ಸೋಲಾಪುರ :ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎನ್ಸಿಪಿ ನಾಯಕ ಹಾಗೂ ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಅವರನ್ನು ಪಿಎಂಎಲ್‌ಎ ನ್ಯಾಯಾಲಯವು ಮಾರ್ಚ್ 3 ರವರೆಗೆ ಜಾರಿ ನಿರ್ದೇಶನಾಲಯದ ಕಸ್ಟಡಿಗೆ ವಹಿಸಿದೆ.
ಮಹಾರಾಷ್ಟ್ರ ಸಚಿವ ನವಾಬ್ ಮಲಿಕ್ ಬಂಧನ ಇಡಿ ಅಧಿಕಾರಿಗಳಿಂದ ಬಂಧನಕ್ಕೆ ಒಳಪಟ್ಟ ನಂತರ ಮಾತನಾಡಿದ ನವಾಬ್ ಮಲಿಕ್, 'ನಾವು ಬಂಧಿತರಾಗಿದ್ದೇವೆ. ಆದರೆ, ಹೆದರುವುದಿಲ್ಲ. ಹೋರಾಡಿ ಗೆಲ್ಲುತ್ತೇವೆ' ಎಂದಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಾವೂದ್ ಸೋದರಿ ಹಸಿನಾ ಪಾರ್ಕ್ ಮನೆ ಮೇಲೆ ಇಡಿ ದಾಳಿ ನಡೆಸಿತ್ತು. ಅಲ್ಲದೇ, ಇಂದು ದಾವೂದ್ ಸೋದರ ಇಕ್ಬಾಲ್ ಕಸ್ಕರ್ ಅವರನ್ನು ವಶಕ್ಕೆ ಪಡೆದಿತ್ತು. ಇದಾದ ನಂತರ ಅವರನ್ನು ವಿಚಾರಣೆಗೊಳಪಡಿಸಿ ಬಂಧನಕ್ಕೆ ಒಳಪಡಿಸಿದ್ದಾರೆ.
ಮಾಹಿತಿ ಪ್ರಕಾರ, ಇಡಿಯಿಂದ ವಿಚಾರಣೆಗೆ ಒಳಗಾಗಿರುವ ಮಲಿಕ್ ಅವರಿಗೆ ಬ್ಯಾಂಕ್ ವ್ಯವಹಾರ, ಹಣ ವರ್ಗಾವಣೆ, ಆಸ್ತಿ ಡೀಲ್ ಬಗ್ಗೆ ಮಾಹಿತಿ ಕೇಳಲಾಗಿತ್ತು ಎಂಬುದು ತಿಳಿದುಬಂದಿದೆ.
ಭೂಗತ ಜಗತ್ತಿನಲ್ಲಿ ನಡೆಯುತ್ತಿರುವ ಹಲವಾರು ಲಿಂಕ್, ಹವಾಲಾ ಚಟುವಟಿಕೆ ಸೇರಿದಂತೆ ಮನಿ ಲ್ಯಾಂಡ್ರಿಂಗ್ ಪ್ರಕರಣಕ್ಕೆ ಸಂಬಂಧಿಸಿದಂತೆ ಇಡಿ ಹುಡುಕಾಟ ನಡೆಸುತ್ತಿದೆ. ಅಲ್ಲದೇ, ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ರಾಜಕೀಯ ಲಿಂಕ್ಗಳನ್ನು ಸಹ ಪತ್ತೆ ಹಚ್ಚಲು ಇಡಿ ಪ್ರಯತ್ನಿಸುತ್ತಿದೆ. ಈ ಹಿಂದೆ ಮನಿ ಲ್ಯಾಂಡ್ರಿಂಗ್ ಪ್ರಕರಣದ ಕುರಿತ ಇಡಿ ತನಿಖೆಯು ರಾಜಕೀಯ ಪ್ರೇರಿತ ಎಂದು ನವಾಬ್ ಮಲಿಕ್ ಹೇಳಿದ್ದರು.
ಓದಿ:ನವಾಬ್ ಮಲಿಕ್ ವಿಚಾರಣೆ ಮುನ್ನ ಇಡಿ ಯಾವುದೇ ಮಾಹಿತಿ ನೀಡಿರಲಿಲ್ಲ: ಜಯಂತ್ ಪಾಟೀಲ್