ಮಹಾರಾಷ್ಟ್ರ: ಮಾದಕವಸ್ತು ಕಳ್ಳಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಮಹಾರಾಷ್ಟ್ರ ಅಲ್ಪಸಂಖ್ಯಾತ ವ್ಯವಹಾರ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ಅವರ ಅಳಿಯ ಸಮೀರ್ ಖಾನ್ನನ್ನು ನಾರ್ಕೋಟಿಕ್ಸ್ ಕಂಟ್ರೋಲ್ ಬ್ಯೂರೋ (ಎನ್‌ಸಿಬಿ) ಬುಧವಾರ ಬಂಧಿಸಿದೆ.
ಬಾಂದ್ರಾ (ಪಶ್ಚಿಮ)ದಲ್ಲಿ ಎನ್‌ಸಿಬಿ ನಡೆಸಿದ ದಾಳಿ ಸಂದರ್ಭದಲ್ಲಿ ಗಾಂಜಾವನ್ನು ವಶಪಡಿಸಿಕೊಂಡ ಬಗ್ಗೆ ಮತ್ತು ಖಾರ್ನಲ್ಲಿರುವ ಕರಣ್ ಸಜ್ನಾನಿ ಅವರ ನಿವಾಸದಿಂದ ಆಮದು ಮಾಡಿಕೊಂಡ ಗಾಂಜಾವನ್ನು ಪಡೆದ ಬಗ್ಗೆ ತನಿಖೆ ನಡೆಸುತ್ತಿರುವಾಗ ಸಮೀರ್ ಖಾನ್ ಕೈವಾಡ ಬೆಳಕಿಗೆ ಬಂದಿದೆ.