ಕರ್ನಾಟಕ

karnataka

ETV Bharat / bharat

ನವಾಬ್ ಮಲಿಕ್ ರಾಜೀನಾಮೆ ನೀಡಲ್ಲ.. ಆದರೆ, ಇತರೆ ಸಚಿವರಿಗೆ ಉಸ್ತುವಾರಿ ಹಂಚಿಕೆ.. ಜಯಂತ್ ಪಾಟೀಲ್ - ಸಚಿವ ನವಾಬ್ ಮಲಿಕ್ ರಾಜೀನಾಮೆ

ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಯಂತ್ ಪಾಟೀಲ್ ಶಂಕೆ ವ್ಯಕ್ತಪಡಿಸಿದರು. ಮಾ. 31ರಂದು ಆರ್ಥಿಕ ವರ್ಷವು ಕೊನೆಗೊಳ್ಳುತ್ತದೆ. ಆದರೆ, ನವಾಬ್ ಮಲಿಕ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ, ಮಾ. 31ರ ಮೊದಲು ಅವರ ಖಾತೆ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರ ಬಗ್ಗೆ ಇತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ..

Minister Jayant Patil
ಜಯಂತ್ ಪಾಟೀಲ್

By

Published : Mar 18, 2022, 12:30 PM IST

ಮುಂಬೈ(ಮಹಾರಾಷ್ಟ್ರ):ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಬಂಧಿತರಾಗಿರುವ ರಾಜ್ಯದ ಅಲ್ಪಸಂಖ್ಯಾತ ಮತ್ತು ಕೌಶಲ್ಯ ಅಭಿವೃದ್ಧಿ ಸಚಿವ ನವಾಬ್ ಮಲಿಕ್ ರಾಜೀನಾಮೆಯನ್ನು ರಾಜ್ಯ ಸರ್ಕಾರ ಅಂಗೀಕರಿಸುವುದಿಲ್ಲ. ಆದರೆ, ಅವರ ಖಾತೆಗಳನ್ನು ತಾತ್ಕಾಲಿಕವಾಗಿ ಇತರ ಸಚಿವರಿಗೆ ಹಸ್ತಾಂತರಿಸಲಾಗುವುದು ಎಂದು ನ್ಯಾಷನಲ್​ ಕಾಂಗ್ರೆಸ್ ಪಕ್ಷ (ಎನ್​​ಸಿಪಿ) ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್ ಹೇಳಿದ್ದಾರೆ.

ಕುರ್ಲಾದಲ್ಲಿ ಭೂಸ್ವಾಧೀನ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ನವಾಬ್ ಮಲಿಕ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಪ್ರಸ್ತುತ, ಅವರು ಗೊಂಡಿಯಾ ಮತ್ತು ಪರ್ಭಾನಿ ಜಿಲ್ಲೆಗಳ ಉಸ್ತುವಾರಿ ಸಚಿವರಾಗಿದ್ದಾರೆ.

ಈ ಪೈಕಿ ಶರದ್ ಪವಾರ್ ಅವರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಸಚಿವ ಧನಂಜಯ್ ಮುಂಡೆ ಅವರಿಗೆ ಪರ್ಭಾನಿ ಜಿಲ್ಲೆಯ ಉಸ್ತುವಾರಿ ಹಾಗೂ ರಾಜ್ಯ ಸಚಿವ ಪ್ರಜಕ್ತ್ ತನ್‌ಪುರೆ ಅವರಿಗೆ ಗೊಂಡಿಯಾ ಜಿಲ್ಲೆಯ ಉಸ್ತುವಾರಿ ಜವಾಬ್ದಾರಿ ನೀಡಲು ತೀರ್ಮಾನಿಸಲಾಗಿದೆ.

ಸದ್ಯ ಅವರು ಬಂಧನದಲ್ಲಿರುವುದರಿಂದ ಇತರೆ ಯಾವ ಸಚಿವರಿಗೆ ಇಲಾಖೆ ಜವಾಬ್ದಾರಿ ನೀಡಬಹುದು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ. ಮೂಲಗಳ ಪ್ರಕಾರ ಕೌಶಲ್ಯಾಭಿವೃದ್ಧಿ ಸಚಿವಾಲಯದ ಹೆಚ್ಚುವರಿ ಜವಾಬ್ದಾರಿಯನ್ನು ಆರೋಗ್ಯ ಸಚಿವ ರಾಜೇಶ್ ಟೋಪೆ ಅವರಿಗೆ ಮತ್ತು ಅಲ್ಪಸಂಖ್ಯಾತರ ಖಾತೆಯ ಹೆಚ್ಚುವರಿ ಜವಾಬ್ದಾರಿಯನ್ನು ಸಚಿವ ಜಿತೇಂದ್ರ ಅವ್ಹಾದ್ ಅವರಿಗೆ ನೀಡಲಾಗುವುದು.

