್ಷೆ ಪಾಸ್​ ಮಾಡಲು ದೈಹಿಕ​ ಸಂಬಂಧ ಬೆಳೆಸುವಂತೆ ವಿದ್ಯಾರ್ಥಿನಿಗೆ ಶಿಕ್ಷಕನ ಬೇಡಿಕೆ: ವಿಡಿಯೋ ವೈರಲ್​

ABOUT THE AUTHOR

...view details