ಈ ಸಂಬಂಧ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪ್ರಸ್ತಾವನೆ ಕಳುಹಿಸಲಾಗಿದೆ. ಮುಖ್ಯಮಂತ್ರಿ ಒಪ್ಪಿಗೆ ನೀಡಿದ ಬಳಿಕ ಸಂಬಂಧಪಟ್ಟ ಇಲಾಖೆಯ ಜವಾಬ್ದಾರಿಯನ್ನು ಇತರೆ ಸಚಿವರಿಗೆ ವರ್ಗಾಯಿಸಲಾಗುವುದು. ನವಾಬ್ ಮಲಿಕ್ ಅವರು ರಾಜ್ಯ ಸರ್ಕಾರದಲ್ಲಿ ಹೊಣೆಗಾರಿಕೆಯಿಲ್ಲದ ಸಚಿವರಾಗಿ ಉಳಿಯಲಿದ್ದಾರೆ ಎಂದು ತಿಳಿದು ಬಂದಿದೆ.

ನವಾಬ್ ಮಲಿಕ್ ಮತ್ತು ಅನಿಲ್ ದೇಶಮುಖ್ ಅವರನ್ನು ಪ್ರಕರಣಗಳಲ್ಲಿ ಸಿಲುಕಿಸುವ ಪ್ರಯತ್ನ ನಡೆಯುತ್ತಿದೆ ಎಂದು ಜಯಂತ್ ಪಾಟೀಲ್ ಶಂಕೆ ವ್ಯಕ್ತಪಡಿಸಿದರು. ಮಾ. 31ರಂದು ಆರ್ಥಿಕ ವರ್ಷವು ಕೊನೆಗೊಳ್ಳುತ್ತದೆ. ಆದರೆ, ನವಾಬ್ ಮಲಿಕ್ ಪ್ರಸ್ತುತ ನ್ಯಾಯಾಂಗ ಬಂಧನದಲ್ಲಿರುವುದರಿಂದ, ಮಾ. 31ರ ಮೊದಲು ಅವರ ಖಾತೆ ಮತ್ತು ಜಿಲ್ಲೆಯ ಉಸ್ತುವಾರಿ ಸಚಿವರ ಬಗ್ಗೆ ಇತರ ನಿರ್ಧಾರಗಳನ್ನು ತೆಗೆದುಕೊಳ್ಳಬೇಕಾಗಿದೆ.

ಅದಕ್ಕಾಗಿಯೇ ಎನ್‌ಸಿಪಿಯಿಂದ ನವಾಬ್ ಮಲಿಕ್ ಅವರ ಜವಾಬ್ದಾರಿಯನ್ನು ಇತರ ಸಚಿವರಿಗೆ ನೀಡುವ ಬಗ್ಗೆ ಸಭೆಯಲ್ಲಿ ಚರ್ಚಿಸಲಾಯಿತು ಎಂದು ಜಯಂತ್ ಪಾಟೀಲ್ ಹೇಳಿದರು. ಗುರುವಾರ ಸಂಜೆ ಮುಂಬೈನಲ್ಲಿರುವ (ಸಿಲ್ವರ್ ಓಕ್) ಎನ್‌ಸಿಪಿ ಅಧ್ಯಕ್ಷ ಶರದ್ ಪವಾರ್ ಅವರ ನಿವಾಸದಲ್ಲಿ ಹಿರಿಯ ಎನ್‌ಸಿಪಿ ನಾಯಕರ ಸಭೆ ನಡೆಯಿತು.

ಸಭೆಯಲ್ಲಿ ರಾಜ್ಯಾಧ್ಯಕ್ಷ ಜಯಂತ್ ಪಾಟೀಲ್, ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಹಣಕಾಸು ಸಚಿವ ಅಜಿತ್ ಪವಾರ್, ಸಚಿವ ಧನಂಜಯ್ ಮುಂಡೆ, ಸಚಿವ ಜಿತೇಂದ್ರ ಅವ್ಹಾದ್, ಸಂಸದೆ ಸುಪ್ರಿಯಾ ಸುಳೆ, ಸಚಿವ ಛಗನ್ ಭುಜಬಲ್ ಮತ್ತು ಎನ್‌ಸಿಪಿ ಹಿರಿಯ ನಾಯಕ ಪ್ರಫುಲ್ ಪಟೇಲ್ ಉಪಸ್ಥಿತರಿದ್ದರು.

ಇದನ್ನೂ ಓದಿ:ಮನಿ ಲಾಂಡ್ರಿಂಗ್​ ಕೇಸ್​: ಸಚಿವ ನವಾಬ್ ಮಲಿಕ್​​ರನ್ನು 3 ದಿನ ಇಡಿ ವಶಕ್ಕೆ ಒಪ್ಪಿಸಿದ ಕೋರ್ಟ್​​​​

ABOUT THE AUTHOR

...view details